ಸಹಕಾರಿ ಬ್ಯಾಂಕ್ಗಳು ರೈತರ ಪಾಲಿಗೆ ವರದಾನ: ಶಿವಾನಂದ ಎಸ್. ಪಾಟೀಲ್
Cooperative banks are a boon to farmers: Shivananda S. Patil
ವಿಜಯಪುರ 16 : ಸಹಕಾರಿ ಬ್ಯಾಂಕ್ಗಳು ರೈತರ ಪಾಲಿಗೆ ವರದಾನವಾಗಿವೆ ಎಂದು ಮಾಜಿ ಸಚಿವ, ಬಸವನ ಬಾಗೇವಾಡಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಎಸ್. ಪಾಟೀಲ್ ಹೇಳಿದರು. ಬಬಲೇಶ್ವರ ತಾಲ್ಲೂಕಿನ ಕಾತರಾಳ ಗ್ರಾಮದಲ್ಲಿ ಶನಿವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರಿಗೆ ಸಾಲ ಸಿಗುವುದು ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಮಾತ್ರ. ಸಣ್ಣ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್ಗಳು ಸಾಲ ನೀಡಲು ಹಿಂದೇಟು ಹಾಕುತ್ತವೆ. ಸಂಕಷ್ಟದಲ್ಲಿದ್ದಾಗಲೂ ಸಹಕಾರಿ ಸಂಘಗಳ ಸಾಲ ಮನ್ನಾ ಯೋಜನೆಗಳು ರೈತರಿಗೆ ಅನುಕೂಲವಾಗಿವೆ. ರಾಜ್ಯದ 65 ಲಕ್ಷ ರೈತರ ಪೈಕಿ ಸುಮಾರು 35 ಲಕ್ಷ ರೈತರು ಸಹಕಾರಿ ಸಂಘಗಳ ಮೂಲಕ ಸಾಲ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ರೈತರೇ ಸಾಲ ನೀಡುವ ಮಟ್ಟಕ್ಕೆ ಬೆಳೆದು ನಿಲ್ಲಬೇಕು. ದೇಶದಲ್ಲಿ ರೈತರ ಬೆಳೆಗಳಿಗೆ ಸ್ಥಿರ ಬೆಲೆ ನಿಗದಿಯಾದರೆ ಮಾತ್ರ ಅವರ ಪ್ರಗತಿ ಸಾಧ್ಯ. ನೀರಾವರಿ ಸೌಲಭ್ಯದಿಂದಾಗಿ ತೋಟಗಾರಿಕೆ ಹಾಗೂ ಹೈನುಗಾರಿಕೆ ಹೆಚ್ಚಾಗಿದ್ದು, ಹೆಚ್ಚಿನ ರೈತರು ಬ್ಯಾಂಕ್ಗಳಲ್ಲಿ ವಹಿವಾಟು ನಡೆಸುವಂತಾಗಿದೆ ಎಂದರು.
ಜಿಲ್ಲೆಯ 270 ಸಹಕಾರಿ ಸಂಘಗಳ ಪೈಕಿ 250 ಸಂಘಗಳು ಸ್ವಂತ ಕಚೇರಿ ಹೊಂದಿದ್ದು, ರಾಜ್ಯದಲ್ಲಿಯೇ ವಿಜಯಪುರ ಜಿಲ್ಲೆ ದಾಖಲೆ ನಿರ್ಮಿಸಿದೆ. ನೀರಾವರಿ ಯೋಜನೆಗಳಿಂದ ಭೂಮಿಗೆ ನೀರು ದೊರೆತ ಪರಿಣಾಮ ಜಿಲ್ಲೆಯ ರೈತರು ಸಮೃದ್ಧರಾಗಿದ್ದಾರೆ. 27 ಪ್ಯಾಕೇಜ್ಗಳ ಮೂಲಕ ಸಂಪೂರ್ಣ ನೀರಾವರಿ ಯೋಜನೆ ಸಾಕಾರಗೊಳ್ಳುವ ಕನಸು ಈಡೇರಲಿದೆ ಎಂದು ಅವರು ಹೇಳಿದರು.
ಸಹಕಾರಿ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿದ ಕೈಗಾರಿಕೆ, ಮೂಲಸೌಕರ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್, ನೀರಾವರಿ ಯೋಜನೆಗಳಿಂದ ಜಿಲ್ಲೆಯ ರೈತರ ಬದುಕಿನಲ್ಲಿ ಸಮೃದ್ಧಿ ಬಂದಿದೆ. ಅಕ್ಷಯ ಕಲ್ಪ ಯೋಜನೆಯ ಮೂಲಕ ಪ್ರತಿ ಬಿಎಲ್ಡಿಇ ಸಂಸ್ಥೆಯಿಂದ ಸಹಾಯಧನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ನ ನೆರವನ್ನೂ ಪಡೆಯುತ್ತೇವೆ. ಅಭಿವೃದ್ಧಿ ವಿಷಯದಲ್ಲಿ ನಮ್ಮಲ್ಲಿ ಒಗ್ಗಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಗುರುಲಿಂಗಪ್ಪ ಅಂಗಡಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಡಿ.ಜಿ. ಬಿರಾದಾರ, ಬ್ಯಾಂಕ್ಗೆ ಭೂಮಿ ನೀಡಿದ ಶಾಂತಾಬಾಯಿ ಗೌಡತಿಯವರ ಪುತ್ರ ಹಿರೇಪಡಸಲಗಿ ಪಿ.ಕೆ.ಪಿಎಸ್ ಮಾಜಿ ಅಧ್ಯಕ್ಷ ಮಾದನಗೌಡ ಪಾಟೀಲ್, ಮಾನಿಂಗಪ್ಪಗೌಡ ಪಾಟೀಲ್, ಉಪಾಧ್ಯಕ್ಷೆ ಮಾಯವ್ವ ಗೋಡ್ಸೆ, ಸಹಕಾರ ಇಲಾಖೆ ಉಪನಿಬಂಧಕಿ ಎಸ್.ಕೆ. ಭಾಗ್ಯಶ್ರೀ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವಿಕಾಸ ರಾಠೋಡ್, ಡಿಸಿಸಿ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಸತೀಶ ಪಾಟೀಲ್, ತರಬೇತಿ ಸಂಯೋಜಕ ಆರ್.ಎಂ. ಬಣಗಾರ, ಎಂ.ಡಿ. ಪಡಸಲಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 