ಬೆಂಗಳೂರು,
ಏ.18,ಜೀವ ಇದ್ದರೆ ಮಾತ್ರ ವ್ಯವಹಾರ, ರಾಜಕೀಯ. ಕೊರೊನಾ ಮನುಕುಲಕ್ಕೆ ಬಂದ
ಮಾರಿಯೇ ಹೊರತು, ಯಾವುದೇ ಜಾತಿ, ಧರ್ಮಕ್ಕೆ ಬಂದಿರುವ ಖಾಯಿಲೆ ಅಲ್ಲ ಎಂಬುದನ್ನು
ಆಡಳಿತ ಮಾಡುವ ಜನ ಮೊದಲು ಅರಿಯಬೇಕು, ನೋಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ
ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದ್ದಾರೆ . ಕೆಪಿಸಿಸಿ ಕಚೇರಿಯಲ್ಲಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸವಿತ ಸಮಾಜದ ಅಂಗಡಿಗಳನ್ನು ಮುಚ್ಚಲಾಗಿದೆ.
ಮಡಿವಾಳ ಡ್ರೈ ಕ್ಲೀನ್, ಡ್ರೈವರ್ ಅಡುಗೆ ಭಟ್ಟರು ಹೀಗೆ ಎಲ್ಲರೂ ಮನೆಯಲ್ಲಿ ಇದ್ದಾರೆ.
ಮೋದಿ ಇವರ ಬಗ್ಗೆಯೂ ಮಾತನಾಡಿಲ್ಲ ಹಳ್ಳಿಗಳಲ್ಲಿ ಬೀಡಿ ಕಟ್ಟುತ್ತಿದ್ದ ಹೆಣ್ಣು ಮಕ್ಕಳು
ಬಟ್ಟೆ ಹೊಲಿಯುವವರ ಮೀನುಗಾರರ ಬಗ್ಗೆಯಾಗಲಿ, ಮೋದಿ ಏಕೆ ಮಾತನಾಡುತ್ತಿಲ್ಲ ಎಂದು
ಪ್ರಶ್ನೆ ಮಾಡಿದರು. ರಸ್ತೆ ಬದಿ ಊಟ ಮಾರಿ ಜೀವಮಾಡುತ್ತಿದ್ದವರ ಬಗ್ಗೆಯೂ
ಕಾರ್ಯಕ್ರಮ ರೂಪಿಸಿಲ್ಲ. ದೇವಾಲಯದಲ್ಲಿ ಪೂಜೆ ಮಾಡಿ ಬದುಕುತ್ತಿದ್ದ ಪೂಜಾರಿಯ ಬದುಕಿನ
ಬಗ್ಗೆಯೂ ಸ್ಪಂದಿಸಿಲ್ಲ. ಕಾಲಜ್ಞಾನಿ ಕಾರ್ಮಿಕ ಸಚಿವರು ಎಲ್ಲಿದ್ದಾರೆ? ಎಲ್ಲವನ್ನೂ
ಸರಿಪಡಿಸಿ ಎಂದು ಕುಟುಕಿದರು.ಸರ್ಕಾರದ ತೀರ್ಮಾನಕ್ಕೆ ಬೇಷರತ್ ಬೆಂಬಲ
ನೀಡಲಾಗಿದೆ ಆದರೆ ಪ್ರಧಾನಮಂತ್ರಿಯವರಾಗಲಿ, ರಾಜ್ಯದ ನಾಯಕರಾಗಲಿ ಅಸಂಘಟಿತ ವಲಯದ
ಬಗ್ಗೆ ಒಂದೇ ಒಂದು ಮಾತನಾಡದಿರುವುದು ಬಹಳ ನೋವು, ಬೇಸರ ಉಂಟು ಮಾಡಿದೆ ಎಂದರು. ರೈತರು,ಹಮಾಲಿಗಳು,
ದರ್ಜಿಗಳು. ಬಡಿಗೇರ, ಕಮ್ಮಾರ, ಕುಂಬಾರ, ಮೀನುಗಾರ, ಸವಿತಾ ಸಮಾಜ ಸೇರಿ ಅನೇಕ ಕಾರ್ಮಿಕ
ವಲಯಗಳಿವೆ. ಇಂತಹ ಸಣ್ಣ ಸಣ್ಣ ಕಾರ್ಮಿಕರ ಬಗ್ಗೆ ಯಾರೂ ಮಾತನಾಡಿಲ್ಲ ಅವರ ನೆರವಿಗೂ
ಧಾವಿಸಿಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷರಾಗಿ ಮಾತನಾಡದೇ ಜನರ ಸಂಕಷ್ಟಗಳನ್ನರಿತು ಒಬ್ಬಜನಸಾಮಾನ್ಯನಾಗಿ ಮಾತನಾಡುತ್ತಿರುವಾಗಿ ಶಿವಕುಮಾರ್ ಒತ್ತಿ ಹೇಳಿದರು.
