ಮಹಿಳಾ ಮೀಸಲಾತಿ ಮಸೂದೆ ಜಾರಿ ತಡೆದ ಕಾಂಗ್ರೆಸ್: ಮಿತ್ರಪಕ್ಷಗಳ ವಿರುದ್ಧ ಮಹಿಳಾ ಮೋರ್ಚಾ ಆಕ್ರೋಶ
Congress blocks implementation of women's reservation bill: Mahila Morcha protests against allies
ಯರಗಟ್ಟಿ 27: ನಾರಿ ಶಕ್ತಿ ಫೋರಂ ನಿಂದ ನಾರಿ ಶಕ್ತಿ ವಂದನಾ ಅಧಿನಿಯಮ (ಮಹಿಳಾ ಮೀಸಲಾತಿ ಮಸೂದೆ) ಜಾರಿಯಾಗದಂತೆ ತಡೆದ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಬಿಜೆಪಿ ಮಂಡಳಿದಿಂದ ಜನಾಕ್ರೋಶ ಜಾಥಾ ನಡೆಸಿದರು.
ಶೇ 33 ರಷ್ಟು ಮಹಿಳಾ ಮೀಸಲಾತಿ ಬೇಕೆ, ಬೇಕು, ನಾರಿ ಶಕ್ತಿ ದೇಶದ ಶಕ್ತಿ ಸೇರಿದಂತೆ ಹಲವು ಘೋಷಣೆಗಳ ಫಲಕ ಹಿಡಿದ ಮಹುಳೆಯರು, ಅದರಲ್ಲೂ ಅಲ್ಪ ಸಂಖ್ಯಾತರು, ತೃತೀಯ ಲಿಂಗಿಗಳು, ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಪಟ್ಟಣದ ಮಹಾಂತ ದುರದುಂಡೇಶ್ವರ ಮಠದದಿಂದ ಆರಂಭಗೊಂಡ ಜಾಥಾ ಸಂಗೋಳ್ಳಿ ರಾಯಣ್ಣ ಸರ್ಕಲ್ ಗೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ನಾರಿಯರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಡಾ.ನಯನಾ ಭಸ್ಮಿ ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಮಹಿಳೆಯರಿಗೆ ರಾಜಕೀಯವಾಗಿ ಹೆಚ್ಚಿನ ಶಕ್ತಿ ತರಲು ನಡೆಸುದ ಪ್ರಯತ್ನಕ್ಕೆ ವಿರೋಧ ಪಕ್ಷಗಳು ವಿರೋದ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದರು.ಬಿಜೆಪಿ ಮಹಿಳಾ ಅಧಕ್ಷ ಜ್ಯೋತಿ ಅಣ್ಣಿಗೇರಿ ಮಾತನಾಡಿ, ದೇಶದ ರಾಷ್ಟ್ರಪತಿ, ಹಣಕಾಸು ಸಚಿವೆ, ಅಷ್ಟೇ ಏಕೆ ಆಪರೇಷನ್ ಸಿಂದೂರವನ್ನು ಮುನ್ನಡೆಸಿದವರು ಮಹಿಳಾ ಶಕ್ತಿಯೇ ಹೀಗಿರುವಾಗ ಪ್ರತಿಪಕ್ಷಗಳು ನಾರಿ ಶಕ್ತಿ ರಾಜಕೀಯವಾಗಿ ಮೀಸಲಾತಿ ಪಡೆಯುವುದನ್ನು ವಿರೋಧಿಸುವುದು ಸರಿಯಲ್ಲ ನಮ್ಮ ಹೋರಾಟ ನಿರಂತರ ಎಂದರು. ಮಾಜಿ ಮಂಡಳ ಅಧ್ಯಕ್ಷ ಈರಣ್ಣಾ ಚಂದರಗಿ ಅವರು ಮಾತನಾಡಿ, ಮಹಿಳಾ ಮೀಸಲಾತಿಯನ್ನು ಮಹಿಳೆಯರ ಹಕ್ಕಾಗಿ ನೀಡಿ, ಈಗಾಗಲೇ ಸಂಸತ್ ನಲ್ಲಿ ಮಸೂದೆ ಅನುಮೋದನೆಗೊಂಡಿದೆ ಅದನ್ನು ಕ್ಷೇತ್ರ ಮರುವಿಂಗಡಣೆ ಮೂಲಕ ಜಾರಿಗೆ ತನ್ನಿ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಅನುರಾಧ ಬೆಟಗೇರಿ, ಶೇಖವ್ವ ನಾವಿ, ಮೈತ್ರಾ ಹೊಂಗಲ, ಯಶೋದಾ ಕಾಶಪ್ಪನವರ, ಲಕ್ಷ್ಮೀ ಪಾಟೀಲ, ಕಸ್ತೂರಿ ಹೊಸೂರ, ಮಾಜಿ ಮಂಡಳ ಅಧ್ಯಕ್ಷ ಈರಣ್ಣಾ ಚಂದರಗಿ, ಮಂಡಳ ಉಪಾಧ್ಯಕ್ಷ ಸಂಜೀವಕುಮಾರ ನವಲಗುಂದ, ಮಾಜಿ ಸೈನಿಕ ಕುಮಾರ ಹಿರೇಮಠ, ಪ್ರಕಾಶ ನರಿ, ಮಂಡಳ ಪ್ರಧಾನ ಕಾರ್ಯದರ್ಶಿ ಮಹಾದೇವ ಮುರಗೋಡ, ಯುವ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ತೊರಗಲ್, ವೆಂಕಟೇಶ ದೇವರಡ್ಡಿ, ಶೇಖಪ್ಪ ಹರಳಿ, ಮಲ್ಲೇಶ್ವರ ಸುಳೇಬಾವಿ, ಆನಂದ ಬಾಗೋಡಿ ಮೊದಲಾದವರು ಪಾಲ್ಗೊಂಡಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 