ಅಂತರ್ಜಲ ಮಟ್ಟ ಹೆಚ್ಚಿಸಲು ಚೆಕ್ ಡ್ಯಾಂ ನಿರ್ಮಾಣ ಅತಿ ಅವಶ್ಯ

ಅಂತರ್ಜಲ ಮಟ್ಟ ಹೆಚ್ಚಿಸಲು ಚೆಕ್ ಡ್ಯಾಂ ನಿರ್ಮಾಣ ಅತಿ ಅವಶ್ಯ  Construction of check dam is very necessary to raise the ground water level

ಇಂಡಿ 03 : ತಾಲ್ಲೂಕಿನ ಹೀರೆಬೆವನೂರ ಗ್ರಾಮವು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೀರೆಬೆವನೂರ ಪಂಚಾಯತಿಯು, ನೆಹರು ನಗರ ತಾಂಡಾಗಳನ್ನು ಹೊಂದಿದೆ. ವಿಜಯಪುರ ಜಿಲ್ಲೆಯಿಂದ 72 ಕೀಲೋ ಮೀಟರ್ ಹಾಗೂ ಇಂಡಿ ತಾಲೂಕಿನಿಂದ 15 ಕೀಲೋ ಮೀಟರ ದೂರದಲ್ಲಿದೆ. ಇಲ್ಲಿ ವಾಸಿಸುವ ಸುಮಾರು 1235 ಕುಟುಂಬಗಳು ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಲ್ಟಿ ಆರ್ಚ್‌ ಚೆಕ್ ಡ್ಯಾಂ ನಲ್ಲಿ ನೀರು ಶೇಖರಣೆ ಆಗಿದೆ. ಚೆಕ್ ಡ್ಯಾಂ 8 ಅಡಿ ಆಳವಿದ್ದು  ಅಂದಾಜು 38,08,500  ಲೀಟರ್ ನೀರು ಸಂಗ್ರಹವಾಗಿದೆ.ತಾಲೂಕಿನ್ಯದಂತ ಕಳೆದ ಎರಡು ತಿಂಗಳಿಂದ ಪೂರ್ವ ಮುಂಗಾರು ಮಳೆಯಾಗುತ್ತಿರುವುದನ್ನು ಕಂಡು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಶ್ರೀ ರವಿ ಕರ್ಜಗಿ ಸರ್  ಮತ್ತು ತಾಂತ್ರಿಕ ಸಹಾಯಕರು ಶ್ರೀ ಈರಣ್ಣ ಇಂಡಿ ರವರು  ಗಣಪತಿ ಹಂಜಗೆ ಅವರ ಹೊಲದ ಹತ್ತಿರ ಸರ್ಕಾರಿ ಹಳ್ಳಕ್ಕೆ  (ಮಲ್ಟಿ ಆರ್ಚ) ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಕೈಗೆತ್ತಿಗೊಂಡರು. ನೂರಾರು ನರೇಗಾ ಕೂಲಿಕಾರ ಶ್ರಮದಾನದ ಮೂಲಕ ಈ ಚೆಕ್ ಡ್ಯಾಂ ನಿರ್ಮಿಸಿದ್ದಾರೆ.   ಚೆಕ್ ಡ್ಯಾಂ ಗಳನ್ನು ಆಪ್ ಸ್ಟೀಮ್ ನಿಂದ ಡೌನ್ ಸ್ಟ್ರೀಮ್ ಗೆ ಚಾನಲ್ ಗಳಾದ್ಯಂತ ನಿರ್ಮಿಸಲಾಗಿದೆ. ಚಾನೆಲ್ ನಲ್ಲಿ ಮೇಲೈ ನೀರಿನ ಹರಿವಿಗೆ ಅಡ್ಡಿಪಡಿಸಲು ಮತ್ತು ನೀರನ್ನು ಹೆಚ್ಚು ಕಾಲ ಮಣ್ಣಿನಲ್ಲಿ ಉಳಿಸಿಕೊಳ್ಳಲಾಗುತ್ತದೆ. ಚೆಕ್ ಡ್ಯಾಂ ಕಾಮಗಾರಿವು ಏಪ್ರಿಲ್ ನಲ್ಲಿ ಪ್ರಾರಂಭ ಮಾಡಲಾಗಿದ್ದು ಜೂನ ತಿಂಗಳಲ್ಲಿ ಮುಕ್ತಾಯಗೊಂಡಿದೆ. ಕಾಮಗಾರಿಯು ಒಟ್ಟು ಮೊತ್ತ 8 ಲಕ್ಷ ಇದ್ದು ಕೂಲಿ ಮೊತ್ತ 257252/- ಸಾಮಗ್ರಿ ಮೊತ್ತ ಇದ್ದು ಹಾಗೂ 697 ಮಾನವ ದಿನ ಸೃಜನೆ ಮಾಡಲಾಗಿದೆ.

