ಕೊರೊನಾ ಭೀತಿ: ನೋಟು ಸುಟ್ಟುಹಾಕಿದ ಗ್ರಾಮಸ್ಥರು

ಕಲಬುರಗಿ, ಏ.11, ಕೊರೊನಾ ಭೀತಿ ಹಿನ್ನಲೆಯಲ್ಲಿ ರಸ್ತೆ ಮೇಲೆ ಬಿದ್ದಿದ್ದ ನೋಟುಗಳನ್ನು ಜನ ಸುಟ್ಟುಹಾಕಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಜಿಲ್ಲೆಯ ಆಳಂದ ತಾಲೂಕಿನ ಸುಂಟನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಯಾರೋ ಉಗುಳು ಹಚ್ಚಿ ನೋಟು ರಸ್ತೆ ಮೇಲೆ ಬೀಸಾಡಿ ಹೋಗಿರುವ ಶಂಕೆ ಹಿನ್ನೆಲೆ‌ಯಲ್ಲಿನೋಟುಗಳನ್ನು ಮುಟ್ಟದೇ ಕಟ್ಟಿಗೆಯಿಂದಲೇ ಸರಿಸಿ ಜನ ಸುಟ್ಟು ಹಾಕಿದ್ದಾರೆ.ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ  ಅಪರಿಚಿತ ಮೂವರು ವ್ಯಕ್ತಿಗಳು‌ ಸ್ವಲ್ಪ ಹೊತ್ತು‌ ಮೊಬೈಲ್ ನಲ್ಲಿ ಮಾತನಾಡಿ, ನಂತರ ನೋಟು‌ ಬಿಸಾಕಿ ಹೋಗಿರುವ ಕುರಿತು ಸ್ಥಳೀಯ ಮಹಿಳೆಯರು ಮಾಹಿತಿ ನೀಡಿದ್ದಾರೆ.  ನೋಟು ಎಸೆದು ತೆರಳಿದವರನ್ನು ಕಂಡ ತಕ್ಷಣ ಗ್ರಾಮದ ಮಹಿಳೆಯರು ನೋಟನ್ನು ಮಕ್ಕಳು ಮುಟ್ಟದಂತೆ ಮಣ್ಣು ಹಾಕಿ ಮುಚ್ಚಿದ್ದ ಬಳಿಕ‌ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ನಂತರ ಗ್ರಾಮಸ್ಥರು ಮಣ್ಣಲ್ಲಿ ಬಿದ್ದಿದ್ದ ನೋಟುಗಳನ್ನು  ಸುಟ್ಟುಹಾಕಿದ್ದಾರೆ ಎನ್ನಲಾಗಿದೆ.