ಕಾಂಗ್ರೆಸ್ ಪಕ್ಷ ಶಕ್ತಿ ತುಂಬುವ ಕೆಲಸ ಮಾಡುತ್ತದೆ: .ನಾಡಗೌಡ
Congress party will work to fill its strength: Nadagowda
ಲೋಕದರ್ಶನ ವರದಿ
ಕಾಂಗ್ರೆಸ್ ಪಕ್ಷ ಶಕ್ತಿ ತುಂಬುವ ಕೆಲಸ ಮಾಡುತ್ತದೆ: .ನಾಡಗೌಡ
ಮುದ್ದೇಬಿಹಾಳ 06: ಕಾಂಗ್ರೇಸ್ ಪಕ್ಷ ತನ್ನದೆಯಾದ ಸಿದ್ದಾಂತ ಹಾಗೂ ಘನತೆಯನ್ನು ಹೊಂದಿದೆ ಮಾತ್ರವಲ್ಲದೇ ಬಡವರ ಧೀನ ದಲಿತ, ಮಹಳೆಯರ ರೈತರ ಪರವಾದ ಪಕ್ಷವಾಗಿದೆ. ಯುವಕರು ಪಕ್ಷದ ಜವಾಬ್ದಾರಿ ವಹಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಿಸಿಕೊಳ್ಳಲು ಸಧ್ಯ ರಾಜ್ಯದಲ್ಲಿ ಯುವ ಕಾಂಗ್ರೆಸ್ ಘಟಕ ಪಕ್ಷ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು ನಿಷ್ಠೆಯಿಂದ ಇದ್ದರೆ ಪಕ್ಷ ಗುರುತಿಸಿ ಸ್ಥಾನಮಾನ ನೀಡುತ್ತದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್.ನಾಡಗೌಡ ಹೇಳಿದರು.
ಪಕ್ಷದಲ್ಲಿ ಕೆಲವರು ಮಾತೆತ್ತಿದರೆ ನಾವು ಮೂವತ್ತು ವರ್ಷ ದುಡಿದಿದ್ದೇವೆ. ನಲವತ್ತು ವರ್ಷ ದುಡಿದಿದ್ದೇವೆ ಎಂದು ಹೇಳುತ್ತಿರುತ್ತಾರೆ. ಆದರೆ ಭಾವನಾತ್ಮಕ ಬೆಸುಗೆ ಪಕ್ಷದ ಸಿದ್ಧಾಂತದ ಜೊತೆಗೆ ಇರಬೇಕು. ಲಾಭ ಸಿಗುತ್ತದೆ ಎಂದು ಪಕ್ಷದಲ್ಲಿದ್ದರೆ ನಿರಾಶೆಗೆ ಒಳಗಾಗಬೇಕಾಗುತ್ತದೆ." ಅಪೇಕ್ಷೆ ಇಟ್ಟುಕೊಂಡು ದುಡಿದವರಿಗೆ ನಿರಾಸೆ ಆಗುತ್ತದೆ. ಅವರಿಂದ ಪಕ್ಷಕ್ಕೂ ಹಾನಿ ಆಗುತ್ತದೆ. ಇದು ಇಂದಿನ ಸವಾಲಾಗಿ ಪರಿಣಮಿಸಿದೆ.
ವೋಟ್ ಚೋರಿ ಹಾಗೂ ಜಿ.ಎಸ್ಪಿ ಬಗ್ಗೆ ದೇಶದಲ್ಲಿ ಧ್ವನಿ ಎತ್ತಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂದಿಯವಝ ಸಧ್ಯ ದೇಶದ ಜನರಿಗೆ ಕೋಮುವಾದಿ ಬಿಜೆಪಿ ಬಗ್ಗೆ ಗೌರವ ಕಡಿಮೆಯಾಗಿದೆ ಮುಂಬರುವ 2029 ಜನರು ರಾಹುಲ್‌ಗಾಂಧಿ ಬೆಂಬಲಿಸುವ ಮೂಲಕ ಅವರನ್ನು ಜನರು ಪ್ರಧಾನಿಯನ್ನಾಗಿ ಮಾಡಲು ಈಗಾಗಲೇ ನಿರ್ಧರಿಸಿದ್ದಾರೆ ಎಂದರು.
