ಸೂಕ್ತ ಪರಿಹಾರ ನೀಡದೇ ರೈತರ ಭೂಮಿಯಲ್ಲಿ ವಿದ್ಯುತ್ ಗೋಪುರ ನಿರ್ಮಾಣ

ಸೂಕ್ತ ಪರಿಹಾರ ನೀಡದೇ ರೈತರ ಭೂಮಿಯಲ್ಲಿ ವಿದ್ಯುತ್ ಗೋಪುರ ನಿರ್ಮಾಣ Construction of electricity towers on farmers' land without providing proper compensation

ಕುಕನೂರು 29: ಅವೈಜ್ಞಾನಿಕ ನಿರ್ಧಾರ ಮತ್ತು ರೈತರಿಗೆ ಅಸಮರ​‍್ಕ ಪರಿಹಾರ, ದಬ್ಬಾಳಿಕೆ ವಿರೋಧಿಸಿ ಪ್ರೈವೇಟ್ ಕಂಪನಿಯ ವಿರುದ್ಧ ರೈತ ಸಮೂಹ ಹಾಗೂ ಡಿಎಸ್‌ಎಸ್ ಭೀಮಘರ್ಜನೆ ಸಂಘಟನೆ ಸಹಯೋಗದಲ್ಲಿ ಅನಿರ್ದಿಷ್ಟಾವಧಿ ಮೌನ ಪ್ರತಿಭಟನೆ ನೆರವೇರಿಸಲಾಯಿತು. 