1)  ನೈಸರ್ಗೀಕವಾಗಿ ಬರುವ ಮಳೆ ನೀರನ್ನು ಸಂಗ್ರಹಿಸಿದರೆ ಏನೆಲ್ಲ ಲಾಭ ಎಂಬುವುದಕ್ಕೆ ಹಿರೇಬೇವನೂರ ಚೆಕ್ ಡ್ಯಾಂ ಉದಾಹರಾಣೆಯಾಗಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಹಳ್ಳಕ್ಕೆ ಚೆಕ್ ಡ್ಯಾಂ ಕಾಮಗಾರಿ ನಿರ್ಮಾಣ ಮಾಡಿದ್ದು ಅಂತರ್ಜಾಲ ಮಟ್ಟವನ್ನು ವೃದ್ಧಿಸುವಲ್ಲಿ ನೆರವಾಗಿದೆ. ಹಳ್ಳದ ಸುತ್ತ ಮುತ್ತಲಿನಲ್ಲಿರುವ ರೈತರ ಜಮೀನಲ್ಲಿರುವ ಕೊಳವೆ ಬಾವಿಗಳಿಗೆ ಅಂತರ್ಜಲ ಹೆಚ್ಚಾಗುದಲ್ಲದೆ. ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃಧ್ದಿಗೆ ನರೇಗಾ ಯೋಜನೆ ಸಹಕಾರಿಯಾಗಿದೆ.ಡಾ.ಬೀಮಾಶಂಕರ ಕನ್ನೂರತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಇಂಡಿ. 

2) ಜನರು ವಲಸೆ ಹೋಗದಂತೆ ತಡೆದು ಉದೋಗ ಒದಗಿಸುವ ಉದ್ದೆಶದಿಂದ ವಿವಿಧ ಕಾಮಗಾರಿಗಳನ್ನು ನರೇಗಾ ಯೋಜನೆಯಡಿಯಲ್ಲಿ ಕೈಗೊಂಡು ದುಡಿಯುವ ಜನರ ಬದುಕಿಗೆ ಈ ಒಂದು ಯೋಜನೆ ವರದಾನವಾಗಿದೆ. ಮಳೆಗೆ ಚೆಕ್ ಡ್ಯಾಂನಲ್ಲಿ ನೀರು ಬಂದಿದ್ದರ ಪರಿಣಾಮ ಸಾಕಷ್ಡು ಬದಲಾವಣೆಯಾಗಿದೆ.ದನ-ಕರು ಇತರೆ ಪ್ರಾಣಿ ಪಕ್ಷಿಗಳಿಗೆ ಅನೂಕೂಲವಾಗಿದೆ.*ಶ್ರೀ ಸಂಜಯ ಖಡಗೇಕರ ಸಹಾಯಕರು ನಿರ್ದೇಶಕರು (ಗ್ರಾ ಉ) ತಾಲೂಕು ಪಂಚಾಯಿತಿ ಇಂಡಿ

*3) ಸರಕಾರದ ನಿಯಮಗಳಂತೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಮತು ಮನರೇಗಾ ಸಹಾಯಕ ನಿರ್ದೇಶಕರು, ಮಾರ್ಗದರ್ಶನದಂತೆ ಅಚ್ಚು ಕಟ್ಟಾಗಿ ಚೆಕ್ ಡ್ಯಾಂ ನಿರ್ಮಿಸಿದ್ದೆವೆ. ಈ ಹಳ್ಳವು ಗ್ರಾಮಕ್ಕೆ ಹತ್ತಿರ ಇರುವುದರಿಂದ ಕೊಳವೆ ಬಾವಿಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲೂ ಸಹ ಸಹಾಯಕಾರಿಯಾಗಿದೆ. ಇದರೊಂದಿಗೆ ಅಂತರ್ಜಲ ಮಟ್ಟ ಮರುಪೂರಣ ವಾಗುವುದರಿಂದ ಪ್ರದೇಶದಲ್ಲಿ ನೀರಿನ ಮಟ್ಟವೂ ಸಹ ಸುಧಾರಿಸುತ್ತದೆ. ಈ ಭಾರಿ ಮುಂಗಾರು ಮಳೆಯು ಉತ್ತಮವಾಗಿದ್ದು ಸುಮಾರು 8 ಅಡಿ ಆಳ ಸಾಮಥ್ಯದ ಚೆಕ್ ಡ್ಯಾಂ ತುಂಬಿರುವುದನ್ನು ಕಂಡು ಗಾಮಸ್ಥರು ಗಮನಿಸಿ ಸಂತಸ ವ್ಯಕ್ತಪಡಿಸಿದ್ದಾರೆ**

ಶೈಲಶ್ರೀ ಅಶೋಕ ಜಾಧವ ಅಧ್ಯಕ್ಷರು ಗ್ರಾಮ ಪಂಚಾಯಿತಿ ಹೀರೆಬೆನೂರ