2.50 ಕೋಟಿ ವೆಚ್ಚದಲ್ಲಿ 14 ಮನೆಗಳ ನಿರ್ಮಾಣ: ಶಾಸಕ ನಾಡಗೌಡ

2.50 ಕೋಟಿ ವೆಚ್ಚದಲ್ಲಿ 14 ಮನೆಗಳ ನಿರ್ಮಾಣ: ಶಾಸಕ ನಾಡಗೌಡ  Construction of 14 houses at a cost of Rs. 2.50 crore: MLA Nadagowda

ತಾಳಿಕೋಟಿ 15: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕ್ಷಿಪ್ರವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ ಇದರ ವಿಶೇಷ ಅಭಿವೃದ್ಧಿಗಾಗಿ ಶಕ್ತಿ ಮೀರಿ ಅನುದಾನವನ್ನು ತಂದು ಕೆಲಸ ಮಾಡುತ್ತಿದ್ದೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದು ಕೆಎಸ್ಡಿಎಲ್ ಅಧ್ಯಕ್ಷ ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು. ಶನಿವಾರ ಪಟ್ಟಣದ ಸಾರಿಗೆ ನಿಗಮದ ಸಿಬ್ಬಂದಿಗಳ ನೂತನವಾಗಿ ನಿರ್ಮಿಸಿದ ವಸತಿ ಗೃಹಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೂ.2.50 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ 14 ಮನೆಗಳ ನಿರ್ಮಾಣವನ್ನು ಮಾಡಲಾಗಿದೆ ಇನ್ನು ಅಲ್ಪಸಲ್ಪು ಕೆಲಸಗಳು ಬಾಕಿ ಇವೆ ಅದನ್ನು ಆದಷ್ಟು ಬೇಗ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ನಮ್ಮ ಸರ್ಕಾರದ ಪಂಚ ಗ್ಯಾರೆಂಟಿಗಳಲ್ಲಿ ಶಕ್ತಿ ಯೋಜನೆ ದಾಖಲೆಯ ಸಾಧನೆಯನ್ನು ಮಾಡಿದ್ದು ರಾಜ್ಯದ ನಿಗಮಗಳಿಗೆ ಹೆಚ್ಚು ಲಾಭ ತಂದು ಕೊಟ್ಟಿದೆ ಎಂದು ತಿಳಿಸಿದ ಅವರು ಸಿಬ್ಬಂದಿಗಳು ಮನೆಗಳನ್ನು ಸರ್ಕಾರಿ ಮನೆಗಳು ಎಂದು ಭಾವಿಸದೆ ತಮ್ಮ ಸ್ವಂತ ಮನೆಯೆಂದೇ ಭಾವಿಸಿ ಚೆನ್ನಾಗಿ ಇಟ್ಟುಕೊಳ್ಳಬೇಕು. ಈ ನೂತನ ಮನೆಗಳಲ್ಲಿ ನಿಮಗೆ ಶಾಂತಿ ಮತ್ತು ಸಮೃದ್ಧಿ ಸಿಗುವಂತಾಗಲೆಂದು ಹಾರೈಸುತ್ತೇನೆ ಎಂದರು.  

ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಪ್ರಾಸ್ತಾವಿಕವಾಗಿ ಮಾತನಾಡಿ ಸದರಿ ಮನೆಗಳನ್ನು ನಮ್ಮ ಸಿಬ್ಬಂದಿಗಳ ಸಿನಿಯಾರಿಟಿ ಮೇಲೆ ಹಂಚಿಕೆ ಮಾಡಲಾಗಿದೆ ಮಾನ್ಯ ಶಾಸಕರು ಹೆಚ್ಚಿನ ಆಸಕ್ತಿವಹಿಸಿ ಸಿಬ್ಬಂದಿಗಳಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ನಿಗಮದ 14 ಸಿಬ್ಬಂದಿಗಳಿಗೆ ವಸತಿ ಗೃಹಗಳ ಪ್ರಮಾಣ ಪತ್ರಗಳನ್ನು ಶಾಸಕರು ವಿತರಿಸಿದರು. ವೇ.ಮೂ.ಮುರಗೇಶ ವಿರಕ್ತಮಠ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಪೂಜ್ಯ ಬಸವ ಪ್ರಭು ದೇವರು, ತಹಸಿಲ್ದಾರ್ ಡಾ.ವಿನಯಾ ಹೂಗಾರ, ವಿವಿ ಸಂಘದ ಅಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗನಗೌಡ ದೇಸಾಯಿ, ಮು.ಕಾ.ಅ.ಚನ್ನನ ಬೋರಯ್ಯ, ಮಹಿಸಾಲ ಬೇಗಾರ (ಕಾ.ಕ.ಅ.ಕೇ.ಕ. ಕಲಬುರ್ಗಿ), ಗುತ್ತಿಗೆದಾರ ಅಮ್ಮಾನ ಮುನ್ಸಿ, ಪಿಎಸ್‌ಐ ಜ್ಯೋತಿ ಖೋತ್, ಕಾಂಗ್ರೆಸ್ ಮುಖಂಡರಾದ ಸುರೇಶಧಣಿ ನಾಡಗೌಡ(ಬಿಂಜಲಭಾವಿ), ಸಿದ್ದನಗೌಡ ಪಾಟೀಲ (ನಾವದಗಿ), ನೀಲಮ್ಮಗೌಡತಿ ಪಾಟೀಲ, ಪ್ರಭುಗೌಡ ಮದರಕಲ್ಲ,ಸಂಗನಗೌಡ ಅಸ್ಕಿ,ಘಟಕ ವ್ಯವಸ್ಥಾಪಕ ಪಿ.ಕೆ.ಜಾಧವ ಹಾಗೂ ನಿಗಮದ ಸಿಬ್ಬಂದಿಗಳು ಮತ್ತಿತರರು ಇದ್ದರು. ಎಂ ಎಸ್ ಹಿರೇಮಠ ಸ್ವಾಗತಿಸಿದರು. ಈರಣ್ಣ ತೊಂಡಿಕಟ್ಟಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.