ನಾನು 1983 ರಿಂದ ರಾಜಕಾರಣದಲ್ಲಿದ್ದೇನೆ ನನ್ನನ್ನು ಹಿಂದೆ ಮಂತ್ರಿ ಮಾಡುತ್ತೇನೆ' ಎಂದು ಕರೆದಿದ್ದರೂ ಕೊನೆಯ ಘಳಿಗೆಯಲ್ಲಿ ನನ್ನ ಹೆಸರು ಕೈಬಿಟ್ಟರು.1983ರಲ್ಲಿ ರಾಜಕಾರಣದಲ್ಲಿರುವ ನಾನು ಹಿರಿಯನೋ, 1993ರಲ್ಲಿ ರಾಜಕಾರಣಕ್ಕೆ ಬಂದವರು ಹಿರಿಯರೋ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಹಾಗಂತ ಮಂತ್ರಿ ಹುದ್ದೆ ಸಿಗಲಿಲ್ಲ ಎಂದು ಪಕ್ಷದ ವಿರುದ್ಧ ಎಂದಿಗೂ ನಾನು ಮಾತನಾಡಿಲ್ಲ. ಪಕ್ಷದ ತತ್ವ ಸಿದ್ದಾಂತವನ್ನು ನಂಬಿ ಪಕ್ಷನಿಷ್ಠನಾಗಿದ್ದೇನೆ ಕಾರಣ ನಾನು ಮುಂದೇಯೂ ಯಾವತ್ತಿಗೂ ಪಕ್ಷದ ವಿರುದ್ಧವಾಗಿ ಮಾತನಾಡುವುದೂ ಇಲ್ಲ ಎಂದು ಹೇಳಿದರು.
1985ರಲ್ಲಿ ಟಿಕೇಟ್ ನನಗೆ ಸಿಗಲಿಲ್ಲ. ಆಗ ಜೆ.ಎಸ್. ದೇಶಮುಖರು ತಮ್ಮ ಪಾರ್ಟಿಗೆ ಬರಲು ಹೇಳಿದರು.ಆದರೆ ನಾನು ನಿರಾಕರಿಸಿದೆ.ಟಿಕೆಟ್ ತರಲು ದಿಲ್ಲಿಗೆ ಹೋಗಲಿಲ್ಲ. ಅರ್ಜಿ ಹಾಕಿ ಮನೆಯಲ್ಲಿ ಕೂತಿದ್ದೇನೆ ಮನೆಯವರಿಗೂ ತಂದು ನನಗೆ ಟಿಕೆಟ್ ಕೊಟ್ಟಿದ್ದಾರೆ.ಪಕ್ಷದ ನಿಷ್ಠೆ ಇದ್ದರೆ ಪಕ್ಷ ತಮ್ಮನ್ನು ಗುರುತಿಸುತ್ತದೆ ಎಂಬುದಕ್ಕೆ ನಾನೇ ಉದಾಹರಣೆ.ನನ್ನ ಹಿಂದೆ ಮಾತನಾಡುವವರು ಎದುರಿಗೆ ಕೂತು ತಮ್ಮ ಅಸಮಾಧಾನಗಳನ್ನು ತೋಡಿಕೊಳ್ಳಬೇಕು ಎಂದರು.
ಇದೇ ಅ,11 ರಂದು ನನ್ನ ಜನ್ಮ ದಿನವಿದೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಜನ್ಮ ದಿನಾಚರಣೆಯ ಬಗ್ಗೆ ಒಲವು ಹೊಂದಿದ್ದಾರೆ. ಅವರ ಅಭಿಮಾನಕ್ಕೆ, ಪ್ರೀತಿ ಸಹಕಾರಕ್ಕೆ ಅಭಿನಂದಿಸುತ್ತೇನೆ. ಆದರೇ ಈ ಬಾರಿ ಮತಕ್ಷೇತ್ರವೂ ಸೇರಿದಂತೆ ಎಲ್ಲೆಡೆ ವಿಪರಿತ ಮಳೆ ಬಂದು ರೈತರು ಬೆಳೆದ ಬೆಳೆ ಫಸಲು ಕೈಸೇರದೆ ತೀವೃ ಸಂಕಷ್ಠದಲ್ಲಿದ್ದಾರೆ ಎಷ್ಟೋ ಜನ ಮಳೆಗಳನ್ನು ಕಳೆದುಕೊಂದು ನೋವಿನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ನನ್ನ ಜನ್ಮ ದಿನಾಚರಣೆ ಆಚರಿಸಿಕೊಳ್ಳುವುದು ಸರಿಯಲ್ಲ. ಕಾರಣ ಈ ವರ್ಷ ನಾನು ನನ್ನ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳಬಾರದು ಎಂದು ತಿರ್ಮಾನಿಸಿದ್ದೇನೆ ಮಾತ್ರವಲ್ಲದೇ ಅಂದು ನಾನು ಮತಕ್ಷೇತ್ರದಲ್ಲಿರದ ಕಾರಣ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಆಡಂಭರದ, ಹಾಗೂ ವೈಭವದ ನನ್ನ ಜನ್ಮ ದಿನಾಚರಣೆಯನ್ನು ಕೈಬಿಡಬೇಕು ಎಂದರು.
ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ಎಚ್. ಎಸ್. ಮಾತನಾಡಿ, ಬಿಜೆಪಿಯವರು ಆರಂಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು. ರಾಜ್ಯದಲ್ಲಿ ನಮ್ಮ ಕಾಂಗ್ರೇಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಸರಕಾರ ದಿವಾಳಿಯಾಗಿದೆ ಎಂದು ವಿರೋಧ ಪಕ್ಷವಾದ ಬಿಜೆಪಿ ಆರೋಪಿಸುತ್ತಿದೆ. ಆದರೇ ಬೇರೆ ಬೇರೆ ರಾಜ್ಯಗಳಲ್ಲಿ ಇದೇ ಯೋಜನೆಗಳನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಗ್ಯಾರಂಟಿ ಯೋಜನೆಗಳನ್ನು ವಿಶ್ವಸಂಸ್ಥೆ ಪ್ರಶಂಸೆ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸರ್ವ ಧರ್ಮ ಒಗ್ಗೂಡಿಸುವ ಕೆಲಸ ಮಾಡಿದೆ. ಆದರೆ ಪ್ರಧಾನಿ ಮೋದಿ ಅವರು ಧರ್ಮ ಧರ್ಮಗಳ ಮದ್ಯೆ ಕೋಮುವಾದಗಳನ್ನು ಸೃಷ್ಠಿಸಿ ಅಶಾಂತಿಯ ವಾತಾವರಣ ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆದರೆ ಬೇರೆ ಬೇರೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮಾತನಾಡಿ, ಬೂತ್ ಮಟ್ಟದಲ್ಲಿ ಕಮೀಟಿ ಮಾಡಬೇಕು. ಬ್ಲಾಕ್, ವಿಧಾನಸಭೆ ಮಟ್ಟದಲ್ಲಿ ಬ್ಲಾಕ್ ಮಾಡಬೇಕು.ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪುರಸಭೆ ಚುನಾವಣೆಗಳಿಗೆ ಈಗಿನಿಂದಲೇ ಸಿದ್ಧರಾಗುವಂತೆ ತಿಳಿಸಿದರು. ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ನಿಗಂ ಭಂಡಾರಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಭಜಂತ್ರಿ ಮಾತನಾಡಿದರು. ಕೆಪಿಸಿಸಿ ಸದಸ್ಯ ರಾಮರಾಯ ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಯುವ ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಸಚೀನಗೌಡ ಪಾಟೀಲ, ಎನ್. ಎಸ್. ಯೂ.ಐ ರಾಜ್ಯಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ರಾಜ್ಯ ಯುವ ಕಾರ್ಯದರ್ಶಿ ಸತ್ಯಜೀತ, ವಿಧಾನಸಭಾ ಯುವ ಘಟಕದ ಅಧ್ಯಕ್ಷ ಮೊಹ್ಮದ ಇಲಿಯಾಸ ಢವಳಗಿ, ದೀಪಕಗೌಡ, ಜಿಲ್ಲಾ ಅಧ್ಯಕ್ಷ ಮೊಯಿನ್ ಪದಾಧಿಕಾರಿಗಳಾದ ಬಾಹುಬಲಿ, ಶ್ರೀಧರ, ಪುರಸಭೆ ಅಧ್ಯಕ್ಷ ಮೆಹಬೂಲ ಗೊಳಸಂಗಿ, ಮಹಿಳಾ ಘಟಕದ ಅಧ್ಯಕ್ಷ ಅಕ್ಷತಾ ಚಲವಾದಿ, ಮಹ್ಮದರಫೀಕ ಶಿರೋಳ ಮೊದಲಾದವರು ಇದ್ದರು. ಲಕ್ಷಣ ಲಮಾಣಿ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 