ಇಂದು ಬರಲಿದೆ ಪಾದರಾಯನಪುರ ಪುಂಡರ ಬಂಧಿಸಿದ್ದ ಪೊಲೀಸರ ಕೊರೊನಾ ಪರೀಕ್ಷಾ ವರದಿ
ಬೆಂಗಳೂರು, ಏ. 27,ಪಾದರಾಯನಪುರ ಗಲಭೆ ಪ್ರಕರಣ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯ ಕೋವಿಡ್ ಸೋಂಕಿನ ಪರೀಕ್ಷೆ ವರದಿ ಇಂದು ಬರಲಿದೆ. ಪರೀಕ್ಷೆಗೆ ಒಳಪಟ್ಟಿರುವ ಸಿಬ್ಬಂದಿ ಕುರಿತು ಗೃಹ ಇಲಾಖೆ ಕೂಡ ಆತಂಕದಲ್ಲಿದೆ. ಕಳೆದ ಏಪ್ರಿಲ್ 19 ರಂದು ಕೊರೊನಾ ವೈರಸ್ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಪಾದರಾಯನಪುರ ಪುಂಡರನನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದಿದ್ದಾಗ ಹಲ್ಲೆ ನಡೆದಿತ್ತು.
ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿ ಮೂಲಕ ಶಂಕಿತರನ್ನು ವಶಕ್ಕೆ ಪಡೆದು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ್ದಾಗ 5 ಪುಂಡರಲ್ಲಿ ಸೋಂಕು ಪತ್ತೆಯಾಗಿದೆ. ಪಾದರಾಯನಪುರದಲ್ಲಿ ಈವರೆಗೆ ಒಟ್ಟು 25 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
ಹೀಗಾಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ 186ಕ್ಕೂ ಹೆಚ್ಚು ಪೊಲೀಸರಿಗೆ ಕೂಡ ಕೊರೊನಾ ವೈರಸ್ ತಪಾಸಣೆಗೆ ಥ್ರೋಟ್ ಸ್ವಾಬ್ ಪರೀಕ್ಷೆಗೆ ಒಳಪಡಿಸಲಾಗಿದೆ. ಪೊಲೀಸರಿಗೆ ಮಾಡಲಾಗಿದ್ದ ಕೊರೊನ ತಪಾಸಣೆಯ ವರದಿ ಇವತ್ತು ಬರಲಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಕೂಡ ಸ್ವಲ್ಪ ಆತಂಕದಲ್ಲಿದ್ದಾರೆ. ಕಿಡಿಗೇಡಿಗಳ ಪತ್ತೆಗೆ ಶ್ರಮಿಸಿದ್ದ ಪಶ್ಚಿಮ, ಕೇಂದ್ರ, ಉತ್ತರ ವಿಭಾಗ ಹಾಗೂ ಸಿಸಿಬಿ ಪೊಲೀಸರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ಮೈಸೂರು ರಸ್ತೆಯ ಸಿಎಆರ್ ಮೈದಾನದಲ್ಲಿ ಕೋವಿಡ್-19 ಪರೀಕ್ಷೆಗೊಳಪಟ್ಟಿದ್ದ 186 ಪೊಲೀಸರು. ಸೋಂಕಿತರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಯಿರುವ ಎಲ್ಲ ಸಿಬ್ಬಂದಿಯ ಮಾದರಿ ಸಂಗ್ರಹ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ 83 ಆರೋಪಿಗಳನ್ನು ಜಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ಹೀಗಾಗಿ ಸಿಸಿಬಿ ಪೊಲೀಸರು ಕೂಡ ಪರೀಕ್ಷೆಗೆ ಒಳಗಾಗಿದ್ದಾರೆ.
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ 