ಜೆಎಸ್‌ಎಸ್ ಎನ್‌.ಸಿ.ಸಿ. ತರಬೇತಿ. ಶಿಬಿರದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಅಭಿನಂದನೆ

ಜೆಎಸ್‌ಎಸ್ ಎನ್‌.ಸಿ.ಸಿ. ತರಬೇತಿ. ಶಿಬಿರದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಅಭಿನಂದನೆ  Congratulations to the winners of various competitions organized in the JSS NCC training camp.

ಧಾರವಾಡ 10: ಧಾರವಾಡದ 5 ಕರ್ನಾಟಕ ಗರ್ಲ್ಸ್‌ ಬಟಾಲಿಯನ್‌ನ ಕಮಾಂಡಿಂಗ್ ಆಫಿಸರ್, ಲೆಪ್ಟಿನೆಂಟ್ ಕರ್ನಲ್ ಸುಸನ್ ರಾಯ್ ಹಾಗೂ ಅವರ ತಂಡದ ನೇತೃತ್ವದಲ್ಲಿ ಕಿತ್ತೂರಿನ ಕಿತ್ತೂರು ಸೈನಿಕ ಶಾಲೆಯಲ್ಲಿ ದಿನಾಂಕ 26.10.2025 ರಿಂದ 04.11.2025 ರವರೆಗೆ ಎನ್‌.ಸಿ.ಸಿ. ವಾರ್ಷಿಕ ತರಬೇತಿ ಶಿಬಿರ ನಡೆಯಿತು.  

ಈ ಶಿಬಿರದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಜೆ.ಎಸ್‌.ಎಸ್‌. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಎನ್‌.ಸಿ.ಸಿ. ವಿದ್ಯಾರ್ಥಿನಿಯರು ಭಾಗವಹಿಸಿ, ಸಮೂಹ ಸಂಗೀತ, ಮೂಕಾಭಿನಯ ಮತ್ತು ಟಗ್ ಆಫ್ ವಾರ್‌ನಲ್ಲಿ - ಪ್ರಥಮ ಸ್ಥಾನ, ಸಮೂಹ ನೃತ್ಯ, ಕಾಂಟಿಜೆಂಟ್ ಡ್ರಿಲ್ (ಡಿಎಸ್‌ಟಿ) ಮತ್ತು ಸೋಲೋ ನೃತ್ಯದಲ್ಲಿ - ಎರಡನೇ ಸ್ಥಾನ ಮತ್ತು 400 ಮೀಟರ್ ಓಟದಲ್ಲಿ - ಮೂರನೇ ಸ್ಥಾನ ಪಡೆದು ಪ್ರತಿಷ್ಠಿತ ‘ಜನರಲ್ ಚಾಂಪಿಯನ್‌ಶಿಪ್‌’ ಗಳಿಸಿತು. ಕಾಲೇಜಿನ ಎನ್‌.ಸಿ.ಸಿ. ಅಧಿಕಾರಿಯಾದ ಲೆಫ್ಟಿನೆಂಟ್ ಡಾ. ಕವಿತಾ ಭಜಂತ್ರಿ ಅವರು ಮಾರ್ಗದರ್ಶನ ಮಾಡಿದ್ದರು. 

ವಿಜೇತ ವಿದ್ಯಾರ್ಥಿಗಳಿಗೆ ಜನತಾ ಶಿಕ್ಷಣ ಸಮಿತಿಯ ಮಾನ್ಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ, ಆಡಳಿತ ಅಧಿಕಾರಿಗಳಾದ  ಅರಿಹಂತ ಪ್ರಸಾದ, ಕಾಲೇಜಿನ ಅಭಿವೃದ್ಧಿ ಅಧಿಕಾರಿಗಳಾದ ಡಾ. ಸೂರಜ್ ಜೈನ, ಪ್ರಾಚಾರ್ಯರಾದ ಡಾ. ವೆಂಕಟೇಶ ಮುತಾಲಿಕ ಹಾಗೂ ಕಾಲೇಜಿನ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿರುತ್ತಾರೆ.