ಚಿತ್ರದುರ್ಗ, ಏ 14, ರಾಜ್ಯದಲ್ಲಿ ಕರೊನ ಸೋಂಕು ಪತ್ತೆ ಮಾಡಲು 16 ಪ್ರಯೋಗಾಲಯಗಳು ಲಭ್ಯವಿದ್ದು, ಅಗತ್ಯ ಬಿದ್ದರೆ ಇವುಗಳ ಸಂಖ್ಯೆ ಹೆಚ್ಚು ಮಾಡುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಾದ್ಯಂತ ಕರೋನ ಸೋಂಕಿತರ ಪರೀಕ್ಷೆ ನಡೆಸಲು ಕಾರ್ಯಪಡೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.ಈ ವರೆಗೆ ರಾಜ್ಯದಲ್ಲಿ 247 ಕೋವಿಡ್-19 ಪಾಸಿಟೀವ್ ಪ್ರಕರಣ ಪತ್ತೆಯಾಗಿದ್ದು, 8 ಜನ ಮೃತಪಟ್ಟಿದ್ದಾರೆ. 60 ಜನ ಗುಣಮುಖರಾಗಿದ್ದಾರೆ ಎಂದು ವಿವರ ನೀಡಿದರು.ಇಲ್ಲಿಯತನಕ ಕರೋನ ಪರೀಕ್ಷೆಗಳನ್ನು ಪ್ರಾಥಮಿಕ ಹಂತದಲ್ಲಿ ಮಾಡಲಾಗುತ್ತಿತ್ತು. ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೆಕೆಂಡರಿ ಕಾಂಟ್ಯಾಕ್ಟ್ ಟೆಸ್ಟ್ ಮಾಡಿಸಲಾಗುತ್ತಿದೆ, ಸೋಂಕು ತಡೆಯಲು ಪ್ರಧಾನಿಯವರು ಸಪ್ತ ಸೂತ್ರ ಮುಂದಿಟ್ಟಿದ್ದಾರೆ . ಹಿರಿಯರು, ವಯಸ್ಸಾದವರನ್ನು ಕಾಳಜಿಯಿಂದ ನೊಡಿಕೊಳ್ಳಲು ಹೇಳಿದ್ದಾರೆ. ಹಸಿವಿನಿಂದ ಯಾರೂ ಬಳಲಬಾರದು. ಜನರ ಬಳಿ ಬಿಪಿಎಲ್ ಕಾರ್ಡ್ ಇರಲಿ ಇಲ್ಲದಿರಲಿ ಎಲ್ಲರಿಗೂ ಪಡಿತರ ನೀಡಲು ಸರ್ಕಾರ ಸೂಕ್ತ ನಿರ್ದೇಶನ ನೀಡಿದೆ, ಈ ಹಂತದಲ್ಲಿ ಯಾವುದೇ ಸಂಸ್ಥೆಗಳು ನೌಕರರನ್ನು ಕೆಲಸದಿಂದ ತೆಗೆಯಬಾರದು ಎಂದೂ ಸಚಿವರು ಹೇಳಿದರು.