ಸಂವಿಧಾನ, ಮಾನವ ಹಕ್ಕುಗಳ ದಿನಾಚರಣೆ
ಕೊಪ್ಪಳ 21: ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಇತ್ತೀಚೆಗೆ ‘ಭಾರತ ಸಂವಿಧಾನ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಉದ್ಘಾಟಕರಾಗಿಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶರಣಬಸಪ್ಪ ಬಿಳಿಎಲಿ ಆಗಮಿಸಿ ಮಾತನಾಡಿದಅವರು ಭಾರತ ಸಂವಿಧಾನದ ಪ್ರಸ್ತಾವನೆಯ ಹಿನ್ನೆಲೆ ಮತ್ತುಅದರ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಚನ್ನಬಸವ ಅವರು ಮಾತನಾಡುತ್ತಾ ಅಂಬೇಡ್ಕರ ಅವರ ಜೀವನ ಕುರಿತು ಮತ್ತು ಭಾರತ ಸಂವಿಧಾನಕ್ಕೆ ಅವರು ನೀಡಿದ ಕೊಡುಗೆ ಕುರಿತು ಮಾತನಾಡಿದರು.
ಸದರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ.ಅರುಣಕುಮಾರ ಅವರು ಆಗಮಿಸಿದ್ದರು. ಸದರಿ ಕಾರ್ಯಕ್ರಮದ ಕುರಿತು ವಿದ್ಯಾರ್ಥಿಗಳಾದ ಶಶಿಕುಮಾರ, ಪವಿತ್ರ ಮೂಲಿಮನಿ ಮಾತನಾಡಿದರು. ನಂತರದಲ್ಲಿ ರಸಪ್ರಶ್ನೆ, ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯರಾದ ಡಾ.ಕರಿಬಸವೇಶ್ವರ ಬಿ.ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗರಾಜ ದಂಡೋತಿ, ಕಾರ್ಯಕ್ರಮದ ಆಯೋಜಕರಾದ ಮಂಜುನಾಥ ಹಿರೇಮಠ ಮತ್ತು ಕನಕಪ್ಪ ಗೊಂಡಬಾಳ ಅವರು ಉಪಸ್ಥಿತರಿದ್ದರು. ಸ್ವಾಗತವನ್ನು ವಿದ್ಯಾರ್ಥಿನಿಯಾದ ಬಿ.ಎ. ಪ್ರಥಮ ಸೆಮಿಸ್ಟರಿನ ಬಸಮ್ಮ ಮಾಡಿದರೆ, ವಂದನಾರೆ್ಣಯನ್ನು ಬಿ.ಎ. ತೃತೀಯ ಸೆಮಿಸ್ಟರಿನ ವಿದ್ಯಾರ್ಥಿ ಸಿದ್ದೇಶ ಮಾಡಿದರು.