ಸಹಕಾರಿ ಸಂಘಗಳು ಮಧ್ಯವರ್ತಿಗಳ ಶೋಷಣೆಯಿಂದ ರೈತರನ್ನು ರಕ್ಷಿಸುತ್ತದೆ: ಎಸ್.ಜಿ. ಪಾಟೀಲ
Cooperative societies protect farmers from exploitation by middlemen: S.G. Patil
ಲೋಕದರ್ಶನ ವರದಿ
ಧಾರವಾಡ 03 : ಮಧ್ಯವರ್ತಿಗಳ ಶೋಷಣೆಯಿಂದ ರೈತರನ್ನು ರಕ್ಷಿಸಲು 1905 ರಲ್ಲಿ ಭಾರತದಲ್ಲೇ ಮೊಟ್ಟ ಮೊದಲ ಪತ್ತಿನ ಸಹಕಾರಿ ಸಂಘವು ಅವಿಭಜಿತ ಧಾರವಾಡ ಜಿಲ್ಲೆಯ ಗದಗ ತಾಲೂಕ ಕಣಗಿನ ಹಾಳದಲ್ಲಿ ಸಿದ್ಧನಗೌಡ್ರು ಪಾಟೀಲರಿಂದ ಸ್ಥಾಪನೆಯಾಗಿದ್ದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಕೆ.ಸಿ.ಸಿ. ಬ್ಯಾಂಕ್ ವಿಶ್ರಾಂತ ಪ್ರಧಾನ ವ್ಯವಸ್ಥಾಪಕ ಎಸ್.ಜಿ. ಪಾಟೀಲ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ‘ಪ್ರೊ.ಎಸ್.ಎಸ್. ದೇಸಾಯಿ ದತ್ತಿ’ ಕಾರ್ಯಕ್ರಮದಲ್ಲಿ ‘ಅನುಪಮ ಸಹಕಾರಿ ಪ್ರಶಸ್ತಿ’ ಪ್ರದಾನ ಹಾಗೂ ‘ಉತ್ತರ ಕರ್ನಾಟಕದ ಆರ್ಥಿಕ ಬೆಳವಣಿಗೆಯಲ್ಲಿ ಕೆ.ಸಿ.ಸಿ.ಬ್ಯಾಂಕ್ ಪಾತ್ರ’ ವಿಷಯ ಕುರಿತು ಮಾತನಾಡುತ್ತಿದ್ದರು.
ಸಹಕಾರಿ ಸಂಘಗಳ ಉದ್ದೇಶ ‘ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ, ನಾವು ನಿಮಗಾಗಿ ನೀವು ನಮಗಾಗಿ’ ಎಂಬ ಸಹಕಾರಿ ತತ್ವದಂತೆ ಕಾರ್ಯನಿರ್ವಹಿಸುತ್ತವೆ. ಮೊದಲು ಕೆ.ಸಿ.ಸಿ.ಬ್ಯಾಂಕ್ 4 ಜಿಲ್ಲೆಗಳ ವ್ಯಾಪ್ತಿ ಹೊಂದಿತ್ತು. ನಂತರ ಅವಿಭಜಿತ ಧಾರವಾಡ ಜಿಲ್ಲೆಗೆ ಸೀಮಿತವಾಯಿತು. ಮೊದಲು ಬಾಡಿಗೆ ಕಟ್ಟಡದಲ್ಲಿದ್ದ ಬ್ಯಾಂಕ್ ತದನಂತರ ಸುಸಜ್ಜಿತ ಸ್ವಂತಕಟ್ಟಡ ಹೊಂದಿತು. ದಿ. ಶಾಂತವೀರ್ಪ ಮೆಣಸಿನಕಾಯಿ, ವಿ.ಎಸ್. ಬಸವನಾಳರಂತಹ ಮುತ್ಸದ್ಧಿಗಳ ಶ್ರಮದಿಂದ ಬ್ಯಾಂಕ್ ರಾಜ್ಯದಲ್ಲೇ ಮಾದರಿಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹೆಗ್ಗಳಿಕೆಗೆ ಪಾತ್ರವಾಯಿತು.
