ಅಪ್ರಾಪ್ತ ಬಾಲಕಿ ಅತ್ಯಾಚಾರಿಗೆ ಸಹಾಯ ಮಾಡಿದ ಆರೋಪಿಗಳಿಗೆ ಶಿಕ್ಷೆ
Convicted of aiding and abetting the rape of a minor girl
ಕೊಪ್ಪಳ ಏಪ್ರಿಲ್ 17: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಪ್ರಚೋದನೆ ನೀಡಿದ ಆರೋಪ ಸಾಭಿತಾಗಿದೆ ಎಂದು ಅತ್ಯಾಚಾರ ಎಸಗಿದ ಆರೋಪಿಯ ಸಂಬಂಧಿ ಆರೋಪಿತರಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೊ) ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.
ಕೊಪ್ಪಳ ತಾಲೂಕಾ ಗಿಣಿಗೇರಾ ಗ್ರಾಮದ ಪಿರ್ಯಾದಿದಾರರ ಅಪ್ರಾಪ್ತ ವಯಸ್ಸಿನ ಮಗಳು ಬಾಧಿತ ಬಾಲಕಿ ಇವಳೊಂದಿಗೆ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಪಂಜಾಬ ರಾಜ್ಯದ ಸರವನ್ ಸಿಂಗ ಇತನು ಒಂದು ವರ್ಷದಿಂದ ಬಾಧಿಳ ಮನೆಗೆ ಬಂದು ಹೋಗುತ್ತ ಬಾಧಿತಳೊಂದಿಗೆ ಸಲುಗೆಯಿಂದ ಮಾತನಾಡುತ್ತ ಬಾಲಕಿಗೆ ಮೈ ಕೈ ಮುಟ್ಟಿ ಪ್ರೀತಿಸುವುದಾಗಿ ಮತ್ತು ಮದುವೆಯಾಗುವುದಾಗಿ ಹೇಳುತ್ತ ದಿ: 14-10-2020 ರಂದು ಬೆಳಗಿನ ಜಾವ 1 ಗಂಟೆಗೆ ಮನೆಯ ಹತ್ತಿರ ಬಂದು ಮೊಬೈಲ್ ಮೂಲಕ ಕರೆ ಮಾಡಿ ಹೊರಗೆ ಕರೆದು ತನ್ನೊಂದಿಗೆ ಬರದಿದ್ದರೆ ಗಲಾಟೆ ಮಾಡುವುದಾಗಿ ಹೆದರಿಸಿ ಒಂದು ಟ್ಯಾಕ್ಸಿಯಲ್ಲಿ ಬಲವಂತವಾಗಿ ಕರೆದುಕೊಂಡು ಕೊಪ್ಪಳ, ಬಾಂಬೆ ಮೂಲಕ 2ನೇ ಆರೋಪಿ ಜೋಬನ್ ಸಿಂಗ ಇತನ ಸಹಾಯದಿಂದ ಪಂಜಾಬ ರಾಜ್ಯದ ಬಹಾನಿ ಬಡೆಸಾನ್ ಗ್ರಾಮಕ್ಕೆ ಕರೆದುಕೊಂಡು ಹೋಗಿ ಆರೋಪಿ 3-ಜಸ್ವಂತಸಿಂಗ, 4-ಸರಬ್ಬಿತ ಸಿಂಗ ಹಾಗೂ 5-ಜಗತಾರ ಸಿಂಗೆ ಇವರೊಂದಿಗೆ ಕೂಡಿ ಬಾಧಿತ ಬಾಲಕಿಗೆ 20 ವರ್ಷ ಎಂದು ನ್ಯಾಯಾಲಯದಲ್ಲಿ ಅಫಿಡೇವಿಟ್ ಮಾಡಿಸಿ ದಿ: 16-10-2020 ರಂದು ಬಾಬಾ ಬಕಲ್ ಗ್ರಾಮದಲ್ಲಿನ ಗಂಗಾ ಮಾತಾಜಿ ಮಂದಿರದಲ್ಲಿ ಮದುವೆಯಾಗಿ ಅಮೃತಸರ ಪಟ್ಟಣದ ಸುಖಜ್ಯೋತಿ ಡಾಬಾದಲ್ಲಿ ಒಂದು ಕೊಠಡಿಯನ್ನು ಬಾಡಿಗೆ ಮಾಡಿ 1ನೇ ಆರೋಪಿ ಸರವನ್ ಸಿಂಗ ಇತನು ಬಾಧಿತಳೊಂದಿಗೆ ದೈಹಿಕ ಅತ್ಯಾಚಾರ ಮಾಡಿರುತ್ತಾನೆ.
