ಬಣಜಿಗ ಸಮಾಜ ವಿಭಜನೆಗೆ ಷಡ್ಯಂತ್ರ: ನಿಂಗನೂರ

ಬಣಜಿಗ ಸಮಾಜ ವಿಭಜನೆಗೆ ಷಡ್ಯಂತ್ರ: ನಿಂಗನೂರ  Conspiracy to divide Banajiga society: Ninganura

ಬೀಳಗಿ 17 - ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಬೀಳಗಿ ತಾಲೂಕಾ ಮತ್ತು ನಗರ ಘಟಕ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲ ವ್ಯಕ್ತಿಗಳಿಂದ ಷಡ್ಯಂತ್ರದಿಂದ ನೆಡೆದು ಸಮಾಜ ಒಡೆಯುವ ಕೆಲಸ ನೆಡೆದಿದೆ ಎಂದು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಶಿವಾನಂದ ನಿಂಗನೂರ ಆರೋಪಿಸಿದ್ದಾರೆ.   

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕು ಅಧ್ಯಕ್ಷನಾಗಿ ಕಳೆದ 20 ವರ್ಷಗಳಿಂದ ಸಮಾಜದ ಸೇವೆ ಸಲ್ಲಿಸುತ್ತಿದ್ದು ನನಗೆ ಯಾವುದೇ ಮಾಹಿತಿ ,ನೋಟಿಸ್ ಹಾಗೂ ಚುನಾವಣಾ ಪ್ರಕ್ರಿಯೆಯ ಬಗ್ಗೆ ತಿಳಿಸದೇ ನೂತನ ತಾಲೂಕು ಘಟಕ ಅಧ್ಯಕ್ಷ ಪದಾಧಿಕಾರಿಗಳ ಅವಿರೋಧ ಆಯ್ಕೆ ಮಾಡಿದ್ದು ಇದು ಸಂಘದ ಬೈಲಾ ಪ್ರಕಾರ ಹಾಗೂ ಕಾನೂನು ಪ್ರಕಾರ ಅಸಿಂಧು ಆಗಿದೆ,ಇಂತಹ ಚುನಾವಣೆ ಪ್ರಕ್ರಿಯೆಯಿಂದ ಸಮಾಜದಲ್ಲಿ ಸಾಕಷ್ಟು ಗೊಂದಲವಾಗುತ್ತಿದ್ದು,ಬಣಜಿಗ ಸಮಾಜದ ನನ್ನೆಲ್ಲಾ ಬಂಧುಗಳು ಇಂತಹ ಗೊಂದಲಗಳಿಗೆ ಕಿವಿಕೊಡಬಾರದು, ನಮ್ಮ ಬಣಜಿಗ ಸಮಾಜ ಒಗ್ಗಟ್ಟಿನಿಂದ ಬಲಿಷ್ಠ ಸಮಾಜ ಮಾಡೋಣ ಹಾಗೂ ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿದ ಕಾಣದ ಕೈಗಳು, ರಾಜ್ಯ ಘಟಕದ ಅಧ್ಯಕ್ಷ   ಮಲ್ಲಿಕಾರ್ಜುನ ರೂಡಗಿ ,ಪ್ರದಾನ ಕಾರ್ಯದರ್ಶಿ  ಶಿವಾನಂದ ಬಿದರಿ ಹಾಗೂ ಜಿಲ್ಲೆಯನ್ನು ಪ್ರತಿನಿಧಿಸುವ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಪ್ರಭು ಇದ್ದಲಗಿ ,ಶಿದ್ದರಾಮ ಶಿರೋಳ,ಎಸ್ ಡಿ ಶಾಹಾಪೂರ  ಇವರ ಕುಮ್ಮಕ್ಕಿನಿಂದ ಕಾನುನೂ ಬಾಹಿರ ಚುನಾವಣೆ ನೆಡೆಸಿದ ತಾಲೂಕು ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಘೋಷಣೆ ಮಾಡಿದ್ದು ಸಂಘದ ನಿಯಮಗಳಿಗೆ ವಿರುದ್ಧವಾಗಿರುವುದರಿಂದ ಈ ಆಯ್ಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಇಂತಹ ಸಮಾಜದ ವಿರೋಧಿ ಕೆಲಸ ಮಾಡಿದವರಿಗೆ ತಕ್ಕ ಪಾಠ ಕಲಿಸಿ,ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಕರೆದುಕೊಂಡು ಸಭೆ ಮಾಡಿ ನಗರ ಘಟಕ ತಾಲೂಕಾ ಘಟಕದ ಪದಾಧಿಕಾರಿಗಳ ಅವಿರೋಧವಾಗಿ ಆಯ್ಕೆ ಮಾಡೋಣ ಸದ್ಯ ಸಮಾಜ ಯಾವುದೇ ಗೊಂದಲ ಪಡೆಯಬಾರದು ನಾನು ಬೀಳಗಿ ತಾಲೂಕಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷನಾಗಿ ಸಮಾಜ ಗಟ್ಟಿಗೊಳಸುತ್ತೇನೆ ಎಂದರು. ಬಾಕ್ಸ್‌ - ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆಯಲ್ಲಿಯು ಗೊಂದಲ ಸ್ರಷ್ಠಿಸಿದ್ದು ಸಂಘದ ಬೈಲಾ ಪ್ರಕಾರ ಚುನಾವಣೆ ಪ್ರಕ್ರಿಯೆಯಲ್ಲಿ ನಾನು ಸಾಮಾನ್ಯ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದು ನನ್ನ ವಿರುದ್ಧ ಹಿತೈಷಿ ಸದಸ್ಯನನ್ನು ನಾಮಪತ್ರ ಸಲ್ಲಿಸಿ ನನ್ನ ಹಾಗೂ ಸಮಾಜದ ವಿರುದ್ಧ ಷಡ್ಯಂತ್ರ ಮಾಡಿ ಚುನಾವಣೆ ಪ್ರಕ್ರಿಯೆ ಮುಂದೂಡಿ ತಮಗೆ ಬೇಕಾದ ಜನರನ್ನು ನಗರ ಘಟಕ ರಚನೆ ಮಾಡಿದ್ದು ಅಸಿಂಧುವಾಗಿದ್ದು , ಕಾನೂನು ಬದ್ದವಾಗಿ ಸಾಮಾನ್ಯ ಸದಸ್ಯ ನಾಮಪತ್ರ ಅಧಿಕ್ರತವಾಗಿದು ನಾನು ನಗರ ಘಟಕದ ಸದಸ್ಯನಾಗಿ ಆಯ್ಕೆಯಾಗಿದ್ದೇನೆ ಎಂದು ಸಂತೋಷ ಕೋಲಾರ ತಿಳಿಸಿದರು.ಬಾಕ್ಸ್‌ - ಸಮಾಜದಲ್ಲಿ ಸಾಕಷ್ಟು ಮಹಿಳಾ ತಾಯಂದಿರು ಇದ್ದು ಅವರನ್ನು ಸಂಘದ ಈ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸದೇ ಕೆಲ ಜನರ ಗುಂಪು ಇಂತಹ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಮಾಜ ಮುಖಂಡರಾದ ಗುರು ಅಂಗಡಿ ಆರೋಪಿಸಿದರು.   

ಈ ಸಂದರ್ಭದಲ್ಲಿ ಬಣಜಿಗ ಸಮಾಜದ ಮುಖಂಡರಾದ ವಿಠ್ಠಲ ಅಂಗಡಿ,ಬಸವರಾಜ ಸುಣದೋಳಿ ಇದ್ದರು.