ದಿ. ಪಿ.ಎಲ್. ಪಾಟೀಲ 16 ವರ್ಷ ಕೆ.ಸಿ.ಸಿ ಬ್ಯಾಂಕ್‌ಅಧ್ಯಕ್ಷರಾಗಿ ಸ್ಮರಣೀಯ ಸೇವೆ ಸಲ್ಲಿಸಿದರು. ಬ್ಯಾಂಕ್ ಒಂದು ಕಾಲದಲ್ಲಿ ಆರ್ಥಿಕ ಸಂಕಷ್ಟದಲ್ಲಿತ್ತು. ಇಂದು ಬ್ಯಾಂಕ್‌ಅತ್ಯಂತ ಪ್ರಗತಿಪಥದಲ್ಲಿದ್ದು ಇಂದು ಅಲ್ಪಾವಧಿ ಮಧ್ಯಮಾವಧಿ ಹಾಗೂ ಧೀರ್ಘಾವದಿ ಸಾಲ ನೀಡಿರೈತರಿಗೆ ವರದಾನವಾಗಿದೆ. ಬ್ಯಾಂಕ್‌ಇಂದು ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ 63ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.328 ಕೋಟಿ ನಿವ್ವಳ ವಾರ್ಷಿಕ ಲಾಭದಲ್ಲಿದೆ ಎಂದು ಹೇಳಿದರು.
ಸಿ.ಎಸ್. ಪಾಟೀಲ ಅನುಪಮ ಸಹಕಾರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕೆ.ಸಿ.ಸಿ.ಬ್ಯಾಂಕ್ ಒಂದುಕಾಲದಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದಾಗ ನಾವೆಲ್ಲಾ ಸಂಘಟಿತ ಹೋರಾಟ ಮಾಡಿ ಸರಕಾರದಿಂದ 68 ಕೋಟಿ ನೆರವು ಪಡೆದು ರೈತರ ಠೇವಣಿದಾರರ ಹಿತರಕ್ಷಣೆ ಮಾಡಲು ಸಾಧ್ಯವಾಯಿತು. ಸಮಾಜ ಹಾಗೂ ಸಹಕಾರಿಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಶಾಂತವೀರ್ಪ ಮೆಣಸಿನಕಾಯಿ, ವಿ.ಎಸ್. ಬಸವನಾಳ ಹಾಗೂ ರಾಮಜಾಧವ ಹೆಸರಿನಿಂದ ಕವಿವ ಸಂಘ ಸ್ವಯಂ ಪ್ರೇರಿತವಾಗಿ ಸಂಘದಲ್ಲಿದತ್ತಿ ಸ್ಥಾಪಿಸಿ ಸ್ಮರಿಸುವಂತಾಗಬೇಕೆಂದರು.
ಡಾ. ಮಲ್ಲಿಕಾರ್ಜುನ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸರೋಜಿನಿ ದೇಸಾಯಿ, ಶಂಕರ ಕುಂಬಿ, ಡಾ.ಸಂಜೀವ ಕುಲಕರ್ಣಿಇದ್ದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶತುರಮರಿ ನಿರೂಪಿಸಿದರು.ವೀರಣ್ಣಒಡ್ಡೀನ ವಂದಿಸಿದರು.ಶಿವಾನಂದ ಹೂಗಾರ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಡಾ.ಎಸ್.ಆರ್.ರಾಮನಗೌಡ್ರ, ಪ್ರೊ.ಸಿ.ಆರ್.ಯರವಿನತೆಲಿಮಠ, ಬಿ.ಡಿ. ಪಾಟೀಲ, ಸುನೀಲ ಪಾಟೀಲ, ಡಾ. ಲಿಂಗರಾಜ ಅಂಗಡಿ, ಶಂಭುಲಿಂಗ ಶಿವಳ್ಳಿ, ಎಸ್.ಜಿ. ಚಿಕ್ಕೋಡಿ, ಡಾ. ಮಾರ್ಕಂಡೇಯ ದೊಡಮನಿ, ಮಾಮಲೆ ದೇಸಾಯಿ, ಬಸಯ್ಯ ಶಿರೋಳ ಹಾಗೂ ಪ್ರೊ.ಎಸ್.ಎಸ್. ದೇಸಾಯಿ ಪರಿವಾರದವರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 