ಸಹಕಾರ ಸಂಘದ ಅಭಿವೃದ್ಧಿಗೆ ಸಹಕಾರ ಅಗತ್ಯ : ಹೆಚ್.ಜಗದೀಶ
Cooperation is necessary for the development of cooperative societies: H. Jagadeesh
ಕಂಪ್ಲಿ:ಆ.17. ಪಟ್ಟಣದ ಶಾರದಾ ಶಾಲೆಯ ಮೇಲ್ಭಾಗದಲ್ಲಿರುವ ಸಂಘದ ಕಛೇರಿ ಆವರಣದಲ್ಲಿ ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ 2024-25ನೇ ಸಾಲಿನ 22ನೇ ವಾರ್ಷಿಕ ಮಹಾಜನ ಸಭೆಯು ಸಂಘದ ಅಧ್ಯಕ್ಷ ಹೆಚ್.ಜಗದೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿ ಮಾತನಾಡಿ, ಸಂಘವು ಅಭಿವೃದ್ಧಿಯೊಂದಿಗೆ ಉತ್ತುಂಗಕ್ಕೆ ಬೆಳೆಯಲಿ ಎಂದರು.
ಸಂಘದ ಅಧ್ಯಕ್ಷ ಹೆಚ್.ಜಗದೀಶ ಮಾತನಾಡಿ, ಸಂಘವು 12457 ಜನ ಸದಸ್ಯರನ್ನು ಹೊಂದಿದ್ದು, ಸುಮಾರು 8.9 ಕೋಟಿ ಶೇರು ಬಂಡವಾಳ ಇದೆ. ಮತ್ತು 75.61 ಕೋಟಿ ಠೇವಣಿ ಸಂಗ್ರಹಿಸಿದೆ. ಸಂಘವು 4.13.69.900 ರೂ.ಗಳ ನಿವ್ವಳ ಲಾಭಗಳಿಸಿದೆ. ಸಹಕಾರ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಟಿ.ಕೊಟ್ರೇಶ, ನಿರ್ದೇಶಕರಾದ ಡಿ.ವೀರ್ಪ, ವಾಲಿ ಕೊಟ್ರ್ಪ, ಕೆ.ಸಣ್ಣ ಗವಿಸಿದ್ದಪ್ಪ, ಚಂದ್ರಶೇಖರ ಬಣಗಾರ, ಹೆಚ್.ಮಂಜುನಾಥ, ಟಿ.ವೀರನಗೌಡ, ಕವಿತಾಳ ಚನ್ನಪ್ಪ, ವೀರನಗೌಡ ಎಸ್.ಪಾಟೀಲ್, ಸಿ.ಹೆಚ್.ಪಕ್ಕೀರ್ಪ, ಎನ್.ಯಂಕಪ್ಪ ಕೆ.ಉಷಾರಾಣಿ, ಮುಖ್ಯ ಕಾರ್ಯನಿರ್ವಾಹಕ ಎಂ.ಲೋಕೇಶ್ವರರೆಡ್ಡಿ, ಮುಖಂಡರಾದ ರಾಮಲಾಲ್ ಶೇಟ್, ವಾಗೀಶ್, ವಿದ್ಯಾಧರ, ಕರಿಬಸವನಗೌಡ ಸೇರಿದಂತೆ ಸಂಘದ ಸಿಬ್ಬಂದಿ ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 