ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಬಲ ಆಕಾಂಕ್ಷಿ ಮಣ್ಣಣ್ಣವರ

ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಬಲ ಆಕಾಂಕ್ಷಿ  ಮಣ್ಣಣ್ಣವರ   Mannannavar, a strong aspirant for the District Congress Committee

ಲೋಕದರ್ಶನ ವರದಿ

ಶಿಗ್ಗಾವಿ  27 : ಪಟ್ಟಣದ ಪಾಟೀಲ ಕಲ್ಯಾಣ ಮಂಟಪದಲ್ಲಿ ನಡೆದ ಸಂಘಟನಾ ಸೃಜನ್ ಸಭೆಯಲ್ಲಿ ಆಂದ್ರ​‍್ರದೇಶದ ಮಾಜಿ ಶಾಸಕ ಹಾಗೂ ಎ ಐ ಸಿ ಸಿ ಉಸ್ತುವಾರಿ  ಶೇಕ್ ಮಸ್ತಾನ್ ಅಲಿ ಅವರಿಗೆ   ಅರ್ಜಿ ಸಲ್ಲಿಸಿದರು.  ಅಲಿ ಅವರೊಂದಿಗೆ ಸಂಭಾಷಣೆ ಮಾಡಿ ಕಳೆದ 20 ವರ್ಷಗಳಿಂದಲೂ ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಪಕ್ಷ ಮುನ್ನಡೆಸುವ ನಾಯಕರು ಇಲ್ಲದ ಸಂದರ್ಭದಲ್ಲಿ ನಂತರ ಪಕ್ಷದ ಸಂಘಟನೆಗಾಗಿ ವಿವಿಧ ತಾಲೂಕು ಜಿಲ್ಲೆಗಳಿಂದ ಬಂದಂತ ಪಕ್ಷದ ಮುಖಂಡರ ಜೊತೆ ಒಗ್ಗೂಡಿ ಸ್ಥಳೀಯ ಕಾರ್ಯಕರ್ತರೊಂದಿಗೆ ಪಕ್ಷದ ಸಂಘಟನೆ ಮತ್ತು ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಂತು ಸಂಘಟನೆ ಮಾಡಿದ್ದೇನೆ ಅಲ್ಲದೇ ಮಾಜಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರೊಂದಿಗೆ ಪಕ್ಷದ ಆದೇಶಗಳನ್ನು ಪಾಲಿಸಿ, ಪ್ರಮುಖವಾಗಿ ಬಿಜೆಪಿ ಪಕ್ಷದ   ಜನ ವಿರೋಧಿ ನೀತಿಗಳನ್ನು ನೇರವಾಗಿ ಖಂಡಿಸುತ್ತಾ ಪಕ್ಷದ ಸಂಘಟನೆ ಬಲಗೊಳಿಸಲು ಪ್ರಯತ್ನಿಸಿದ್ದು ಹಾಗೂ ಪಕ್ಷದಿಂದ ನನಗೇನು ಸಿಗುತ್ತದೆ  ಅನ್ನುವುದಕ್ಕಿಂತ ಪಕ್ಷಕ್ಕಾಗಿ ದುಡಿಯುವ ನನ್ನ ಪಕ್ಷ ನಿಷ್ಠೆಯನ್ನು ಕ್ಷೇತ್ರದಲ್ಲಿ ಸಾಮಾಜಿಕ ಜಾಲತಾಣಗಳನ್ನು ಪರೀಶೀಲಿಸಿ ಸರ್ವೆ ಮಾಡಿಸಿ ಅರ್ಜಿಯನ್ನು ಪರಿಗಣಿಸಿ ಅವಕಾಶ ಮಾಡುವಂತೆ ಮನವಿ ನನ್ನದಾಗಿದೆ.