ಕೊಪ್ಪಳ 06: ಕೊಪ್ಪಳದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರಾ್ಯಲಿ ಸುಸೂತ್ರವಾಗಿ ನಡೆಯಲು ಸಹಕಾರ ನೀಡಿದ ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ಎಡಿಜಿ. ರಿಕ್ರ್ಯೂಟಿಂಗ್ ಝಡ್‌ಆರ್‌ಒ ಬೆಂಗಳೂರಿನ ಮೇಜರ್ ಜನರಲ್ ಹರಿಪಿಳೈ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರಾ್ಯಲಿ ವೀಕ್ಷಿಸಿದ ನಂತರ ಸೇನಾ ನೇಮಕಾತಿ ರಾ್ಯಲಿ ಸುಸೂತ್ರವಾಗಿ ನಡೆಯಲು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ ಕೊಪ್ಪಳ ಜಿಲ್ಲಾಡಳಿತದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತೀಯ ಸೇನೆಯ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಬೆಳಗಾವಿ ವಿಭಾಗದಲ್ಲಿ ನಡೆದ ದೊಡ್ಡ ಮಟ್ಟದ ಈ ರಾ್ಯಲಿ ಯಶಸ್ವಿಯಾಗಿ ನಡೆಯಲು ತಮ್ಮೆಲ್ಲರ ಉತ್ತಮ ಸಹಕಾರ ಇದೆ. ನಮ್ಮ ಪ್ರಯತ್ನ ನಿಜವಾದ ಪ್ರತಿಭಾವಂತರಿಗೆ ತಲುಪಬೇಕು. ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಬಹಳಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಅಂತವರಿಗೆ ನಾವು ಪ್ರೋತ್ಸಾಹ ನೀಡಬೇಕಿದೆ. ಉತ್ತಮ ರೀತಿಯಲ್ಲಿ ಸೇನಾ ನೇಮಕಾತಿ ರಾ್ಯಲಿ ನಡೆಸುತ್ತಿರುವ ನಮ್ಮ ತಂಡಕ್ಕು ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಡೈರೆಕ್ಟರ್ ರಿಕ್ರೂಟಿಂಗ್ ಎ.ಆರ್.ಓ ಬೆಳಗಾವಿಯ ಕರ್ನಲ್ ಎ.ಕೆ. ಉಪಾಧ್ಯಾಯ ಮಾತನಾಡಿ ಆರಂಭದ ಮೊದಲ ಸಭೆಯಿಂದ ಜಿಲ್ಲಾಡಳಿತ ನಮಗೆ ಉತ್ತಮ ಸಹಕಾರ ನೀಡಿದೆ. ನವೆಂಬರ್. 26 ರಿಂದ ಆರಂಭವಾದ ರಾ್ಯಲಿ ಡಿಸೆಂಬರ್ 8 ಕ್ಕೆ ಮುಗಿಯಲಿದೆ ಬೆಳಗಾವಿ ವಿಭಾಗದ ಬೀದರ. ಕಲಬುರಗಿ. ಯಾದಗಿರಿ. ಕೊಪ್ಪಳ ಸೇರಿದಂತೆ ಇತರೆ 6 ಜಿಲ್ಲೆಗಳ ಅಭ್ಯರ್ಥಿಗಳು ಈ ರಾ್ಯಲಿಗೆ 30 ಸಾವಿರಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 9130 ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಪಾಸಾಗಿ ರಾ್ಯಲಿಗೆ ಬಂದಿದ್ದಾರೆ. ಇದರಲ್ಲಿ 7186 ಅಭ್ಯರ್ಥಿಗಳು ರನ್ನಿಂಗನಲ್ಲಿ ಪಾಸಾಗಿದ್ದಾರೆ. ಮೇಡಿಕಲ್‌ನಲ್ಲಿ 2380 ಅಭ್ಯರ್ಥಿಗಳು ಪಾಸಾಗಿದ್ದು, 1878 ಅಭ್ಯರ್ಥಿಗಳು ಮೇಡಿಕಲ್ ರಿವ್ಹಿವ್‌ಗೆ ಹೋಗಿದ್ದಾರೆ ಆಯ್ಕೆಯಾದ ಅಂತಿಮ ಅಭ್ಯರ್ಥಿಗಳ ಮಾಹಿತಿ ಡಿಸೆಂಬರ್ 8 ರಂದು ತಿಳಿಯಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಮಾತನಾಡಿ ಕೊಪ್ಪಳದಲ್ಲಿ ರಾ್ಯಲಿ ಮಾಡಿದಕ್ಕೆ ನಾವು ತಮಗೆ ಅಭಿನಂದನೆಗಳನ್ನು ತಿಳಿಸುತ್ತೆವೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುವದರ ಜೊತೆಗೆ ಸೇನೆಗೆ ಸೇರಲು ಅವರಿಗೆ ಪ್ರೇರಣೆ ನೀಡಿದಂತಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸೇನಾ ನೇಮಕಾತಿ ರಾ್ಯಲಿಯ ಕರ್ತವ್ಯಕ್ಕೆ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ನಿಯೋಜಿತ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೇನಾಧಿಕಾರಿಗಳಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಸಹಾಯಕ ಆಯುಕ್ತರಾದ ಮಹೇಶ್ ಮಾಲಗತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್. ಅಸಿಸ್ಟೆಂಟ್ ರಿಕ್ರ್ಯೂಟಿಂಗ್ ಆಫೀಸರ್ ಸುಬೇದಾರ ಮೇಜರ್ ದಿನೇಶ್ ಲೋಹಿಯಾ ಸೇರಿದಂತೆ ಸೇನೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸೇನಾ ನೇಮಕಾತಿ ರಾ್ಯಲಿಗೆ ಕೊಪ್ಪಳ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ: ಬೇರೆ- ಬೇರೆ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳಿಗೆ ಉಳಿದುಕೊಳ್ಳಲು ತೊಂದರೆಯಾಗದಂತೆ ಕೊಪ್ಪಳ ನಗರದ ಮಳೆ ಮಲ್ಲೇಶ್ವರ ದೇವಸ್ಥಾನದ ಯಾತ್ರಿ ನಿವಾಸ, ಪೊಲೀಸ್ ಗ್ರೌಂಡ್, ಸಾಹಿತ್ಯ ಭವನದಲ್ಲಿ ವಸತಿ ವ್ಯವಸ್ಥೆಯನ್ನು ಮಾಡುವದರ ಜೊತೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಿಂದ ಜಿಲ್ಲಾ ಕ್ರೀಡಾಂಗಣಕ್ಕೆ ರೈಲು ನಿಲ್ದಾಣ ಹಾಗೂ ಕೊಪ್ಪಳ ಕೇಂದ್ರ ಬಸ್ ನಿಲ್ದಾಣದಿಂದ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ.
