ಶಿಗ್ಗಾವಿ 12 : ಜನರು ಪ್ರತಿನಿತ್ಯ ಬದುಕಿನಲ್ಲಿ ಬಳಕೆ ಮಾಡುತ್ತಿರುವ ವಸ್ತುಗಳ ಬೆಲೆಯನ್ನು ಮುಗಿಲೆತ್ತರಕ್ಕೆ ಏರಿಸಿ ಜನರ ಬದುಕು ಸಾಲದಲ್ಲಿ ಸಿಲುಕುವಂತೆ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಮಾಜಿ ಎನ್ ಡಬ್ಲ್ಯೂ ಕೆ ಆರ್ ಟಿ ಸಿ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ವರದಿಗಾರರೊಂದಿಗೆ ಮಾತನಾಡಿದ ಅವರು ಗ್ಯಾರಂಟಿಗಳನ್ನು ಮುಂದಿಟ್ಟು ಜನರನ್ನು ಯಾಮರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ರಹಲಕ್ಷ್ಮಿ ಯೋಜನೆಯಿಂದ ಮನೆ ಮಹಿಳೆಗೆ 2000 ಕೊಟ್ಟು ದಿನಬಳಕೆ ವಸ್ತುಗಳ ಬೆಲೆ ಏರಿಸಿ ಅದೇ ಮನೆ ಯಮಾನನಿಂದ ದುಪ್ಪಟ್ಟು ಹಣ ಕಿತ್ತುಕೊಳ್ಳುವ ಈ ಸರ್ಕಾರ ನಮಗೆ ಬೇಕಾ ಎನ್ನುವಂತೆ ಯಕ್ಷಪ್ರಶ್ನೆ ಜನರಲ್ಲಿ ಮೂಡಿದೆ.ಹಾಲು,ಹಾಲ್ಕೋ ಹಾಲು, ಕರೆಂಟು, ಡೀಸೆಲ್, ಪೆಟ್ರೋಲ್, ಪಹಣಿ ಪತ್ರಿಕೆ,ನೊಂದಣಿ ಫೀಸ್, ದಿನಬಳಕೆಯ ಎಲ್ಲ ವಸ್ತುಗಳ ಬೆಲೆಯನ್ನುಏರಿಸುವ ಮೂಲಕ ಜನರಿಗೆ ಬರೆಯಳೆದಿದೆ ರೈತರಿಗೆ ಅನ್ನದಾತ ಎಂದು ಬಾಯಲ್ಲಿ ಮಾತನಾಡಿ ನಯ್ಯಾ ಪೈಸಾ ಕೂಡ ಈ ಕಾಂಗ್ರೆಸ್ ಸರಕಾರ ಬೆಳೆ ಹಾನಿ ಬೆಳೆ ನಷ್ಟ ನೀಡಿಲ್ಲ ರೈತ ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಾಗಿದೆ. ಬಿಜೆಪಿ ಸರಕಾರ ಇದ್ದಾಗ ರೈತರ ಪಂಪ್ಸೆಟ್ಟುಗಳಿಗೆ ಟಿಸಿ ಜೋಡಿಸಲು ಕೇವಲ 25000 ದಲ್ಲಿ ವಿದ್ಯುತ್ ಸಂಪರ್ಕ ಕೊಡುತ್ತಿದ್ದೆವು ಈಗ ಎರಡರಿಂದ ಮೂರು ಲಕ್ಷ ರೂಪಾಯಿಗಳನ್ನು ಕೇಳುತ್ತಿರುವುದು ಇದು ಯಾವ ನ್ಯಾಯ ವಾರಂಟಿ ಇಲ್ಲದ ಗ್ಯಾರಂಟಿ ಯೋಜನೆಗಾಗಿ ಆಡಳಿತ ಮಾಡುತ್ತಿರುವ ಈ ಸರಕಾರವನ್ನು ಕಿತ್ತು ಒಗೆಯಲು ಜನರು ನಿರ್ಧರಿಸಿದ್ದಾರೆ ಕಾಂಗ್ರೆಸ್ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಯಾವ ಹಳ್ಳಿಯಿಂದ ಹಿಡಿದು ನಗರದಲ್ಲಿಯೂ ಕೂಡ ಹೊಸ ಅಭಿವೃದ್ಧಿಯ ಯೋಜನೆ ಕಾಮಗಾರಿಗಳು ಪ್ರಾರಂಭವಾಗಿಲ್ಲ.
ಹಳ್ಳಿ ಹಳ್ಳಿಯಲ್ಲಿ ಜೂಜು ಮಟ್ಕಾ ಸರಾಯಿ ಹಾವಳಿ ಹೆಚ್ಚಾಗಿದೆ ಕಾನೂನು ಸುವ್ಯವಸ್ಥೆ ಹಾಳಾಗಿ ಹೋಗಿದೆ. ಎಚ್ಚೆತ್ತುಕೊಂಡು ಕೂಡಲೇ ವಸ್ತುಗಳ ಬೆಲೆ ಏರಿಕೆಯನ್ನು ಇಳಿಸದಿದ್ದರೆ ಉಚಿತವಾಗಿ ರೈತರ ಪಂಪ್ಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.