ಮಾಸ್ಕೋ, ಜ 27, ಚೀನಾದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಕೊರೋನಾ ವೈರಾಣು ಸೋಂಕು ತಗುಲಿ ಮೃತಪಟ್ಟವರ ಸಂಖ್ಯೆ 80 ಕ್ಕೆ ಏರಿಕೆಯಾಗಿದೆ. ಈ ಪೈಕಿ 70 ಕ್ಕೂ ಹೆಚ್ಚು ಸಾವು ಹುಬೈ ಪ್ರಾಂತ್ಯದಲ್ಲಿ ಸಂಭವಿಸಿದ್ದು ಆ ಪ್ರದೇಶದಲ್ಲಿಯೇ ಈ ಸೋಂಕು ಮೊದಲು ಕಾಣಿಸಿಕೊಂಡಿದೆ ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ. ಸೋಮವಾರ ಮುಂಜಾನೆವರೆಗೆ ಚೀನಾದಲ್ಲಿ ಈ ಸೋಂಕಿಗೆ 80 ಜನರು ಬಲಿಯಾಗಿದ್ದಾರೆ. ಹುಬೈಯಲ್ಲಿ ಈ ಸೋಂಕಿನ 1,423 ಪ್ರಕರಣಗಳು ದಾಖಲಾಗಿದ್ದು ಇತರೆಡೆ 2454 ಪ್ರಕರಣಗಳು ದಾಖಲಾಗಿವೆ. ಚೀನಾ ಸೇರಿದಂತೆ ವಿಶ್ಚದೆಲ್ಲೆಡೆ ಈ ಸೋಂಕು ಪ್ರಕರಣಗಳ ಸಂಖ್ಯೆ 2504 ಎಂದು ವರದಿಯಾಗಿದೆ.ಹಾಂಗ್ ಕಾಂಗ್‌ನಲ್ಲಿ ಆರು, ಮಕಾವುದಲ್ಲಿ ಐದು, ತೈವಾನ್‌ನಲ್ಲಿ ಮೂರು ಪ್ರಕರಣಗಳು ದೃಢಪಟ್ಟಿದ್ದು ಏಷ್ಯಾದ ಉಳಿದೆಡೆ 24 ಪ್ರಕರಣಗಳು ದಾಖಲಾಗಿವೆ. ಯುರೋಪಿನಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದರೆ, ಉತ್ತರ ಅಮೆರಿಕಾದಲ್ಲಿ ಐದು ಪ್ರಕರಣಗಳು ದೃಢಪಟ್ಟಿವೆ.