ರಾ್ಯಲಿಯಲ್ಲಿ ಭಾಗವಹಿಸಲು ಕೊಪ್ಪಳ ಜಿಲ್ಲೆಗೆ ಬಂದ ಅಭ್ಯರ್ಥಿಗಳ ಅಭಿಪ್ರಾಯ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದ ಮಂಜುನಾಥ ಅರೋಲಿ ಮಾತನಾಡಿ ನಮಗೆ ಉಳಿಸಿಕೊಳ್ಳಲು ವಸತಿ ವ್ಯವಸ್ಥೆ ಮಾಡಿರುವುದರಿಂದ ಅನುಕೂಲವಾಗಿದೆ. ಕುಡಿಯುವ ನೀರಿನ ವ್ಯವಸ್ಥೆ. ಸ್ನಾನಕ್ಕೆ ನೀರು ಮತ್ತು ಶೌಚಾಲಯ ವ್ಯವಸ್ಥೆ ಜೊತೆಗೆ ಸ್ವಚ್ಚತೆಯನ್ನು ದಿನಾಲು ಮಾಡುತ್ತಿದ್ದಾರೆ ಈ ಹಿಂದೆ ಭಾಗವಹಿಸಿದ ರಾ್ಯಲಿಗಳಲ್ಲಿ ಈ ರೀತಿಯ ವ್ಯವಸ್ಥೆ ಎಲ್ಲೂ ಮಾಡಿರಲಿಲ್ಲ ಎಂದರು.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಳಿಮಟ್ಟಿ ಗ್ರಾಮದ ಬಸವರಾಜ ನಾಡಗೌಡ ಮಾತನಾಡಿ ಸೇನಾ ನೇಮಕಾತಿ ರಾ್ಯಲಿಗೆ ಬರುವ ಅಭ್ಯರ್ಥಿಗಳಿಗೆ ಜಿಲ್ಲಾಡಳಿತ ವತಿಯಿಂದ ಅನುಕೂಲ ಮಾಡಲಾಗಿದೆ. ವಸತಿ ಜೊತೆಗೆ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ. ಲಾಡ್ಜಿನಲ್ಲಿ ಎರಡು ಮೂರು ದಿನ ಉಳಿಯಲು ನಮಗೆ ಹಣ ಖರ್ಚಾಗುತ್ತಿತ್ತು ಪ್ರತಿದಿನ 150 ರಿಂದ 200 ಜನರು ಒಂದೊಂದು ಕಡೆ ಉಳಿದುಕೊಳ್ಳಲು ಅನುಕೂಲವಾಗಿದೆ ಎಂದು ಹೇಳಿದರು.
ಬೀದರ ಜಿಲ್ಲೆಯ ಓರಾದ ತಾಲೂಕಿನ ರೇವಣಸಿದ್ದಪ್ಪ ತಂದೆ ಅರ್ಜುನ್ ಮಾತನಾಡಿ ಟ್ರೇಡಮ್ಯಾನ್ ಹುದ್ದೆಯ ಸಂದರ್ಶನಕ್ಕೆ ಬಂದಿದ್ದೆನೆ. ಈ ನೇಮಕಾತಿ ಸುಮಾರು ದಿನಗಳಿಂದ ನಡೆಯುತ್ತಿದೆ ಇಲ್ಲಿ ಉಳಿದುಕೊಳ್ಳಲು ಒಳ್ಳೆಯ ವ್ಯವಸ್ಥೆ ಮಾಡಿದ್ದಾರೆ ನನ್ನ ಎಲ್ಲಾ ಪ್ರಕ್ರೀಯೆಗಳು ಮುಗಿಯಲು 2-3 ದಿನಗಳು ಆಗುತ್ತವೆ ಎಂದು ಹೇಳಿದರು.