ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ಸಮಾಲೋಚನೆ ಸಭೆ
Consultation meeting of Scheduled Caste Scheduled Tribe Employees Union
ಬೆಂಗಳೂರು 27 : ಒಂದು ಕಾಲದಲ್ಲಿ ದಲಿತರು ಬರುವರು ದಾರಿ ಬಿಡಿ ದಲಿತರಿಗೆ ರಜ್ಯ ಕೋಡಿ ಎಂದು ನಮ್ಮ ದಲಿತ ಸಂಘಟನೆಗಳು ಘೋಷಣೆಯಾಗಿತ್ತು ಅಂದು ಎಲ್ಲ ನೌಕರರು ಹೋರಾಟದಲ್ಲಿ ಭಾಗವಿಸಿದ್ದು ಇಂದು ನೌಕರರ ಸಂಘಟನೆ ಬಲಿಷ್ಠತೆಗೆ ಸದಸ್ಯತ್ವ ಪಡೆದು ನಾವೇಲ್ಲರೂ ಡಾ.ಅಂಬೇಡ್ಕರವರ ಸಿದ್ದಾಂತದ ತತ್ವದಡಿಯಲ್ಲಿ ನಾವೇಲ್ಲರೂ ಸಾಗಬೇಕಾಗಿದೆ ಸಂಘಟನೆಯ ಮೂಲಕ ನಾವು ಏನ್ನಾದರು ಸಾಧಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸರಕಾರಿ ಅರೆ ಸರಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಕಲ್ಯಾಣ ಸಂಘ ಬೆಂಗಳೂರು ಕೇಂದ್ರ ಸಮಿತಿ ರಾಜ್ಯಾಧ್ಯಕ್ಷರು ರಂಜೀತ್.ಬಿ.ಮಾನಕರ ಹೇಳಿದರು
ಅವರು ಕರ್ನಾಟಕ ರಾಜ್ಯ ಸರಕಾರಿ ಅರೆ ಸರಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಕಲ್ಯಾಣ ಸಂಘ ಬೆಂಗಳೂರು ಕೇಂದ್ರ ಸಮಿತಿ ಕಾನಿಷ್ಕ ಗ್ರಾ-್ಯಂಡ್ ಹೋಟೆಲ್ ಸಭಾಂಗಣ, ಗಾಂಧಿನಗರ ಬೆಂಗಳೂರು ನಲ್ಲಿ ರಾಜ್ಯ ಪದಾಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಸಮಾಲೋಚನೆ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ
ಸಂಘಟನೆಯಲ್ಲಿ ಸ್ವಾರ್ಥತೆ ಬದಿಗಿಟ್ಟು ನಿಸ್ವಾರ್ಥತೆಯಿಂದ ಸಂಘಟನೆಯಲ್ಲಿ ನೌಕರರ ಹಿತ ಚಿಂತನೆಯಿಂದ ನಾವೇಲ್ಲ ಸೇವೆ ಮಾಡಿ ಡಾ.ಬಾಬಾಸಾಹೇಬರವರ ಕೃಪೆಗೆ ಪಾತ್ರರಾಗಬೇಕು ಇಂದು ನಮ್ಮ ಸಂಘಟನೆಗೆ ಮಹಿಳೆಯೆರು ಹೆಚ್ಚು ಸಂಘದ ಸದಸ್ಯತ್ವವನ್ನು ಹೊಂದಿರುವುದು ನಮಗೆ ಹೆಮ್ಮೆಯ ಸಂಘತಿಯಾಗಿದೆ, ಸಂಘಟನೆ ಬಲಿಷ್ಠಗೊಂಡಾಗ ನಾವು ಸಂವಿಧಾನ ಬದ್ದ ಹಕ್ಕುಗಳನ್ನು ಮತ್ತು ನ್ಯಾಯಯುತವಾದ ಸವಲತ್ತುಗಳನ್ನು ಪಡೆಯಲು ಸಾಧ್ಯ ಆದ್ದರಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಸಂಘಟನೆಯ ಕಾರ್ಯಾಗಾರವನ್ನು ನಡೆಸಿ ನೌಕರರ ಹಿತ ಚಿಂಥನೆ ಮಾಡುವುದು ಪ್ರತಿಭಾ ಪುರಸ್ಕಾರ ಮಾಡುವುದು ಮತ್ತು ನೋಂದವರ ದ್ವನಿಯಾಗಿ ಕಾಯಕವನ್ನು ನಾವೇಲ್ಲರೂ ಮಾಡೋಣ ತಾವೇಲ್ಲ ಕೈಜೋಡಿಸಬೇಕೆಂದು ಹೇಳಿದರು