ಕುಕನೂರು ತಾಲೂಕಿನಲ್ಲಿ ಭೂ ರೈತರು, ಮಾಲೀಕರ ಜಮೀನುಗಳಲ್ಲಿ ಪ್ರೈವೇಟ್ ಕಂಪನಿಯು 220 ಕೆವಿ ಎಸ್ ಸಿ ಲೈನ್ ನಿರ್ಮಾಣ ಕಾಮಗಾರಿಯನ್ನು ಕೈಗೊಂಡಿದ್ದು. ಸದರಿ ಕಂಪನಿಯು ರೈತರ ಜಮೀನಗಳಲ್ಲಿ ನಿರ್ಮಾಣವಾಗಿರುವ ವಿದ್ಯುತ್ ಗೋಪುರ ಮತ್ತು ವೈಯರ್ ಲೈನ್‌ಗಳಿಗೆ ರೈತರಿಗೆ ಅವರ ಜಮೀಗಳಿಗೆ ಅನುಸಾರವಾಗಿ ಕಳೆಕೊಂಡ ಜಮೀನಿಗಳಿಗೆ ಸೂಕ್ತವಾದ ಪರಿಹಾರ ಕೊಡದೇ ತಮಗೆ ಅನೂಕೂಲವಾದ ರೈತರಿಗೆ ಹಾಗೂ ಪ್ರಭಾವಿ ರೈತರಿಗೆ ಹೆಚ್ಚಿನ ಪರಿಹಾರವನ್ನು ನೀಡಿ ನಮ್ಮಂತಹ. ಮುಗ್ಧ ರೈತರಿಗೆ ಕಡಿಮೆ ಪರಿಹಾರವನ್ನು ನೀಡಿದ್ದು ಸೂಕ್ತವಾದ ಪರಿಹಾರವನ್ನು ನೀಡಿಲು ಕಂಪನಿ, ಗುತ್ತಿಗೆದಾರರನ್ನು ಕೇಳಿದರೆ ನಿಮ್ಮ ಜಮೀನಿನ ಕಂಬದಲ್ಲಿ ಇನ್ನು ವೈರ್ ಲೈನ್ ಎಳೆಯಲು ಸಹಾಯಕವಾಗುವ ವ್ಹೀಲ್ ಗಳಿದ್ದು ಅವುಗಳನ್ನು ತೆಗೆಯುವಾಗ ತಮಗೆ ಬೇರೆ ರೈತಿಗೆ ಈಗಾಗಲೆ ಕೊಟ್ಟ ಪರಹಾರದ ಮೊತ್ತದಷ್ಟೆ ತಮಗೂ ಕೊಡುತ್ತೆವೆಂದು ಹೇಳಿದ್ದು, ನಂತರ ಈಗ ಲೈನ್ ಚಾರ್ಜ ಮಾಡಲು ಪತ್ರಿಕಾ ಪ್ರಕಟಣೆಯನ್ನು ನೀಡಿರುವುದು ಹಾಗೂ ವ್ಹೀಲ್ ತೆಗೆಯುವಾಗ ನಿಮ್ಮ ಪರಿಹಾರ ಮೊತ್ತವನ್ನು ಸಂಪೂರ್ಣವಾಗಿ ಕೊಡುತ್ತೇವೆಂದು ಹೇಳಿ ಮುಗ್ಧ ರೈತರಾದ ನಮಗೆ ಕಂಪನಿ, ಗುತ್ತಿಗೆದಾರರು ವಂಚಿಸಿ ಈಗ ಪತ್ರಿಕಾ ಪ್ರಕಟನೆಯ ಮೂಲಕ ವಿಧೂತ್ ಪ್ರಸರಣ ಲೈನಿನ ವ್ಯಾಪ್ತಿಯಿಂದ ರೈತರು ದೂರವಿರಿ ಮತ್ತು ಜಾನುವಾರುಗಳನ್ನು ನಿಮ್ಮ ನಿಯಂತ್ರಣದಲ್ಲಿರಿಸಿಕೊಳ್ಳಬೇಕೆಂದು ಹಾಗೂ ಯಾವುದೇ ಕಾರಣಕ್ಕೂ ಟವರ್ ಏರುವ ಪ್ರಯತ್ನ ಮಾಡದಿರಿ ಮತ್ತು ಟ್ರಾನ್ಸಮಿಷನ್ ಲೈನಿನ ಯಾವುದೇ ಭಾಗಗಳನ್ನು ಮುಟ್ಟಬೇಡಿ, ಟೈವರ್‌ಗಳ ಅಡಿಯಲ್ಲಿ ಯಾವುದೇ ಜಾನುವಾರುಗಳನ್ನು ಕಟ್ಟಿಹಾಕಬಾರದು ಇಲ್ಲವಾದಲ್ಲಿ ಜೀವ ಹಾನಿ ಉಂಟಾಗಬಲ್ಲ ಗಭೀರ ಅಪಘಾತ ಉಂಟಾಗಬಹುದು ಮತ್ತು ಈ ಸೂಚನೆ ಪಾಲಿಸದೇ ಯಾವುದೇ ನಷ್ಟ ಮತ್ತು ಜೀವ ಹಾನಿಗೆ ಕಂಪನಿಯು ಜವಬ್ದಾರಿ ಅಲ್ಲ ಎಂದು ಕಾಮಗಾರಿಯನ್ನು ಪೂರ್ಣಗೊಳಿಸದೆ ಸುಳ್ಳು ಹೇಳಿ ಪತ್ರಿಕಾ ಪ್ರಕಟಣೆ ಮೂಲಕ ಹಾಗೂ ಮಾನ್ಯ ಜಿಲ್ಲಧಿಕಾರಿಗಳಿಗೆ ಪತ್ರ ಸಲ್ಲಿಸುತ್ತಾರೆ. ಕಂಪನಿಯ ಗುತ್ತಿಗೆದಾರರು ರೈತರಿಗೆ ಸೂಕ್ತ ಪರಿಹಾರ ಮೊತ್ತ ಕೊಡದೆ ಆತಂಕದಲ್ಲಿ ಜೀವನ ಕಳೆಯುವ ವಾತಾವರಣ ನಿರ್ಮಾಣ ಮಾಡಿದ ಕಂಪನಿಯ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸಮರ​‍್ಕ ಪರಿಹಾರ ಕೊಟ್ಟು ನಂತರ ಕಾಮಗಾರಿಯನ್ನು ಪೂರ್ಣಗೊಳಿಸಿ ಲೈನ್ ಚಾರ್ಜ್‌ ಮಾಡಬೇಕೆಂದು ಜಮೀನಿನ ಮಾಲಕರು ಮತ್ತು ಡಿಎಸ್‌ಎಸ್ ಭೀಮ ಘರ್ಜನೆ ಸಂಘಟನೆ ಆಗ್ರಹವಾಗಿದೆ.  ರೈತರ ಸಂಕಷ್ಟವನ್ನು ಅರಿತು ವಿಳಂಬ ನೀತಿ ಅನುಸರಿಸುತ್ತಿರುವ ಕಂಪನಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡುರೈತರಿಗೆ ಸರಿಯಾದ ಪರಿಹಾರ ನೀಡಿದೆ ಇದ್ದ ಪಕ್ಷದಲ್ಲಿ ರೈತ ಪರ ಸಂಘಟನೆಗಳು ದಲಿತ ಸಂಘಟನೆಗಳು ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಮೂಲಕ ಉಗ್ರ ಹೋರಾಟ ನೆರವೇರಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿಮಹಾಂತೇಶ ವಕೀಲರು ತಾಲೂಕ ಪ್ರಧಾನ ಕಾರ್ಯದರ್ಶಿ ಯಲಬುರ್ಗಾ, ಬಸವರಾಜ್ ನಡುಲಮನಿ ಡಿಎಸ್‌ಎಸ್ ಭೀಮಘರ್ಜನೆ ರಾಜ್ಯ ಗೌರವಾಧ್ಯಕ್ಷರು, ಗಾಳೆಪ್ಪ ಎಂಡಿ ಡಿಎಸ್‌ಎಸ್ ಜಿಲ್ಲಾ ಗೌರವಾಧ್ಯಕ್ಷರು, ಹನುಮಂತ ಮುತ್ತಾಳ ತಾಲೂಕ ಮಾದಿಗ ದಂಡೂರ ಅಧ್ಯಕ್ಷರು, ಪುಟ್ಟರಾಜು ಪೂಜಾರ ಡಿಎಸ್‌ಎಸ್ ಸಂಘಟನಾ ಕಾರ್ಯದರ್ಶಿಗಳು, ಹಸನ್ ಸಾಬ್ ಮಾಬುಸಾಬ್ ಲೇಬಲಿ, ಹಾಗೂ ರೈತ ಸಂಘಟನೆಗಳು ಡಿಎಸ್‌ಎಸ್ ಸಂಘಟನೆಗಳು ರೈತರು ಇತರರು ಇದ್ದರು.