ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸಹಕಾರ ಅಗತ್ಯ

ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸಹಕಾರ ಅಗತ್ಯ  Cooperation is essential for the development of the Sangama Cooperative Sugar Factory

ಲೋಕದರ್ಶನ ವರದಿ 

ಹುಕ್ಕೇರಿ 27 : ರೈತರ ಜೀವನಾಡಿ ತಾಲೂಕಿನ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯವನ್ನು ಹೆಚ್ಚಿಸಿದಾಗ ಮಾತ್ರ ರೈತರಿಗೆ ಆರ್ಥಿಕವಾಗಿ ನೆರವಾಗಲು ಸಾಧ್ಯ ಎಂದು ಭಾರತೀಯ ರಾಷ್ಟ್ರೀಯ ಸಹಕಾರಿ ಒಕ್ಕೂಟ, ದೆಹಲಿಯ ನೂತನ ನಿರ್ದೇಶಕರು, ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ಅವರು ಸೋಮವಾರ ತಾಲೂಕಿನ ಹಿಡಕಲ್ ಡ್ಯಾಂ   ಸಂಗಮ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಕಬ್ಬು ಬೆಳೆಗಾರರು, ಕಾರ್ಮಿಕ ವರ್ಗದವರು  “ರಾಷ್ಟ್ರೀಯ ಸಹಕಾರಿ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆ ಪ್ರಯುಕ್ತ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

"ವಿಶ್ವಾಸವಿದ್ದರೆ ಮಾತ್ರ ಸಹಕಾರ" ಕಾರ್ಖಾನೆಯು ಆರ್ಥಿಕ ಸಂಕಷ್ಟದಲ್ಲಿದ್ದಾಗ ಆಡಳಿತ ಮಂಡಳಿಯವರ ವಿನಂತಿಯ ಮೇರೆಗೆ   ಬೀರೇಶ್ವರ ಸೌಹಾರ್ದ ಸಹಕಾರಿಯಿಂದ ಸಾಲ ನೀಡಿ ಆರ್ಥಿಕವಾಗಿ ಸಹಾಯ ಮಾಡಲಾಗಿದೆ. "ಪ್ರಸಕ್ತ ವರ್ಷದಲ್ಲಿ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯವನ್ನು ದಿನಕ್ಕೆ 5000 ಮೆ.ಟನ್‌ಗೆ ಹೆಚ್ಚಿಸಬೇಕು. ಜೊತೆಗೆ ಇಥೆನಾಲ್ ಉತ್ಪಾದನೆಯನ್ನು ವಿಸ್ತರಿಸಿದಲ್ಲಿ ಕಾರ್ಖಾನೆ ಅರ್ಥಿಕ ಅಭಿವೃದ್ದಿಗೆ ಪೂರಕವಾಗಲಿದೆ.   ಸಹಕಾರ ಕ್ಷೇತ್ರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಸಂಸದೆ ಶಶಿಕಲಾ ಜೊಲ್ಲೆ ಮಾತನಾಡಿ, "ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕರಾದ ಮಹಾಜನಶೆಟ್ಟಿ, ಮಲಾರಗೌಡ ಪಾಟೀಲ, ಗಂಗಾಧರ ಸ್ವಾಮಿ ತವಗಮಠ ಅವರ ಶ್ರಮ ಸ್ಮರಣೀಯ. ಈ ಕಾರ್ಖಾನೆ ನಿರ್ಮಾಣದಿಂದ ರೈತರಿಗೆ ಸೇವೆ ಮಾಡಲು ಅವಕಾಶ ಸಿಕ್ಕಿದೆ.  ಅಣ್ಣಾಸಾಹೇಬರು  ಕಾರ್ಖಾನೆ  ಮತ್ತಷ್ಟು ಬಲಪಡಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ 'ಸಹಕಾರವೇ ಶಕ್ತಿ' ಎಂಬ ತತ್ವ ಪ್ರಧಾನ ಅವರದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿರಲಿ, ಸಮಾಜ ಸೇವೆಯಲ್ಲಿರಲಿ, ಎಲ್ಲರಿಗೂ ನೆರವಾಗುವ ಮನೋಭಾವದಿಂದ ಅವರು ಕಾರ್ಯನಿರ್ವಹಿಸಿದ್ದಾರೆ" ಎಂದರು. 

ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, "ಕಾರ್ಖಾನೆಯು ಸಾಕಷ್ಟು ಏಳು-ಬೀಳುಗಳನ್ನು ಕಂಡಿದೆ. ಈ ಕಾರ್ಖಾನೆಯ ಅಭಿವೃದ್ಧಿಗೆ ಅಣ್ಣಾಸಾಹೇಬ ಜೊಲ್ಲೆ ನೀಡಿದ ಸಹಕಾರ ಸ್ಮರಣೀಯ. ರೈತರ ಕಬ್ಬಿನ ಬಿಲ್ ಪಾವತಿಸಲು ಆಗದ ಪರಿಸ್ಥಿತಿ ಇದ್ದಾಗ ಕೈಜೋಡಿಸಿದವರನ್ನು ಸದಾ ಸ್ಮರಿಸಬೇಕು. ಇಂತಹ ಸಹಕಾರಿ ಮನೋಭಾವದ ವ್ಯಕ್ತಿ ರಾಷ್ಟ್ರೀಯ ಸಹಕಾರ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ" ಎಂದರು.  ಈ ವೇಳೆ ಭಾರತೀಯ ರಾಷ್ಟ್ರೀಯ ಸಹಕಾರಿ ಒಕ್ಕೂಟದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೊಲ್ಲೆ ಮತ್ತು ಸಂಸದೆ ಶಶಿಕಲಾ ಜೊಲ್ಲೆ ಅವರನ್ನು ಕಾರ್ಖಾನೆ ಆಡಳಿತ ಮಂಡಳಿಯವರು ಸತ್ಕರಿಸಿ ಗೌರವಿಸಿದರು.  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು: 

ಉಪಾಧ್ಯಕ್ಷ ಬಸಗೌಡ ಪಾಟೀಲ, ನಿರ್ದೇಶಕರಾದ ಶಶಿಕಾಂತ ನಾಯಿಕ, ಅರ್ಜುನ ಪಾಟೀಲ, ಅಮರನಾಥ ಮಹಾಜನಶೆಟ್ಟಿ, ಸುಭಾಷ ಪಾಟೀಲ, ಸಂಪತ್ತಕುಮಾರ ಬಾಂಧುರ್ಗೆ, ಸುನೀಲ ಪರವತರಾವ, ಸಿದ್ಧಲಿಂಗಪ್ಪ ತರಬರ, ಸಂಗೀತಾ ಕರಗುಪ್ಪಿ, ರಾಜಶ್ರೀ ಕವಟಗಿಮಠ, ಶಾಂತಾದೇವಿ ತವಗಮಠ, ಮಹಾದೇವ ಶಿಂಗೆ, ಶಿವಪ್ಪ ಘಸ್ತಿ, ಲಗಮಣ್ಣ ಕೆಂಪಮಲಕಾರಿ, ಗೀರೀಶ ಮಿಶ್ರೀಕೋಟಿ, ವ್ಯವಸ್ಥಾಪಕ ರವೀಂದ್ರ ಪಾಟೀಲ, ಮುಖಂಡರಾದ ಕುನಾಲ ಪಾಟೀಲ, ಸಂಜಯ ಶಿರಕೋಳಿ, ಪವನ ಪಾಟೀಲ, ಆನಂದ ತವಗಮಠ, ಕಚೇರಿ ಅಧೀಕ್ಷಕ ಅಣ್ಣಾಪ್ಪಾ ಅಂಕತಗೇರಿಹಾಳ, ಲೆಕ್ಕ ವ್ಯವಸ್ಥಾಪಕ ಕುಮಾರ ಕ್ಯಾತನ್ನವರ, ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.