ಧಾರವಾಡ ಜಿಲ್ಲಾ ಅಧ್ಯಕ್ಷರಾದ ಡಾ. ಜಾನಕಿ ತೊರವಿ ಮಾತನಾಡಿ ನಾವು ಸಂಘಟನೆ ಬಲಿಷ್ಠಗೊಳಿಸಿದರೆ ಎಲ್ಲನೌಕರರರಲ್ಲಿ ಒಂದು ಆಗಾದ ಶಕ್ತಿ ಬರುತ್ತದೆ ಅದು ಭೀಮ ಶಕ್ತಿ, ಕೆಲವೋಂದು ಇಲಾಖೆಯಲ್ಲಿ ನಮಗೆ ತೊಂದರೆ ಕೋಡುವುವವರು ಇದ್ದೇ ಇರುತ್ತಾರೆ ಆದರೆ ನಮ್ಮಲ್ಲಿ ಸಂಘಟನೆಯ ಭೀಮ ಶಕ್ತಿ ಇದ್ದರೆ ಅವರು ನಮ್ಮ ಕಡೆ ತಿರುಗಿನೋಡವುದಿಲ್ಲ ಎಂದರು. ಪ್ರತಿಯೊಂದು ಜಿಲ್ಲೆಯಲ್ಲಿ ನಾವು ಸಂಘಟನೆಯನ್ನು ಕಟ್ಟಿ ನಮ್ಮ ದಲಿತ ನೌಕರರ ಕಷ್ಠ ಸು:ಖಕ್ಕೆ ನೋವು ನಲಿವುಗಳಿಗೆ ಭಾಗಿಯಾಗೋಣ ಎಂದು ಹೇಳಿದರು
ಕರ್ನಾಟಕ ರಾಜ್ಯ ಸರಕಾರಿ ಅರೆ ಸರಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಕಲ್ಯಾಣ ಸಂಘ ( ರಿ) ಬೆಂಗಳೂರು ರಾಜ್ಯ ಕಾರ್ಯದರ್ಶಿಗಳಾದ ಹೆಚ್ ಲಕ್ಷ-್ಮಣ್ ಮಾತನಾಡಿ ನಾವು ಡಾ.ಅಂಬೇಡ್ಕರವರು ಕೊಟ್ಟಂತಹ ಮೀಸಲಾತಿಯಲ್ಲಿ ಬದುಕುತ್ತಿದ್ದೇವೆ ಆದರೆ ಮೀಸಲಾತಿ ಬೇಕು ಆದರೆ ಸಂಘಟನೆಯಲ್ಲಿ ತಮ್ಮಲ್ಲೇರ ಕೊಡುಗೇ ಏನು ಎಂದು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ನೌಕರರ ಸಂಘಟನೆಯ ಮಹತ್ವದ ನಾವೇಲ್ಲ ಅರಿತುಕೊಳ್ಳಬೇಕಾಗಿದೆ ಒಬ್ಬ ದಲಿತ ನೌಕರರಿಗಾದಂತಹ ಅನ್ಯಾಯವನ್ನು ರಾಜ್ಯಾಧ್ಯಂತ ಖಂಡಿಸುವಂತಹ ಕಾರ‌್ಯಗಳು ಸಂಘಟನೆಯಿಂದ ನಡೇಯಬೇಕು ಆಗಾದಾಗ ಮಾತ್ರ ದಲಿತ ನೌಕರರನ್ನು ತೊಂದರೆ ತಪ್ಪುವುದು ಇಲ್ಲವಾದರೆ ಶೋಷಣೆ ದೌರ್ಜನ್ಯ ಧರ್ಗಳು ನಿರಂತವಗಿರುತ್ತದೆ ಎಂದು ನಾವೇಲ್ಲ ಅರಿತುಕೊಂಡು ಕರ್ನಾಟಕ ರಾಜ್ಯ ಸರಕಾರಿ ಅರೆ ಸರಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಕಲ್ಯಾಣ ಸಂಘವನ್ನು ಕಟ್ಟಿದ್ದೇವೆ ತಾವೇಲ್ಲರು ಸಂಘಟನೆ ಬಲಿಷ್ಠತೆಗೆ ನೌಕರರ ಹಿತಚಿಂತನೆಯನ್ನು ಬಯಸಿ ಸಂಘದ ಸದಸ್ಯರಾಗಬೇಕೆಂದು ಹೇಳಿದರು.
ವೇದಿಕೆಯ ಮೇಲೆ ಎ.ಟಿ.ಮಂಜುನಾಥ ಲತಾ ಶ್ರೀಮಂತ ತಮ್ಮಣ್ಣವರ ರಾಜ್ಯ ಕೋಶಾಧ್ಯಕ್ಷರು ನಾಗರಾಜ ಬಿ ಶ್ರೀಶೈಲ ಹೊಸಮನಿ ಶಿವಸ್ವಾಮಿ ಬಿ, ನಾಗರಾಜ್ ಬೈಕರ್ ರಾಜ್ಯ ಉಪಾಧ್ಯಕ್ಷರು ಸುರೇಶ್. ಆನಂದ್ ರಾಠೋಡ್ ಗ್ಯಾನಪ್ಪ ಛಲವಾದಿ ಎ.ಎ.ಅಳವುಂಡಿ ಸಿದ್ದಪ್ಪ ಎನ್ ಲಿಂಗದಾಳ ಮುಂತಾದವರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಧಾರವಾಡ ಅದ್ಯಕ್ಷರಾಗಿ ಡಾ.ಜಾನಕಿ ತೊರವಿ ವಿಜಯಪೂರ ಜಿಲ್ಲಾ ಅಧ್ಯಕ್ಷರಾದ ಡಾ.ಸಂದೀಪ್ ಸಜ್ಜನ್ ಗದಗ ಜಿಲ್ಲಾ ಅಧ್ಯಕ್ಷರಾಗಿ ಶಿದ್ದಪ್ಪ ಎನ್ ಲಿಂಗದಾಳ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 