ಸ್ವಾಗತ ಕಮಾನಗಳ ನಿರ್ಮಾಣಕ್ಕೆ ಮೊದಲ ಆದ್ಯತೆ: ದತ್ತಾ ವಾಸ್ಟರ್

ಸ್ವಾಗತ ಕಮಾನಗಳ ನಿರ್ಮಾಣಕ್ಕೆ ಮೊದಲ ಆದ್ಯತೆ: ದತ್ತಾ ವಾಸ್ಟರ್  Construction of welcome arches is top priority: Datta Vaster

ಸ್ವಾಗತ ಕಮಾನಗಳ ನಿರ್ಮಾಣಕ್ಕೆ ಮೊದಲ ಆದ್ಯತೆ: ದತ್ತಾ ವಾಸ್ಟರ್  

ಅಥಣಿ 05: ಪುರಸಭೆಗೆ ನೂತನವಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ದತ್ತಾ ವಾಸ್ಟರ್ ಇವರನ್ನು ಸ್ಥಾಯಿ ಸಮಿತಿ ಮೊದಲ  ಸಭೆಯಲ್ಲಿ ಸರ್ವ ಸದಸ್ಯರು ಸತ್ಕರಿಸಿದರು.   

      ಸನ್ಮಾನ ಸ್ವೀಕರಿಸಿ ಮೊದಲ ಸಭೆಯಲ್ಲಿ ಮಾತನಾಡಿದ ದತ್ತಾ ವಾಸ್ಟರ್,  ಪಟ್ಟಣದ ಎಲ್ಲ 27 ಸದಸ್ಯರ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆ ಹರಿಸಿ ಜನಪರ ಹಾಗೂ ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುವೆ ಎಂದ ಅವರು ಅಭಿವೃದ್ಧಿ ವಿಚಾರದಲ್ಲಿ ನಾವೆಲ್ಲರು ಒಂದಾಗಿರೋಣ ಎಂದು ಸರ್ವ ಸದಸ್ಯರಲ್ಲಿ ಮನವಿ ಮಾಡಿದರು.   

        ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಮಾರ್ಗದರ್ಶನದಲ್ಲಿ ಅಥಣಿ ಪ್ರವೇಶಿಸುವ ನಾಲ್ಕು ಮುಖ್ಯ ರಸ್ತೆಗಳಲ್ಲಿ ಸ್ವಾಗತ ದ್ವಾರಗಳನ್ನು ನಿರ್ಮಿಸುವ  ಕಾರ್ಯ ಅತೀ ಶೀಘ್ರದಲ್ಲಿಯೇ ಪ್ರಾರಂಭಿಸುತ್ತೇವೆ ಮತ್ತು ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಮಾರಾಟಗಾರರಿಂದ ಹೆಚ್ಚೂವರಿ ತೆರಿಗೆ ವಸೂಲಿ ಮಾಡುವುದನ್ನು ತಪ್ಪಿಸಲು ದರ ಪಟ್ಟಿಯುಳ್ಳ ಬೋರ್ಡಗಳನ್ನು ಅಳವಡಿಸಿದ್ದು, ಮಾರಾಟಗಾರರು ಬೋರ್ಡಗಳಲ್ಲಿನಷ್ಟೇ ಹಣ ಕೊಡಬೇಕು ಎಂದು ಮನವಿ ಮಾಡಿದರು.   

      ಸಭೆಯಲ್ಲಿ ಮಾತನಾಡಿದ ಪುರಸಭಾ ಸದಸ್ಯ ರಾವಸಾಹೇಬ ಐಹೊಳೆ, ನಿಮ್ಮ ಅಧ್ಯಕ್ಷ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಅನುಷ್ಢಾನಗೊಳ್ಳಲಿ ಎಂದ ಅವರು 11 ನೇ ವಾರ್ಡನ ರಸ್ತೆಗಳಲ್ಲಿ ತಗ್ಗು ಬಿದ್ದ ಪರಿಣಾಮ ಸಾರ್ವಜನಿಕರಿಗೆ ಸಾಕಷ್ಟು ಅನಾನಕೂಲವಾಗಿದ್ದು, ತಕ್ಷಣ ಕ್ರಮ ಜರುಗಿಸಿ ಎಂದು ಮನವಿ ಮಾಡಿದರು.   

