ಮತದಾರರಿಗೆ ಶಿವಕುಮಾರ ಉದಾಸಿ ಅಭಿನಂದನೆ
ಹಾವೇರಿ೨೩ : ಸತತ ಮೂರು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾದ ಬಿಜೆಪಿ ಪಕ್ಷದ ಶಿವಕುಮಾರ ಉದಾಸಿ ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ.ಪ್ರತಿಸ್ಪಧರ್ಿ ಕಾಂಗ್ರೇಸ್ ಪಕ್ಷದ ಡಿಆರ್ ಪಾಟೀಲ ವಿರುದ್ಧ ಶಿವಕುಮಾರ ಉದಾಸಿ 1.40.882 ಮತಗಳ ಅಂತರದಿಂದ ಗೆಲುವಿನ ನಗೆ ಬಿರಿದರು. ಮೋದಿಯ ಅಲೆಗೆ ಹಾವೇರಿ ಲೋಕಸಭಾ ಕ್ಷೇತ್ರದ ಮತದಾರರು ಬಿಜೆಪಿ ಪಕ್ಷಕ್ಕೆ ಬಹುಪರಾಕ ಎಂದಿದ್ದಾರೆ.
8 ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಾರಂಭಿಕ ಹಂತದಿಂದಲೇ ಮುಂದೆ ಇದ್ದ ಉದಾಸಿ ಎಂದೋ ಹಿಂದೆ ಬಿಳ್ಳಲೇ ಇಲ್ಲ. ಅಂಚೆ ಮತದಾನದಲ್ಲೂ ಹೆಚ್ಚಿನ ಅಂತರದ ಮಟ್ಟಿಗೆ ಗೆಲುವಿಗೆ ನಾಂದಿ ಹಾಡಿದರು. ಹ್ಯಾಟ್ರಿಕ್ ವಿಜಯ ಸಾಧಿಸಿ ಶಿವಕುಮಾರ ಉದಾಸಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನನ್ನ ಗೆಲುವಿಗೆ ಕಾರಣರಾದ ಹಾವೇರಿ ಲೋಕಸಭಾ ಕ್ಷೇತ್ರದ ಮತದಾರ ಬಂಧುಗಳಿಗೆ, ಬಿಜೆಪಿ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ದೇಶದಲ್ಲಿ 5 ವರ್ಷಗಳ ಆಡಳಿತವನ್ನು ಜನರು ಒಪ್ಪಿಕೊಂಡಿದ್ದಾರೆ.
5 ವರ್ಷಗಳ ಜನಪರ ಕಾರ್ಯಕ್ರಮಗಳು ಮೋದಿ ಸಕರ್ಾರಕ್ಕೆ ಪುಷ್ಠಿ ನೀಡಿವೆ.ದೇಶದ ಸುಭದ್ರತೆ ಹಾಗೂ ಉತ್ತಮ ಆಡಳಿತಕ್ಕೆ ನರೇಂದ್ರ ಮೋದಿಯವರು ನಿರಂತರವಾಗಿ ಶ್ರಮವಹಿಸದ್ದರು. ನರೇಂದ್ರ ಮೋದಿಯವರು ದೇಶದ ಹಿತದೃಷ್ಠಿ ಒಳಿತು ಎಂದು ತಿಳಿದ ಪ್ರಜೆಗಳು ಬಿಜೆಪಿ ಪಕ್ಷಕ್ಕೆ ಬಹುಮತ ನೀಡುವ ಮೂಲಕ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲಿ ಎಂದು ಬಿಜೆಪಿ ಪಕ್ಷದ ಹೆಚ್ಚಿನ ಅಭ್ಯಥರ್ಿಗಳಿನ್ನು ಗೆಲ್ಲಿಸಿ ಶುಭ ಕೋರಿದ್ದಾರೆ ಎಂದರು.ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನರಿಗೆ ಯಾವ ಉದ್ದೇಶಕ್ಕೆ ನನ್ನನ್ನು ತೊಡಗಿಸಿಕೊಂಡು ಪ್ರಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸುತ್ತೇನೆ. ಕ್ಷೇತ್ರದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗುತ್ತೇನೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ.ಮಾಜಿ ಶಾಸಕ ಯುಬಿ ಬಣಕಾರ.ಸತೋಷಕುಮಾರ ಪಾಟೀಲ ಮತ್ತು ಮುಖಂಡರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 