ಕೊರೊನಾ ಪರೀಕ್ಷೆಗಳನ್ನು ಮೂರು ಪಟ್ಟು ಹೆಚ್ಚಿಸಲಾಗುವುದು; ಗೃಹ ಸಚಿವ ಅಮಿತ್ ಶಾ

ನವದೆಹಲಿ,  ಜೂನ್,  ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ  ಕೊರೊನಾ  ಸೋಂಕಿನ   ವಿರುದ್ಧ   ಕೈಗೊಂಡಿರುವ  ಸಮರವನ್ನು  ಕೇಂದ್ರ ಸರ್ಕಾರ ಮತ್ತಷ್ಟು ತೀವ್ರಗೊಳಿಸಲಿದೆ.  ಮುಂದಿನ ೬ ದಿನಗಳಲ್ಲಿ ಕೊರೊನಾ  ಪರೀಕ್ಷೆಗಳ ಪ್ರಮಾಣವನ್ನು  ಮೂರು ಪಟ್ಟು ಹೆಚ್ಚಿಸಲಾಗುವುದು ಎಂದು ಕೇಂದ್ರ ಗೃಹ ವ್ಯವಹಾರಗಳ  ಸಚಿವ ಅಮಿತ್ ಶಾ  ಭಾನುವಾರ  ಘೋಷಿಸಿದ್ದಾರೆ. ಕೊರೊನಾ ವೈರಸ್  ಹಬ್ಬುವುದನ್ನು ತಡೆಯಲು  ಮುಂದಿನ ಎರಡು ದಿನಗಳಲ್ಲಿ   ಸೋಂಕು ಪರೀಕ್ಷೆಯನ್ನು  ದುಪ್ಪಟ್ಟುಗೊಳಿಸಲಾಗುವುದು.  ಆರು  ದಿನಗಳ ನಂತರ  ಮೂರು ಪಟ್ಟು ಹೆಚ್ಚಿಸಲಾಗುವುದು  ಎಂದು ಗೃಹ ಸಚಿವ ಅಮಿತ್ ಶಾ  ಟ್ವೀಟ್ ಮಾಡಿದ್ದಾರೆ. ಕೆಲ ದಿನಗಳ ನಂತರ  ದೆಹಲಿಯ ಕಂಟೈನ್ ಮೆಂಟ್ ವಲಯಗಳಲ್ಲಿನ  ಪ್ರತಿ ಮತಗಟ್ಟೆಯಲ್ಲಿ ಕೊರೊನಾ ಪರೀಕ್ಷಾ ಸೌಲಭ್ಯ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಕೋವಿಡ್ ರೋಗಿಗಳಿಗೆ  ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯ ಹಿನ್ನೆಲೆಯಲ್ಲಿ ದೆಹಲಿಗೆ ೫೦೦ ರೈಲ್ವೆ ಬೋಗಿಗಳನ್ನು ಪೂರೈಸಲು  ಸರ್ಕಾರ  ನಿರ್ಧರಿಸಿದೆ   ಎಂದು  ಅಮಿತ್  ಶಾ  ಪ್ರಕಟಿಸಿದ್ದಾರೆ. ಈ ರೈಲ್ವೆ ಬೋಗಿಗಳಲ್ಲಿ ೮,೦೦೦ ಹಾಸಿಗೆಗಳೊಂದಿಗೆ  ಸಂಪೂರ್ಣ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿವೆ ಎಂದು ಅವರು ವಿವರಿಸಿದ್ದಾರೆ.  ಗೃಹ ಸಚಿವ ಅಮಿತ್ ಶಾ  ಅವರ ಅಧ್ಯಕ್ಷತೆಯಲ್ಲಿ   ಭಾನುವಾರ  ನಡೆದ ಪರಿಶೀಲನಾ  ಸಭೆಯಲ್ಲಿ ಈ ತೀರ್ಮಾನ  ಕೈಗೊಳ್ಳಲಾಗಿದೆ.   ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್, ದೆಹಲಿ ಲೆಪ್ಟಿನೆಂಟ್ ಗರ್ವನರ್ ಅನಿಲ್ ಬೈಜಾಲ್ ,  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉಪಸ್ಥಿತರಿದ್ದರು.ದೆಹಲಿಯಲ್ಲಿ ಈವರೆಗೆ  ೩೮,೯೫೮ ಕರೋನಾ ಪ್ರಕರಣಗಳು ದಾಖಲಾಗಿವೆ, ಅದರಲ್ಲಿ  ೨೨,೭೪೨  ನಗರದಲ್ಲಿ ವರದಿಯಾಗಿದ್ದು,  ಈವರೆಗೆ ೧೪,೯೪೫  ಸೋಂಕಿತರು  ಚೇತರಿಸಿಕೊಂಡಿದ್ದು, ೧,೨೭೧ ಮಂದಿ ಮೃತಪಟ್ಟಿದ್ದಾರೆ.