ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ: ಮಸೂದೆ ಅಂಗೀಕಾರ
ನವದೆಹಲಿ: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ ಕಲ್ಪಿಸುವ ಮಸೂದೆ ರಾಜ್ಯಸಭೆಯಲ್ಲಿಂದು ಅಂಗೀಕಾರಗೊಂಡಿತು.
ಈಗಿರುವಂತೆ ಮೀಸಲಾತಿ ಅನುಷ್ಠಾನಗೊಳಿಸಬೇಕು ಮತ್ತು ಜನರು ಕೂಡಾ ಜಾತಿ ಸಮೀಕ್ಷೆ ಗುರುತಿಸುವಂತೆ ಸಕರ್ಾರ ಮಾಡಬೇಕು ಎಂದು ಕೆಲ ಸದಸ್ಯರು ಆಗ್ರಹಿಸಿದರು. ಲೋಕಸಭೆಯಲ್ಲಿ ಆಗಸ್ಟ್ 2 ರಂದು ಅಂಗೀಕಾರಗೊಂಡ ಸಂವಿಧಾನದ 123 ನೇ ತಿದ್ದುಪಡಿ ಮಸೂದೆ 2017 ಮೇಲಿನ ಚಚರ್ೆ ಸಂದರ್ಭದಲ್ಲಿ ಈ ಒತ್ತಾಯ ಕೇಳಿಬಂದಿತ್ತು.
ಲೋಕಸಭೆಯಲ್ಲಿ ಮಾಡಲ್ಪಟ್ಟ ತಿದ್ದುಪಡಿಯೊಂದಿಗೆ 156 ಮತಗಳ ಮೂಲಕ ರಾಜ್ಯಸಭೆಯಲ್ಲಿಯೂ ಮಸೂದೆ ಅಂಗೀಕಾರಗೊಂಡಿತು.
ಸಂವಿಧಾನ ತಿದ್ದುಪಡಿಗೆ 3/2 ರಷ್ಟು ಸದಸ್ಯರ ಬೆಂಬಲ ಅಗತ್ಯವಾಗಿದ್ದು, ಕಳೆದ ವರ್ಷ ಜುಲೈ 31 ರಂದು ಕೆಲ ತಿದ್ದುಪಡಿಗಳೊಂದಿಗೆ ಲೋಕಸಭೆಗೆ ಕಳುಹಿಸಿತ್ತು. ಕೆಲ ಬದಲಾವಣೆಯೊಂದಿಗೆ ಕಳೆದ ವಾರ ಲೋಕಸಭೆಯಲ್ಲಿ ಮಸೂದೆ ಸವರ್ಾನುಮತದಿಂದ ಅಂಗೀಕಾರ ಪಡೆದುಕೊಂಡಿತ್ತು.
ಮಸೂದೆ ಮಂಡಿಸಿ ಮಾತನಾಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್, ಹಿಂದುಳಿದ ವರ್ಗಗಳ ಮೇಲಿನ ದೌರ್ಜನ್ಯ ವಿರುದ್ಧ ಹೋರಾಟ ನಡೆಸಲು ಹಾಗೂ ಅವರಿಗೆ ಕ್ಷಿಪ್ರಗತಿಯಲ್ಲಿ ನ್ಯಾಯ ದೊರಕಿಸಿಕೊಡಲು ಈ ಮಸೂದೆ ನೆರವಾಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಮಹಿಳಾ ಪ್ರಾತಿನಿಧ್ಯ ಹೊಂದಿದ್ದು, ಪ್ರತಿಪಕ್ಷಗಳು ಸಲಹೆ ನೀಡುವಂತೆ ಗೆಹ್ಲೋಟ್ ವಿವರಿಸಿದರು. ಹಿಂದುಳಿದ ಜನರಲ್ಲಿ ರಾಜ್ಯಗಳು ತನ್ನದೇ ಆದ ಪಟ್ಟಿಹೊಂದಿದ್ದು, ಕೇಂದ್ರ ಕೂಡಾ ತನ್ನದೇ ಆದ ಪಟ್ಟಿ ಹೊಂದಿದೆ. ಕೇಂದ್ರಸಕರ್ಾರದಲ್ಲಿ ಹೊಂದಿರುವ ಅಥವಾ ಪಟ್ಟಿಯಲ್ಲಿ ಇರದ ಜಾತಿಗಳ ಬಗ್ಗೆ ಮಾತ್ರ ಹಿಂದುಳಿದ ವರ್ಗಗಳ ಆಯೋಗ ಶಿಫಾರಸ್ಸು ಮಾಡಲಿದೆ ಎಂದು ತಿಳಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 