ಬೆಳಗಾವಿ ಜಿಲ್ಲಾ 17ನೇ ಕಸಾಪ ಸರ್ವಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ
Congratulatory ceremony for the 17th Kasap Sarvadhyaksha of Belgaum District
ಬೆಳಗಾವಿ ಜಿಲ್ಲಾ 17ನೇ ಕಸಾಪ ಸರ್ವಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ
ಹಾರೂಗೇರಿ : ಡಾ.ವಿ.ಎಸ್.ಮಾಳಿ ಅವರ ಸರ್ವಾಧ್ಯಕ್ಷತೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯಾಭಿಮಾನದ ಗೌರವ ಹೆಚ್ಚಲಿದೆ. ಸಮ್ಮೇಳನವನ್ನು ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಜರುಗುತ್ತಿರುವುದು ಹೆಮ್ಮೆ, ಅಭಿಮಾನದ ಸಂಗತಿಯಾಗಿದ್ದು, ಐತಿಹಾಸಿಕ ಮತ್ತು ಯಶಸ್ಸಿಗೆ ಸಕಲ ಜವಾಬ್ದಾರಿಗಳನ್ನು ನಿರ್ವಹಿಸುವುದಾಗಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಪಟ್ಟಣದ ವಿದ್ಯಾನಗರದ ನಿವಾಸದಲ್ಲಿ ರವಿವಾರ ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ವಿದ್ವಾಂಸ, ವಿಮರ್ಶಕ ಡಾ.ವಿ.ಎಸ್.ಮಾಳಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು ಈವರೆಗೆ ನಡೆದ ಹಾಗೂ ಇನ್ನು ಮುಂದೆ ನಡೆಯಲಿರುವ ಜಿಲ್ಲಾ ಸಮ್ಮೇಳನಗಳಿಗೆ ಮಾದರಿಯಾಗುವಂತೆ ಹಾರೂಗೇರಿಯಲ್ಲಿ ನಡೆಯಲಿರುವ ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ ಸಾಕ್ಷಿಯಾಗಲಿದ್ದು, ಈ ನಿಟ್ಟಿನಲ್ಲಿ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ಮುಂದಿನ ದಿನಗಳಲ್ಲಿ ಸಭೆಗಳನ್ನು ನಡೆಸಲಾಗುವುದೆಂದು ತಿಳಿಸಿದರು.
ರಾಯಬಾಗ ತಹಸೀಲ್ದಾರ ಸುರೇಶ ಮುಂಜೆ ಮಾತನಾಡಿ ಸಾಹಿತಿಗಳ ಸಾಹಿತಿ ಡಾ.ಮಾಳಿ ಅವರು ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪೀಠವನ್ನು ಅಲಂಕರಿಸುತ್ತಿರುವುದು ಕನ್ನಡ ಸಾಹಿತ್ಯ ಲೋಕವೇ ಹೆಮ್ಮೆ ಪಡುವಂತದ್ದು. ಸಮ್ಮೇಳನ ಅರ್ಥಪೂರ್ಣವಾಗಿ ಜರುಗಲು ತಾಲೂಕಾಡಳಿತ ಅಗತ್ಯ ಕ್ರಮ ಮತ್ತು ಎಲ್ಲ ಸಹಕಾರ ನೀಡಲಿದೆ ಎಂದರು.
ಅಭಿನಂದನೆಯ ಸತ್ಕಾರ ಸ್ವೀಕರಿಸಿ ಸಾಹಿತಿ ಡಾ.ವಿ.ಎಸ್.ಮಾಳಿ ಮಾತನಾಡುತ್ತ ಸರ್ವಾಧ್ಯಕ್ಷತೆಗೆ ಅರ್ಹ ಹಿರಿಯರಿದ್ದರೂ, ನನ್ನನ್ನು ಆಯ್ಕೆ ಮಾಡಿದ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹಾಗೂ ಪದಾಧಿಕಾರಿಗಳ ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳು. ಇಂದು ಸಾಹಿತ್ಯ ಪರಿಷತ್ ಹಾಗೂ ಸಮ್ಮೇಳನಗಳು ದಾರಿ ತಪ್ಪುತ್ತಿದ್ದು, ನಾವು ಮಾಡುವ ಸಮ್ಮೇಳನ ಉಳಿದ ಸಮ್ಮೇಳನಗಳಿಗೆ ಮಾದರಿಯಾಗಬೇಕಿದೆ. ಸರಳ, ಆಡಂಭರ ರಹಿತ, ದುಂದುವೆಚ್ಚಕ್ಕೆ ಆಸ್ಪದವಿಲ್ಲದೇ, ಕನ್ನಡ ಸಾಹಿತ್ಯಾಭಿಮಾನಿ, ಆಸಕ್ತರು ಬರಬೇಕೆನ್ನುವುದು ನನ್ನ ಆಪೇಕ್ಷೆ. ತಮ್ಮೆಲ್ಲರ ಪ್ರೀತಿ ಅಭಿಮಾನ ಈ ಗೌರವಕ್ಕಿಂತಲೂ ದೊಡ್ಡದೆಂದು ಹೇಳಿದರು.
ರಾಯಬಾಗ ತಾಲೂಕು ಕಸಾಪ ಅಧ್ಯಕ್ಷ ರವೀಂದ್ರ ಪಾಟೀಲ, ಹಾರೂಗೇರಿ ವೃತ್ತ ಸಿಪಿಐ ರತನಕುಮಾರ ಜೀರಗಿಹಾಳ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಬಿ.ಎ.ಜಂಬಗಿ, ಬಸನಗೌಡ ಆಸಂಗಿ, ಆನಂದಗೌಡ ಪಾಟೀಲ, ಮಲ್ಲಪ್ಪ ಐನಾಪೂರ, ಮಾಳು ಹಾಡಕಾರ, ಪ್ರದೀಪ ಹಾಲ್ಗುಣಿ, ಟಿ.ಎಸ್.ವಂಟಗೂಡಿ, ಎಂ.ಎಸ್.ಬಳವಾಡ, ಎಸ್.ಕೆ.ಗುರುನಾಥ, ಮದುಸೂಧನ ಬೀಳಗಿ, ಭರಮು ಪೂಜೇರಿ, ಲಕ್ಷ್ಮಣ ಜಾಯಗೋಣಿ, ಗದಗೇಶ ದುಂಡಗಿ, ಸಿದ್ದು ಅಥಣಿ, ವರ್ಧಮಾನ ಶಿರಹಟ್ಟಿ ಹಾಗೂ ಮೊದಲಾದ ಗಣ್ಯರು, ಕಸಾಪ ಸದಸ್ಯರು ಉಪಸ್ಥಿತರಿದ್ದರು.
ಫೋಟೋ ಶಿರ್ಷಿಕೆ : 10ಹಾರೂಗೇರಿ ಸುದ್ದಿ-1 - ಹಾರೂಗೇರಿಯಲ್ಲಿ ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ವಿದ್ವಾಂಸ, ವಿಮರ್ಶಕ ಡಾ.ವಿ.ಎಸ್.ಮಾಳಿ ಅವರನ್ನು ಶಾಸಕ ಮಹೇಂದ್ರ ತಮ್ಮಣ್ಣವರ ಅಭಿನಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 