      ಸದಸ್ಯ ವೀಲೀನರಾಜ ಯಳಮಲ್ಲೆ ಮಾತನಾಡಿ, ಪಟ್ಟಣದಲ್ಲಿ ಹಂದಿ, ನಾಯಿಗಳ ಸಂಖ್ಯೆ ಹೆಚ್ಚಾದ ಪರಿಣಾಮ ಸಾರ್ವಜನಿಕರಿಗೆ ಅತೀ ತೊಂದರೆಯಾಗಿತ್ತಿದ್ದು, ತಕ್ಷಣ ಅವುಗಳನ್ನು ನಿಯಂತ್ರಣಕ್ಕೆ ಕ್ರಮ ಜರುಗಿಸಿ ಎಂದು ಮನವಿ ಮಾಡಿದರು.   

       ವಾರ್ಡ ನಂಬರ 2 ಸದಸ್ಯ ಕಲ್ಲೇಶ ಮಡ್ಡಿ ಮಾತನಾಡಿ, ವಾರ್ಡಗಳಲ್ಲಿ ಬೀದಿ ದೀಪಗಳ ಕೊರತೆ ಇದೆ ಇದರಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಕ್ಷಣ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ದೀಪಗಳನ್ನು ಎಲ್ಲ 27 ವಾರ್ಡ ಗಳಿಗೂ ಮಂಜೂರು ಮಾಡಿಸಿ ಎಂದರು.  

      13 ನೇ ವಾರ್ಡ ಸದಸ್ಯ ಮಲ್ಲೇಶ ಹುದ್ದಾರ ಮಾತನಾಡಿ, ಪಟ್ಟಣದ ಎಲ್ಲ 27 ವಾರ್ಡಗಳಲ್ಲಿನ 10 ರಿಂದ 15 ಸಾವಿರ ವರೆಗಿನ ಸಣ್ಣ ಪುಟ್ಟ ಕೆಲಸಗಳಿಗೆ ಆದ್ಯತೆ ಕೊಡಿ ಎಂದರು. 20 ನೇ ವಾರ್ಡ ಸದಸ್ಯ ರಾಜಶೇಖರ ಗುಡೋಡಗಿ ಮಾತನಾಡಿ, ವಿಕ್ರಮಪುರ ಬಡಾವಣೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಯ ಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಎಂದ ಅವರು ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ ಹೊಡೆಸಿ ಎಂದರು.  

       ಸಭೆಯಲ್ಲಿ ಸಂತೋಷ ಸಾವಡಕರ, ಪ್ರಮೋದ ಬಿಳ್ಳೂರ, ಉದಯ ಸೋಳಸಿ, ರಿಯಾಜ ಸನದಿ, ಮಲ್ಲಿಕಾರ್ಜುನ ಬುಟಾಳಿ, ದೀಲೀಪ ಲೋಣಾರೆ, ಸೈಯ್ಯದಮೀನ್ ಗದ್ಯಾಳ, ತಿಪ್ಪಣ್ಣ ಭಜಂತ್ರಿ, ಬಸವರಾಜ ಹಳ್ಳದಮಳ, ಬೀರ​‍್ಪ ಯಕ್ಕಂಚಿ ಸೇರಿದಂತೆ ವ್ಯವಸ್ಥಾಪಕಿ ದಯಾ ಜೋಶಿ, ಕಂದಾಯ ವಿಭಾಗದ ಸಿದ್ದು ಮಾಂಗ, ಸಿಬ್ಬಂದಿ ರಾಜು ವಾಳವೇಕರ, ರವೀಂದ್ರ ಸಮಗೊಂಡ ಉಪಸ್ಥಿತರಿದ್ದರು.