ಈ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳ ಗ್ರಾಮೀಣ ಪೋಲಿಸ ಠಾಣೆಯ ಶರಣಪ್ಪ ಅಂಗಡಿ ಎ.ಎಸ್.ಐ ಇವರು ಬಾಧಿತಳ ತಂದೆ ನೀಡಿದ ದೂರನ್ನು ಸ್ವೀಕರಿಸಿ ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ, ಮುಂದಿನ ತನಿಖೆಯನ್ನು ರವಿ ಉಕ್ಕುಂದ ಸಿಪಿಐ ಕೊಪ್ಪಳ ವೃತ್ತ ಇವರು ನಿರ್ವಹಿಸಿದ್ದು, ತನಿಖೆಯಲ್ಲಿ ಆರೋಪಿತನನ್ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಆರೋಪಿತರ ವಿರುದ್ಧ ಮಾನ್ಯ ನ್ಯಾಯಾಲಯಕ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವು ಸ್ಟೇ.ಎಸ್‌ಸಿ (ಪೋಕ್ಲೋ) ಸಂ: 09/2020 ರಲ್ಲಿ ದಾಖಲಾಗಿರುತ್ತದೆ. ವಿಚಾರಣಾ ಕಾಲಕ್ಕೆ 1ನೇ ಆರೋಪಿ ಸರವನಸಿಂಗ ಇತನು ಮೃತಪಟ್ಟಿರುತ್ತಾನೆ. ವಿಚಾರಣೆಯನ್ನು ನಡೆಸಿದ ಮಾನ್ಯ ನ್ಯಾಯಾಲಯ ಆರೋಪಿಯ ಕೃತ್ಯಕ್ಕೆ ಸಹಾಯ ಮಾಡಿದ 2ನೇ ಆರೋಪಿ ಜೋಬನ್ ಸಿಂಗ ಇತನ ಸಹಾಯದಿಂದ ಪಂಜಾಬ ರಾಹ ಬಹಾನಿ ಬಡೆಸಾನ್ ಗ್ರಾಮಕ್ಕೆ ಕರೆದುಕೊಂಡು ಹೋಗಿ ಆರೋಪಿ 3-ಜಸ್ವಂತಸಿಂಗ, 4-ಸರಜ್ಜಿತ ಸಿಂಗ ಹಾಗೂ ಜಗತಾರ ಸಿಂಗ ಇವರ ಮೇಲಿನ ಆರೋಪಣೆಗಳು ಸಾಭೀತಾಗಿವೆ ಎಂದು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ರೂ. 20,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೊ) ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು 2026ರ ಮಾರ್ಚ್ 28 ರಂದು ತೀರ್ು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಕರಾದ ಗೌರಮ್ಮ ದೇಸಾಯಿ ಅವರು ಸರ್ಕಾರದ ಪರ ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಕೊಪ್ಪಳ ಗ್ರಾಮೀಣ ಪೋಲಿಸ ಠಾಣೆಯ ಸಿಬ್ಬಂದಿ ಮಂಜುನಾಥ ಇವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಲ್ಲಿ ಸಾಕಷ್ಟು ಸಹಕರಿಸಿರುತ್ತಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 