ನ್ಯಾಷನಲ್ ಹೆರಾಲ್ಡ್‌ ಕೇಸ್ ವಜಾಗೊಳಿಸಿದ ದೆಹಲಿ ವಿಶೇಷ ನ್ಯಾಯಾಲಯ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ನ್ಯಾಷನಲ್ ಹೆರಾಲ್ಡ್‌ ಕೇಸ್ ವಜಾಗೊಳಿಸಿದ  ದೆಹಲಿ ವಿಶೇಷ ನ್ಯಾಯಾಲಯ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ Congress protests against BJP after Delhi special court dismisses National Herald case

ಬೆಳಗಾವಿ 17: ರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ವಿರೋಧ ಪಕ್ಷದ ವಿರುದ್ಧ ಇಡಿ ಕೇಸ್, ನ್ಯಾಷನಲ್ ಹೆರಾಲ್ಡ್‌ ಕೇಸ್, ಇನ್ನೂ ಅನ್ನು ಅನೇಕ ಕೇಸಗಳನ್ನು ಹಾಕಿ ಸರ್ಕಾರದ ಅನೇಕ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು, ಜನತೆಯ ಮನದಲ್ಲಿ ಜಾತಿ ವಿಷಬೀಜ ಬಿತ್ತಿ, ಬಿಜೆಪಿ  ಕೆಟ್ಟ ಆಡಳಿತ ನಡೆಸುತ್ತಿದೆ ಅದಕ್ಕಾಗಿ ದೆಹಲಿ ವಿಶೇಷ ನ್ಯಾಯಾಲಯ ನಿನ್ನೆ ಮಹತ್ವದ ತೀರ್ಪು ನೀಡಿ, ಇಡಿ ಸರಿಯಾದ ಸಾಕ್ಷಿ ನೀಡಿಲ್ಲ ಎಂದು ನ್ಯಾಷನಲ್ ಹೆರಾಲ್ಡ್‌  ಕೇಸ್ ವಜಗೋಳಿಸಿದ್ದು ಬಿಜೆಪಿಗೆ ಕಪಾಳಮೋಕ್ಷ ಮಾಡಿದೆ ಎಂದು ಸಿ ಎಮ್ ಸಿದ್ದರಾಮಯ್ಯ ಹೇಳಿದರು.

ಅವರು ಬುಧವಾರದಂದು ಅಧಿವೇಶನ ಪ್ರಾರಂಭಕ್ಕೆ ಮುನ್ನ ಸುವರ್ಣ ಸೌಧದ ಮುಂದೆ ಇರುವ ಮಹಾತ್ಮಾ ಗಾಂಧಿ ಪ್ರತಿಮೆ ಮುಂದೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಒಂದು ಘಂಟೆಗಳ ಕಾಲ  ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಎಲ್ಲ ಸಚಿವರು, ಶಾಸಕರು ಸೇರಿಕೊಂಡು ಪ್ರತಿಭಟನೆ ಮಾಡಿ ಸತ್ಯಕ್ಕೆ ಜಯ, ಸುಳ್ಳಿಗೆ ಸೋಲು, ನ್ಯಾಷನಲ್ ಹೆರಾಲ್ಡ್‌ ಕೇಸ್ ಬಿಜೆಪಿ ಕ್ಲೀನ್ ಬೋಲ್ಡ್‌, ಹೆರಾಲ್ಡ್‌ ಕೇಸ್ ಬಿಜೆಪಿ ಹೊನಗೇಡಿ, ಸೋನಿಯಾ ಗಾಂಧಿ, ರಾಹುಲ ಗಾಂಧಿ ಮೇಲೆ ಸುಳ್ಳು ಕೇಸ್ ಬಿಜೆಪಿಗೆ ಧಿಕ್ಕಾರ ಎಂಬ ಫಲಕಗಳನ್ನು ಹಿಡಿದು ಭಾಗವಹಿಸಿದ್ದರು. 

ಕಾಂಗ್ರೆಸ್ ಪ್ರತಿಭಟನೆಯಲ್ಲಿ  ಸಿ ಎಂ ಸಿದ್ದರಾಮಯ್ಯ ಮಾತನಾಡಿ ನಮ್ಮ ಅಭಿವೃದ್ಧಿಗೆ ಸಹಿಸದ ಬಿಜೆಪಿ ಸರ್ಕಾರ ನೀಚ ಬುದ್ದಿ ಅನುಸರಿಸಿ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳನ್ನು ತುಳಿಯಲು ಕೆಟ್ಟ ಹಾದಿ ಹಿಡಿದಿದೆ, ಬಂಗಾರ ದರ ನೋಡಿ ಗಗನಕ್ಕೆ ಏರಿದೆ, ರಾಜ್ಯದ ಅನುದಾನ ನೀಡುತ್ತಿಲ್ಲ ಎಂದು ಸಿಎಂ ಆರೋಪಿಸಿದರು.     

ಈ ಪ್ರತಿಭಟನೆಯಲ್ಲಿ  ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ, ಕಾನೂನು ಮತ್ತು ಸಂಸದೀಯ ಸಚಿವ ಹೆಚ್ ಕೆ ಪಾಟೀಲ, ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ ಸೇರಿದಂತೆ ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು.