ಸರ್ವರೂ ಸಮಾನರು ಸಾರುವ ಸಂವಿಧಾನ : ಹೆಸ್ಕಾಂ ಅಧ್ಯಕ್ಷ ಖಾದ್ರಿ

ಸರ್ವರೂ ಸಮಾನರು ಸಾರುವ ಸಂವಿಧಾನ : ಹೆಸ್ಕಾಂ ಅಧ್ಯಕ್ಷ ಖಾದ್ರಿ Constitution proclaims equality for all: HESCOM President Qadri

ಶಿಗ್ಗಾವಿ 15  : ದೇಶದ ಜನರಲ್ಲಿ ಯಾವುದೇ ಬೇಧ ಭಾವವಿಲ್ಲದೇ ಸರ್ವರೂ ಸಮಾನರು ಎಂದು ಸಾರುವ ಸಂವಿಧಾನ ರಚಿಸಿ, ಮಹತ್ವದ ಕೊಡುಗೆ ನೀಡಿರುವ ಡಾ. ಬಿ.ಆರ್‌ ಅಂಬೇಡ್ಕರ್ ಅವರು ಪ್ರಾತಃ ಸ್ಮರಣೀಯರು ಎಂದು ಹೆಸ್ಕಾಂ ಅಧ್ಯಕ್ಷ ಸೈಯೆದ್ ಅಜ್ಜಂಫೀರ್ ಖಾದ್ರಿ ಹೇಳಿದರು. ಪಟ್ಟಣದ ಜಿ+1 ಮನೆಗಳ ಆವರಣದಲ್ಲಿ ಡಿವೈಎಫ್‌ಐ ಶಹರ ಘಟಕ ಹಾಗೂ ಜಿ+1 ಮನೆ ಫಲಾನುಭವಿಗಳ ಹೋರಾಟ ಸಮಿತಿಯ ವತಿಯಿಂದ ನಡೆದ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಿಗೆ ಅಂಬೇಡ್ಕರ್ ಅವರು ನೀಡಿದ ಕೊಡುಗೆಗಳು ಮಹತ್ವದ್ದಾಗಿವೆ ಎಂದರು.

ಪುರಸಭೆ ಸದಸ್ಯ ಮುಕ್ತಾರ್ ಅಹಮದ್ ತಿಮ್ಮಾಪೂರ ಮಾತನಾಡಿ ಜೀವಮಾನವೀಡೀ ಹೋರಾಡಿ ದೇಶದ ಆದರ್ಶ ಪುರುಷರಾಗಿ ಮೂಡಿ ಬಂದಿರುವ ಅಂಬೇಡ್ಕರ್ ಅವರ ಜೀವನ, ಸಾಧನೆ ಹಾಗೂ ಚಿಂತನೆಗಳನ್ನು ವಿದ್ಯಾರ್ಥಿ-ಯುವಜನರು ಅಳವಡಿಸಿಕೊಳ್ಳಬೇಕು ಎಂದರು.   ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ವೀರಣ್ಣ ಗಡ್ಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿವೈಎಫ್‌ಐ ಶಹರ ಘಟಕ ಹಾಗೂ ಜಿ+1 ಮನೆ ಫಲಾನುಭವಿಗಳ ಹೋರಾಟ ಸಮಿತಿ ಮುಖಂಡರಾದ ಪ್ರಿಯಾ ವಿ ಗಡ್ಡಿಯವರ, ಗುರುನಗೌಡ ದುಂಡಿಗೌಡ್ರ, ಮಕಬುಲ್ ಯಲ್ಲಾಪುರ, ರುದ್ರೇಶ ಗುರಣ್ಣನವರ, ಮಂಜುಳಾ ಹಾನಗಲ್, ದ್ಯಾಮಕ್ಕ, ಶಾಂತಕ್ಕ ಗಡ್ಡಿಯವರ, ಜಯಮ್ಮ ಆಲೂರು, ಗೌಸ್ ನವಲಗುಂದ, ಜಯಲಕ್ಷ್ಮಿ ಅಂಗಡಿ ಸೇರಿದಂತೆ ಹಲವರು ಇದ್ದರು.