ನರೇಗಾ
ಯೋಜನೆಯಡಿ 10ಸಾವಿರ ಕೋಟಿ ರೂ. ಇದ್ದು, ಸರ್ಕಾರ ನರೇಗಾ ಕೂಲಿ ಕಾರ್ಮಿಕರಿಗೆ ಅದನ್ನು
ತಲುಪಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ 10 ಸಾವಿರ ರೂ ಕೊಡಬೇಕು.ಪ್ರತಿ
ಕಾರ್ಮಿಕನಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ರೈತರ ತರಕಾರಿ ಹೂವು ಹಣ್ಣು
ನಾಶವಾಗುತ್ತಿದೆ. ಈವರೆಗೂ ಅಧಿಕಾರಿಗಳು ಸರ್ವೆ ನಡೆಸಿಲ್ಲ.ತೋಟಗಾರಿಕೆ ಸಚಿವ ಹಾಗೂ
ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಕೆಪಿಸಿಸಿ ವತಿಯಿಂದ ಸಮೀಕ್ಷೆ ಮಾಡಲಾಗಿದೆ
ತೋಟಗಾರಿಕೆ ಸಚಿವ ನಾರಾಯಣ ಗೌಡರ ಮತಕ್ಷೇತ್ರ ಆರ್ ಪೇಟೆಮಾರುಕಟ್ಟೆಯಲ್ಲಿ ನಮ್ಮ ಶಾಸಕರು
ತರಕಾರಿ ಖರೀದಿ ಮಾಡಿದ್ದಾರೆ. ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತನ್ನಿ ಎಂದು
ಬಿ.ಸಿ.ಪಾಟೀಲ್ ಹೇಳುತ್ತಾರೆ. ಇದೇನಿದು , ಬಿ.ಸಿ.ಪಾಟೀಲ್ ಸಾಹೆಬರರೇ ನಿಮ್ಮ ನಂಬರ್
ಕೊಡಿ,. ಯಾರು ಯಾರ ಗಮನಕ್ಕೆ ತರಬೇಕು? ಎಂದೂ ಡಿಕೆಶಿ ಕುಟುಕಿದರು. ಎರಡೂ ಸರ್ಕಾರಗಳು ಅಸಂಘಟಿತ, ವೃತ್ತಿನಿರತ ವರ್ಗವನ್ನು ದೂರ ಇಟ್ಟಿದ್ದೇಕೆ? ಎಂದುಪ್ರಶ್ನಿಸಿದ ಅವರು, ಈ ಎಲ್ಲಾ ವೃತ್ತಿದಾರರಿಗೆ ಕನಿಷ್ಠ ಸಹಾಯವನ್ನಾದರೂ ಮಾಡಬೇಕು ಎಂದು ಆಗ್ರಹಪಡಿಸಿದರು . ಸಚಿವ ಸುರೇಶ್ ಕುಮಾರ್ ಅವರನ್ನು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷರು, ಹಳ್ಳಿಯಲ್ಲಿ ಯಾವ
ಆನ್ ಲೈನ್ ಇದೆ? ಅವರ ಬಳಿ ಲ್ಯಾಪ್ ಟಾಪ್ ಇದೆಯೇ? ಬಡಜನರಿಗೆ ಯಾವ ರೀತಿಸೌಲಭ್ಯ
ನಿಡಿದ್ದೀರಿ ಎಲ್ಲದ್ದಕ್ಕೂ ಆನ್ ಲೈನ್ ಎನ್ನುತ್ತೀರಿ. ಪಿಯುಸಿ ಕಾಲೇಜ್ ಮಕ್ಕಳಿಗೆ ಆನ್
ಲೈನ್ ಸ್ಟಡಿ ಎನ್ನುತ್ತೀರಿ ಎಂದು ವ್ಯಂಗ್ಯವಾಡಿದರು.ಈ ಸಂದರ್ಭದಲ್ಲಿ ಕೆಪಿಸಿಸಿ
ಕಾರ್ಯಾಧ್ಯಕ್ಷ ಅಬ್ದುಲ್ ಸಲೀಂ ಉಪಸ್ಥಿತರಿದ್ದರು.