ಲೋಕದರ್ಶನ ವರದಿ
ಸಿಂದಗಿ 12: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಸ್ಥಳಿಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆಯ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಸಮ್ಮತ ಅಭ್ಯಥರ್ಿ ಸುನೀಲಗೌಡ ಪಾಟೀಲ ಅವರು ಚುನಾಯಿತರಾದ ಹಿನ್ನಲೆಯಲ್ಲಿ ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ ಅವರ ನೇತೃತ್ವದಲ್ಲಿ ದಿ.11ರಂದು ವಿಜಯೋತ್ಸವ ಆಚರಿಸಿದರು.
ಸಿಂದಗಿ ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ ಅವರು ಮಾತನಾಡಿ, ಈ ಗೆಲವು ವಿಜಯಪೂರ ಮತ್ತು ಬಾಗಲಕೋಟ ಅವಳಿ ಜಿಲ್ಲೆಗಳ ಮುಂಬರುವ ಲೋಕಸಭೆಯ ಚುನಾವಣೆ ದಿಕ್ಸೂಚಿಯಾಗಿದೆ. ಗೆಲುವಿಗೆ ಕಾರಣರಾದ ಸಿಂದಗಿ ವಿಧಾನಸಭಾ ಕ್ಷೇತ್ರದ ಸಮಸ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಮತದಾರರಿಗೆ ಹಾಗೂ ಮುಖಂಡರು, ಕಾರ್ಯಕರ್ತರಿಗೆ ಹೃತಪೂರ್ವಕ ಅಭನಂದನೆಗಳನ್ನು ಹೆಳಿದರು.
ಪುರಸಭೆ ಅಧ್ಯಕ್ಷ ಬಾಷಾಸಾಬ ತಾಂಬೋಳಿ, ಸದಸ್ಯ ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಯೊಗಪ್ಪಗೌಡ ಪಾಟೀಲ, ಮುನ್ನಾ ಬೈರಾಮಡಗಿ, ಯಲ್ಲು ಕೆರಕಿ, ಬೀಮು ವಾಲಿಕಾರ, ಹಸನ ಮಂದೆವಾಲ, ಪಾರೂಕ ಮುಲ್ಲಾ, ಗಿರಿಶಗೌಡ ಪಾಟೀಲ, ಮಾಂತೇಶ ಅಮ್ಮಾಗೊಳ ಹಾಗೂ ಕಾರ್ಯಕರ್ತರು, ಯುವಕರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.