ಕರೋನ ಹಾವಳಿ ಟ್ರಂಪ್, ಮ್ಯಾಕ್ರೋನ್ ಮಹತ್ವದ ಮಾತುಕತೆ

ವಾಷಿಂಗ್ಟನ್, ಮಾರ್ಚ್ 27, ಕರೋನ ಹಾವಳಿ  ಅದು ಜಗತ್ತಿನ ಆರ್ಥಿಕತೆ   ಮೇಲೆ ಉಂಟು ಮಾಡುತ್ತಿರುವ ಪರಿಣಾಮದ ಬಗ್ಗೆ ಅಮೆರಿಕ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು  ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್  ಮಹತ್ವದ ಮಾತುಕತೆ ಮಾಡಿದ್ದಾರೆ .ಇಬ್ಬರು ನಾಯಕರು ಪರಸ್ಪರ ದೂರವಾಣಿಯಲ್ಲಿ ಮಾತನಾಡಿದ್ದು,  ಕರೋನವೈರಸ್ ಸಾಂಕ್ರಾಮಿಕ ರೋಗ ಮತ್ತು ಆರ್ಥಿಕ ಪರಿಣಾಮದ ವಿರುದ್ಧ ಹೋರಾಡುವ ಮಾರ್ಗೊಪಾಯಗಳ  ಬಗ್ಗೆ ಚರ್ಚಿಸಿದ್ದಾರೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ. ಅಧ್ಯಕ್ಷ . ಟ್ರಂಪ್  ಮತ್ತು ಫ್ರಾನ್ಸ್ ಅಧ್ಯಕ್ಷ  ಎಮ್ಯಾನುಯೆಲ್ ಮ್ಯಾಕ್ರೊನ್ ಅವರೊಂದಿಗೆ ಮಾತನಾಡಿ  ಕರೋನ ಹಾವಳಿ ಅದರ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಇತ್ತೀಚಿನ ಪ್ರಯತ್ನಗಳ ಬಗ್ಗೆ ಚರ್ಚಿಸಿದ್ದಾರೆ. ಜಿ 7, ಜಿ 20 ಮತ್ತು ನಿಕಟ ಸಹಕಾರದ ಮಹತ್ವವನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ.  ವಿಶ್ವ ಆರೋಗ್ಯ ಸಂಸ್ಥೆ, ಅಂತರರಾಷ್ಟ್ರೀಯ ಹಣಕಾಸು ನಿಧಿ, ಮತ್ತು ವಿಶ್ವಬ್ಯಾಂಕ್ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳು ಸಹಾಯ ಮಾಡುವಂತೆ ಇಬ್ಬರು ನಾಯಕರು ಆಗ್ರಹ ಪಡಿಸಿದ್ದಾರೆ.  ಉಭಯ  ನಾಯಕರು ಪ್ರಮುಖ ಪ್ರಾದೇಶಿಕ ಮತ್ತು ದ್ವಿಪಕ್ಷೀಯ ವಿಷಯಗಳ ಬಗ್ಗೆಯೂ ಚರ್ಚಿಸಿದರು ಎಂದು ಶ್ವೇತಭವನ ಹೇಳಿದೆ. ಈ ನಡುವೆ ,ಅಮೆರಿಕದಲ್ಲಿ ಕರೋನ ಸೋಂಕಿತರ ಸಂಖ್ಯೆ   81,782 ಏರಿಕೆಯಾಗಿದೆ