ಯುವ ಕವಯತ್ರಿ ನಭಾ ಒಕ್ಕುಂದ ಅವರಿಗೆ ಅಭಿನಂದನಾ ಸಮಾರಂಭ
Congratulatory ceremony for young poetess Nabha Okkunda
ಲೋಕದರ್ಶನ ವರದಿ
ಹುಬ್ಬಳ್ಳಿ 22 : ಧಾರವಾಡದ ನಭಾ ಒಕ್ಕುಂದ ಅವರು ಬಹುಮುಖ ಪ್ರತಿಭೆಯ ಕಲಾ ವಿದ್ಯಾರ್ಥಿಯಾಗಿದ್ದು, ಅತ್ಯುತ್ತಮ ಕನ್ನಡ ಕವಯತ್ರಿ, ದೃಶ್ಯ ಕಲಾವಿದೆ (ಗಿಣಚಿಟ ಂಡಿಣಣ) ಮತ್ತು ಸೃಜನಶೀಲ ಕನ್ನಡ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ದೃಶ್ಯಕಲೆ ವಿದ್ಯಾರ್ಥಿಯಾಗಿರುವ ಇವರು, ಕೇವಲ 14ನೇ ವಯಸ್ಸಿನಲ್ಲೇ ತಮ್ಮ ಕವನ ಸಂಕಲನ ಮತ್ತು ನಿಸರ್ಗದಿಂದ ಪ್ರೇರಿತವಾದ 74ಕ್ಕೂ ಹೆಚ್ಚು ವರ್ಣಚಿತ್ರಗಳನ್ನು ಪ್ರದರ್ಶಿಸಿ ಪ್ರಶಂಸೆ ಪಡೆದಿದ್ದಾರೆ. ಸಾಹಿತ್ಯ ಮತ್ತು ಕಲೆಯ ವಾತಾವರಣದಲ್ಲಿ ಬೆಳೆದ ನಭಾ ತಂದೆ-ತಾಯಿ ಇಬ್ಬರೂ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳಾಗಿದ್ದಾರೆ.
ಅಕ್ಷರ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಡಾ. ಪ್ರಹ್ಲಾದ್ ಅಗಸನಕಟ್ಟೆ ಕಥಾ ಬಹುಮಾನ ಪ್ರಧಾನ ಸಮಾರಂಭದಲ್ಲಿ ಕವಯತ್ರಿ ನಭಾ ಒಕ್ಕುಂದ ಅವರಿಗೆ 2026ರ ಡಾ ಪ್ರಹ್ಲಾದ್ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಬಹುಮಾನ ಪ್ರಶಸ್ತಿ ಪ್ರದಾನ ಮಾಡಿದ ಶುಭ ಸಂದರ್ಭದಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಸದಸ್ಯರು ನಭಾ ಅವರನ್ನು ಭೇಟಿ ಮಾಡಿ ಆತ್ಮೀಯವಾಗಿ ಗೌರವಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ನಭಾ ಅವರಿಂದ ಇನ್ನೂ ಉತ್ಕೃಷ್ಠ ಸಾಹಿತ್ಯ ಕೃಷಿ ಜರುಗಲಿ ಎಂದು ಶುಭ ಕೋರಿದರು. ಸೋಹನ ಸುರೇಶ ಹೊರಕೇರಿ, ಸುನಂದಾ ಕಡಮೆ, ಮಹಾಂತಪ್ಪ ನಂದೂರ, ಡಾ. ಡಿ.ಎಸ್ ಚೌಗಲೆ, ಡಾ ಕೆ ಎಫ್ ಕಮ್ಮಾರ, ಆರ್ ಎಂ ಗೋಗೇರಿ, ವಿ.ಜಿ. ಪಾಟೀಲ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ,
ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಚನ್ನಪ್ಪ ಅಂಗಡಿ, ಗಾಯತ್ರಿ ರವಿ, ಡಾ ಸಿದ್ದೇಶ್ವರ ಕಟಕೋಳ, ಸಿ.ಎಂ ಮುನಿಸ್ವಾಮಿ, ಪ್ರಕಾಶ ಕಡಮೆ, ನಿರ್ಮಲ ಶೆಟ್ಟರ್, ವಿನಯಾ ಒಕ್ಕುಂದ, ಎಂ ಡಿ ಒಕ್ಕುಂದ, ವಿಜಯಾ ಅಗಸನಕಟ್ಟೆ, ಹರ್ಷ ಅಗಸನಕಟ್ಟೆ, ಸಂಜೀವ ದುಮುಕನಾಳ, ಸಿ ಎಂ ಚನ್ನಬಸಪ್ಪ, ವಿರೂಪಾಕ್ಷ ಕಟ್ಟಿಮನಿ, ಡಾ ಲಿಂಗರಾಜ ಅಂಗಡಿ, ಪ್ರೊ ಕೆ ಎಸ್ ಕೌಜಲಗಿ, ಸರೋಜಾ ಮೇಟಿ, ವೀರಣ್ಣ ಬಡಿಗೇರ, ಮುಂತಾದವರು ನಭಾ ಅವರಿಗೆ ಶುಭ ಕೋರಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 