ಗೋಕುಲ ಮೆಟಾಟೆಕ್ ಪ್ರೈ. ಲಿ. ಫ್ಯಾಕ್ಟರಿಯಲ್ಲಿ ತಾಮ್ರ ಕಳ್ಳತನ: ಐವರ ಬಂಧನ

ಗೋಕುಲ ಮೆಟಾಟೆಕ್ ಪ್ರೈ. ಲಿ. ಫ್ಯಾಕ್ಟರಿಯಲ್ಲಿ ತಾಮ್ರ ಕಳ್ಳತನ: ಐವರ ಬಂಧನ Copper theft at Gokula Metatech Pvt. Ltd. factory: Five arrested

962 ಕೆಜಿ ತಾಮ್ರದ ಅಂದಾಜು ಮೌಲ್ಯ 9,41,640 ರೂ., ವಾಹನ ಅಂದಾಜು ಮೌಲ್ಯ 2,50,000ರೂ., ಕಬ್ಬಿಣದ ರಾಡ್ ಒಟ್ಟು 11,91,640ರೂ. ಮೌಲ್ಯದ ವಸ್ತುಗಳ ಜಪ್ತಿ 

ಬೆಳಗಾವಿ 28: ಗೋಕುಲ ಮೆಟಾಟೆಕ್ ಪ್ರೈ. ಲಿ. ಫ್ಯಾಕ್ಟರಿಯಲ್ಲಿ ತಾಮ್ರ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. 

ಬೆಳಗಾವಿ ಮಾರ್ಕಾಂಡೇಯ ನಗರ ನಿವಾಸಿಗಳಾದ ರಮೇಶ ಉರ್ಫ ರಾಮು ನಾಗಪ್ಪಾ ಧುಳಪ್ಪಗೋಳ, ಲಗಮಪ್ಪಾ ಬಸಪ್ಪಾ ಯರಗಾಣಿ, ನಾವಗೆ ಕ್ರಾಸ ನಿವಾಸಿಗಳಾದ ವಾಹನ ಚಾಲಕ ಸಂತೋಷ ಉರ್ಫ ಬಲ್ಯಾ ಗಣೇಶ ನಾಯಕ, ಸೋಮಯ್ಯ ಅಡವಯ್ಯಾ ಹಿರೇಮಠ, ಪ್ರಜ್ವಲ ವಿರುಪಾಕ್ಷಿ ಕಂಬಿ ಬಂಧಿತ ಆರೋಪಿಗಳಾಗಿದ್ದಾರೆ. 

ಬೆಳಗಾವಿ ಗ್ರಾಮೀಣ ಭಾಗದ ವಾಘವಾಡೆ ಗ್ರಾಮದ ವ್ಯಾಪ್ತಿಯಲ್ಲಿರುವ ಗೋಕುಲ ಮೆಟಾಟೆಕ್ ಪ್ರೈ. ಲಿ. ಫ್ಯಾಕ್ಟರಿಯಲ್ಲಿ ತಾಮ್ರ ಕಳ್ಳತನವಾಗಿದೆ ಎಂದು ಮ್ಯಾನೇಜರ ಪ್ರಕಾಶ ರಾಯಪ್ಪಾ ಮೇದಾರ ಅವರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

 ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಹಾಗೂ ಬೆಳಗಾವಿ ಗ್ರಾಮೀಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ನೀರೀಕ್ಷಕರಾದ ನಾಗನಗೌಡ ಕಟ್ಟಿಮನಿಗೌಡ್ರ ಮತ್ತು ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ದೂರಿನ ಕುರಿತು ತನಿಖೆ ಆರಂಭಿಸಿ ಜೂನ್  8ರಂದು ರಾತ್ರಿ ಸಮಯಕ್ಕೆ ಫ್ಯಾಕಟ್ರಿಯ ಸ್ಟೋರ್ ರೂಮಿನ ಕೀಲಿ ಒಡೆದು ರೂಮಿನಲ್ಲಿಟ್ಟಿದ್ದ ತಾಮ್ರ ತುಂಬಿದ ಚೀಲಗಳನ್ನು ಕಳ್ಳತನ ಮಾಡಿಕೊಂಡು ಸದರಿ ವಾಹನದಲ್ಲಿ ಮಾಲನ್ನು ಮಾರಾಟ ಮಾಡಲು ಮಹಾರಾಷ್ಟ್ರ ಕೊಲ್ಲಾಪೂರ ಕಡೆಗೆ ಹೋಗುವಾಗ ದಿ. ಜುಲೈ 25ರಂದು ಠಾಣೆ ವ್ಯಾಪ್ತಿಯ ಪೀರನವಾಡಿ ನಾಕಾದಲ್ಲಿ ತಪಾಸಣೆ ಮಾಡುವಾಗ ತಾಮ್ರದ ಚೀಲಗಳನ್ನು ತುಂಬಿದ ಒಂದು ವಾಹನ ಸಂಶಯಾಸ್ಪದವಾಗಿ ಕಂಡುಬಂದಾಗ ಪಿಐ ನಾಗನಗೌಡ ಕಟ್ಟಿಮನಿಗೌಡ್ರ ಅವರು 5ಜನ ಆರೋಪಿಗಳನ್ನು ಬಂಧಿಸಿ ಸುಮಾರು 962 ಕೆಜಿ ತಾಮ್ರದ ಅಂದಾಜು ಮೌಲ್ಯ 9,41,640 ರೂ. ಟಾಟಾ ಕಂಪನಿಯ ಪಿಕಪ್ ಗೂಡ್ಸ ವಾಹನ(ಕೆ.ಎ.-22/ಬಿ-9670ಅಂದಾಜು ಮೌಲ್ಯ 2,50,000ರೂ. ಮತ್ತು ಕಬ್ಬಿಣದ ರಾಡ್ ಹೀಗೆ ಒಟ್ಟು 11,91, 640ರೂ. ಮೌಲ್ಯದ ವಸ್ತುಗಳನ್ನು ಜಪ್ತ ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಈ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಅವರು ಶ್ಲಾಘಿಸಿದ್ದಾರೆ.