ಹಾವೇರಿಯ ಪ್ರವಾಸ ಮಂದಿರದಲ್ಲಿ ಕಾಗಿನೆಲೆ ಕನಕ ನಿರಂಜನಾನಂದಪುರಿ ಸ್ವಾಮೀಜಿಗಳ ಸಮ್ಮುಖದಲ್ಲಿ ಸಮಾಲೋಚನಾ ಸಭೆ

ಹಾವೇರಿಯ ಪ್ರವಾಸ ಮಂದಿರದಲ್ಲಿ ಕಾಗಿನೆಲೆ ಕನಕ  ನಿರಂಜನಾನಂದಪುರಿ ಸ್ವಾಮೀಜಿಗಳ ಸಮ್ಮುಖದಲ್ಲಿ ಸಮಾಲೋಚನಾ ಸಭೆ  Consultation meeting in the presence of Kaginele Kanaka Niranjananandapuri Swamiji at Haveri Tourist

ಲೋಕದರ್ಶನ ವರದಿ 

ಹಾವೇರಿ 04 : ನಗರದ ಕಾಗಿನೆಲೆ ರಸ್ತೆ ಬಳಿಯ ಕನಕದಾಸ ವೃತ್ತವನ್ನು ಸಮಗ್ರ ಅಭಿವೃದ್ಧಿಗೊಳಿಸಿ ತಿಂಗಳೊಳಗೆ ದಾಸ ಶ್ರೇಷ್ಠ ಕನಕದಾಸ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಹಾವೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್ ಗಾಜೀಗೌಡ ತಿಳಿಸಿದರು. 

ಇಲ್ಲಿಯ ಪ್ರವಾಸ ಮಂದಿರದಲ್ಲಿ ಕಾಗಿನೆಲೆ ಶ್ರೀ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.  

ಕನಕದಾಸ ವೃತ್ತದ ಅಭಿವೃದ್ದಿಗಾಗಿ ನಗರಾಭಿವೃದ್ದಿ ಪ್ರಾಧಿಕಾರದಿಂದ 25ಲಕ್ಷ ರೂ., ಅನುದಾನ ಖರ್ಚು ಮಾಡುತ್ತಿದೆ. ಕನಕದಾಸರ ಮೂರ್ತಿಗೆ ನಗರದ ಗಣ್ಯರು ಸಹಾಯ ಧನವನ್ನು ನೀಡಲಿದ್ದಾರೆ ಎಂದರು. 

ಈಗಾಗಲೇ ಹೆಸ್ಕಾಂ ಅಧಿಕಾರಿಗಳು, ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಇಂಜನಿಯರ್‌ಗಳು ಕನಕದಾಸರ ವೃತ್ತ ಮತ್ತು ಮೂರ್ತಿ ಪ್ರತಿಷ್ಠಾಪನೆ ಮಾಡುವ ಸ್ಥಳವನ್ನು ಪರೀಶೀಲನೆ ಮಾಡಿದ್ದಾರೆ. ಮೂರ್ತಿ ಪ್ರತಿಷ್ಠಾನೆಗೆ ಶ್ರೀಕನಕದ ಕುರಿ ಮತ್ತು ಉಣ್ಣಿ ನೇಕಾರರ ಸಹಕಾರಿ ಸಂಘದವರು ಅಗತ್ಯ ಜಾಗವನ್ನು ಬಿಟ್ಟು ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು. ಈ ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನಿರಲಗಿ, ಅಪರ ಜಿಲ್ಲಾಧಿಕಾರಿ ನಾಗರಾಜ, ಪತ್ರಕರ್ತ ನಿಂಗಪ್ಪ ಚಾವಡಿ ಇತರರಿದ್ದರು.