ಕೆಲಗೇರಿ ಕೆರೆ ಸಂರಕ್ಷಣೆ, ಸೌಂದರ್ಯ ಕರಣಕ್ಕೆ ಕ್ರಮ: ಚೋಳನ್

ಧಾರವಾಡ 06:  ಧಾರವಾಡ ನಗರದ ಇತಿಹಾಸ ಮತ್ತು ನೈಸಗರ್ಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯರ್ೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸಂಜೆ ಕೆರೆ ಅಭಿವೃದ್ಧಿ ಕುರಿತು ಸ್ವಯಂ ಸೇವಾ ಸಂಸ್ಥೆಗಳು ಮತ್ತು ನಾಗರಿಕರೊಂದಿಗೆ ಸಭೆ ನಡೆಸಿ ಮಾತನಾಡಿದರು.  ಕೆಲಗೇರಿ ಕೆರೆಯನ್ನು ನೈಸಗರ್ಿಕವಾಗಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಅವಕಾಶಗಳಿವೆ. ಕೆಲಗೇರಿ ಕೆರೆಗೆ ಬಂದು ಸೇರುವ ಕೊಳಚೆ ನೀರನ್ನು ತಡೆಯಲು ನೀರು ಶುದ್ಧೀಕರಣ ಘಟಕವನ್ನು ಅಮೃತ ಯೋಜನೆಯಡಿಯಲ್ಲಿ ನಿಮರ್ಿಸಲಾಗುತ್ತಿದೆ. ಎಸ್ಟಿಪಿ ಯಿಂದ ಲಭ್ಯವಾಗುವ ನೀರನ್ನು ಮರುಬಳಕೆಗೆ ಯೋಗ್ಯವಾಗಿಸುವ ಕುರಿತು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ಪರೀಕ್ಷಿಸಿ ಪ್ರಮಾಣೀಕರಿಸಲಿದ್ದಾರೆ. ಅವರ ಸಲಹೆಯಂತೆ ನೀರಾವರಿಗೆ ಬಳಸಲು ಪರಿಶೀಲಿಸಲಾಗುವುದು. ಕೆಲಗೇರಿ ಕೆರೆಯ ಅಭಿವೃದ್ಧಿ ಹಾಗೂ ಪ್ರವಾಸಿ ತಾಣವನ್ನಾಗಿ ರೂಪಿಸಲು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಲಭ್ಯವಿರುವ ಸುಮಾರು ರೂ.5 ಕೋಟಿಗಳನ್ನು ಬಳಸಲು ಯೋಜಿಸಲಾಗಿದೆ. ಕೆರೆಗೆ ಸುಭದ್ರವಾದ ರಕ್ಷಣಾ ಗೋಡೆ, ವಿಹಾರ ಮಾರ್ಗ, ಮಕ್ಕಳ ಆಟಿಕೆ, ಬೋಟಿಂಗ್, ವ್ಯಾಯಾಮ ಪರಿಕರಗಳು, ವಿದ್ಯುದ್ದೀಪ ಮೊದಲಾದ ಮೂಲ ಸೌಕರ್ಯಗಳನ್ನು ಕಲ್ಪಿಸಲು ಈ ಅನುದಾನ ಬಳಸಲಾಗುವುದು. ಮಹಾನಗರ ಪಾಲಿಕೆಯು ಕೊಳಚೆ ನೀರು ಶುದ್ಧೀಕರಣ ಘಟಕ ನಿಮರ್ಿಸಲಿದೆ. ಕೃಷಿ ವಿಶ್ವವಿದ್ಯಾಲಯ ಇದರ ತಾಂತ್ರಿಕ ಮೇಲ್ವಿಚಾರಣೆ ಕೈಗೊಳ್ಳಬೇಕು. ಶುದ್ಧೀಕರಿಸಿದ ನೀರು ಮರುಬಳಕೆ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು. ಮೂಲ ಸೌಕರ್ಯಗಳಿಗೆ ಹಾನಿಯಾಗದಂತೆ ಸೂಚನಾ ಫಲಕಗಳನ್ನು ಅಳವಡಿಸಿ ಕೃಷಿ ವಿ.ವಿ. ಯು ಭದ್ರತೆ ಕಲ್ಪಿಸಬೇಕು. ಅದೇ ರೀತಿ ಸಾಧನಕೇರಿ ಕೆರೆ, ಕಿತ್ತೂರು ಚನ್ನಮ್ಮ, ಆಝಾದ್ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿ ವಿಹಾರ ತಾಣಗಳನ್ನಾಗಿಸಲಾಗುವುದು ಎಂದರು. 


ಮಹಾನಗರ ಪಾಲಿಕೆ ಆಯುಕ್ತ ಡಾ: ಸುರೇಶ್ ಇಟ್ನಾಳ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೆಶಕ ವಿನಾಯಕ ಪಾಲನಕರ್, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಾಗರಾಜ ಕುಮ್ಮಣ್ಣವರ, ಮಹಾನಗರ ಪಾಲಿಕೆಯ ಅಧೀಕ್ಷಕ ಅಭಿಯಂತರ ತಿಮ್ಮಪ್ಪ,  ಭೂ ದಾಖಲೆಗಳ ಉಪನಿದರ್ೆಶಕಿ ನಜ್ಮಾ ಪೀರ್ಜಾದೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿದರ್ೆಶಕಿ ರೆಹಮತ್ ಭಟ್ ಸೇರಿದಂತೆ ರೋಟರಿ ಕ್ಲಬ್, ಕೃಷಿ ವಿ.ವಿ., ಕೆಲಗೇರಿ ಅಭಿವೃದ್ಧಿ ಸಂಘ ಮತ್ತಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.