ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ

ಲೋಕದರ್ಶನ ವರದಿ

ರಾಮದುರ್ಗ, 3: ಬಸವಾದಿ ಶರಣರು 12 ನೇ ಶತಮಾನದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಚಳುವಳಿ ಮಾಡಿದ್ದು ಜಗತ್ತಿನಲ್ಲಿಯೇ ಮೊಟ್ಟಮೊದಲು ಸಮಾಜವಾದನ್ನು ಹುಟ್ಟುಹಾಕಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಸಾಹಿತ್ಯಕ್ಕಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಸನ್ ನಯೀಂ ಸುರಕೋಡ ಅಭಿಮತ ವ್ಯಕ್ತಪಡಿಸಿದರು.

ಬುಧವಾರ ಸಂಜೆ ಪಟ್ಟಣದ ಸಕರ್ಾರಿ ನೌಕರರ ಭವನದಲ್ಲಿ ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಡಾ. ಸಿದ್ದಪ್ಪ ಕಟ್ಟೆಕಾರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾಹಿತಿ ಸುರಕೋಡ  ಸಮಾಜವಾದದ ಸಿದ್ಧಾಂತವು ಜನರ ಸಹಕಾರ ಮತ್ತು ಸಾಮೂಹಿಕ ಪ್ರಯತ್ನದಿಂದ ಜಾರಿಗೊಳ್ಳುತ್ತದೆ. ಸಮಾಜವಾದದ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರಗಳ ನೀತಿ ಅದನ್ನು ಧಮನ ಮಾಡುತ್ತಿರುವುದು ಖೇದಕರ ಸಂಗತಿ ಎಂದರು.

ಡಾ. ಆನಂದ ಲಾಲಸಂಗಿ ಅವರ 'ಲೋಹಿಯಾ ವಾದ ತಮಗೆ ಹೇಗೆ ಆಪ್ತವಾಯಿತು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ರಾಮ ಮನೋಹರ ಲೋಹಿಯಾ ಅವರು ಸಮ ಸಮಾಜದ ಕನಸು ಕಂಡವರು. ತಾವು ನಂಬಿದ್ದ ಸಮಾಜವಾದ ಸಿದ್ಧಾಂತ ಬಲವಾಗಿ ಪ್ರತಿಪಾದಿಸಿದ್ದರಿಂದ ನನಗೂ ಅದರತ್ತ ಒಲವು ಉಂಟಾಯಿತು. ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶ ಇಬ್ಭಾಗವಾದಾಗ ಕೆಲವರು ಒಂದುಗೂಡಿಸಲು ಪ್ರಯತ್ನಪಟ್ಟರು. ಆಗ ಲೋಹಿಯಾ ಅವರು ಕೇವಲ ದೇಶ ಮಾತ್ರ ಒಡೆಯದೆ ಮನಸ್ಸುಗಳು ಸಹ ಒಡೆದಿದ್ದರಿಂದ ಅಂತ ಮನಸ್ಸುಗಳನ್ನು ಕೂಡಿಸಲು ಅಸಾಧ್ಯವೆಂದು ಪ್ರತಿಪಾದಿಸಿದ್ದಾರೆ ಎಂದು ವಿವರಿಸಿದರು.

ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಸಕರ್ಾರವೇ ಮುಂದಾಗಿರುವುದು ಕನ್ನಡಕ್ಕೆ ಧಕ್ಕೆಯಾಗುವುದಿಲ್ಲವೆ ಎಂಬ ಪ್ರೊ.ಎಸ್.ಎಂ. ಸಕ್ರಿಯವರಿಗೆ ಪ್ರತಿಕ್ರಿಯಿಸಿ ಕನ್ನಡ ಭಾಷೆಯನ್ನು ಉಳಿಸಿವುದು ಕೇವಲ  ಸಾಹಿತಿಗಳು ಮತ್ತು ಜನರ ಜವಾಬ್ದಾರಿಯಲ್ಲ. ಅದು ಸಕರ್ಾರದ ಜವಾಬ್ದಾರಿ ಕೂಡ ಆಗಿದೆ, ಕನ್ನಡ ಅನುಷ್ಟಾನದಲ್ಲಿ ಸರಕಾರಗಳೇ ನಿರ್ಲಕ್ಷ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನುವಾದ ಸಾಹಿತ್ಯ, ರೈತ ಚಳಿವಳಿ, ದೇಶ ವಿಭಜನೆಯ ತಲ್ಲಣಗಳು ಹಾಗೂ ವರ್ತಮಾನದ ಸಾಹಿತ್ಯಿಕ ಸಂಘರ್ಷಗಳ ಕುರಿತು ಸಂವಾದದಲ್ಲಿ ತೀಕ್ಷ್ಣವಾಗಿ ಉತ್ತರ ನೀಡಿದರು.

ಪ್ರಾಚಾರ್ಯ ಪ್ರೊ. ಜೆ.ಎಸ್.ಚಿತಕೂರ, ರೈತ ಮುಖಂಡ ವೆಂಕಟೇಶ ಹಿರೇರಡ್ಡಿ, ಪ್ರಗತಿಪರ ಚಿಂತಕ ಎಸ್.ಬಿ.ಹಳ್ಳಿ, ಆನಂದ ಪಾಟೀಲ ಹಾಗೂ ವಿಜಯ್ ನಾಯ್ಕ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಶ್ರೀಶೈಲ ಕರಿಶಂಕರಿ ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕಾ ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ ಸಂವಾದ ನಿರ್ವಹಿಸಿದರು.

ಎಸ್.ಎಂ. ಕಲ್ಲೂರ ಸ್ವಾಗತಿಸಿದರು. ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎ.ವಿ.ಪಾಟೀಲ ನಿರೂಪಿಸಿದರು. ಶಿಕ್ಷಕ ಸುರೇಶ ಹುಚ್ಚನ್ನವರ ವಂದಿಸಿದರು.