ಲೋಕದರ್ಶನವರದಿ
ಹಾವೇರಿ : ದಲಿತ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಪೆಬ್ರುವರಿ ತಿಂಗಳ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲಾ ಪದಾಧಿಕಾರಿಗಳು ತಮಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಸಮಾವೇಶ ಯಶಸ್ವಿಗಾಗಿ ಈಗಿನಿಂದಲೇ ಡಿಎಸ್ಎಸ್ ಬಲಪಡಿಸಿ ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಹೇಳಿದರು.
ನಗರದ ಕಾಗಿನೆಲೆ ರಸ್ತೆಯ ಮುರುಘರಾಜೇಂದ್ರ ಮಠದಲ್ಲಿ ಡಿಎಸ್ಎಸ್ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ದಲಿತ ಸಮುದಾಯದಕ್ಕೆ ಒಂದಿಲ್ಲೊಂದು ರೀತಿ ಅನ್ಯಾಯವಾಗುತ್ತಿದೆ.
ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು,ನಮ್ಮ ಸಮುದಾಯ ಮುಖ್ಯವಾಹಿನಿಗೆ ಬರಲು ಹೋರಾಟ ಅನಿವಾರ್ಯವಾಗಿದೆ. ಈ ಸಭೆಯಲ್ಲಿ ಡಿಎಸ್ಎಸ್ ಸಂಘಟನೆಗೆ ಪೂರಕವಾಗಿ ಜಿಲ್ಲಾ ಪ್ರಚಾರ ಸಮಿತಿ ರಚನೆ ಮಾಡಲಾಗಿದ್ದು, ಜಿಲ್ಲಾಧ್ಯಕ್ಷರಾಗಿ ನಿಂಗಪ್ಪ ಎಲ್.ಕಡೂರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.ಸಂಘಟನೆಗೆ ಎಲ್ಲರ ಸಹಕಾರ ನೀಡುವಂತಾಗಬೇಕಾಗಿದೆ.ಇತ್ತೀಚಿನ ರಾಜಕೀಯ ಬೆಳವಣೆಗೆ ನೋಡಿದಾಗ ದಲಿತ ಸಮುದಾಯದ ಗೋವಿಂದ ಕಾರಜೋಳ ಉಪಮುಖ್ಯಮಂತ್ರಿಯಾಗಿ ಇದ್ದಾರೆ ಬಿಜೆಪಿ ಪಕ್ಷದ ಹಲವರು ಉಪಮುಖ್ಯಮಂತ್ರಿ ಹುದ್ದೆ ತೆಗೆಯಬೇಕು ಎಂಬ ಮಾತು ಕೇಳಿ ಬರುತ್ತಿದೆ. ನಮ್ಮ ನಾಯಕರಿಗೆ ಅನ್ಯಾಯವಾದರೆ ರಾಜ್ಯದ ತುಂಬಾ ಉಗ್ರ ಹೋರಾಟ ಮಾಡುತ್ತೇವೆ ಎಂದು ಉಡಚಪ್ಪ ಮಾಳಗಿ ಸಕರ್ಾರಕ್ಕೆ ಎಚ್ಚರಿಕೆ ಮಾತನಾಡಿದರು.
ಸಭೆಯ ಅಧ್ಯಕ್ಷತೆವಹಿಸಿದ ಮಾಲತೇಶ ಯಲ್ಲಾಪೂರ ಮಾತನಾಡಿ ಜಿಲ್ಲಾ ಪದಾಧಿಕಾರಿಗಳು ತಮ್ಮ ಕಾರ್ಯಗಳನ್ನು ಚಾಚು ತಪ್ಪದೇ ಮಾಡಿ ಡಿಎಸ್ಎಸ್ ಸಂಘಟನೆ ಹಾಗೂ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದರು. ನೂತನ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಿಂಗಪ್ಪ ಎಲ್.ಕಡೂರ ಅವರನ್ನು ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಂಜಪ್ಪ ಮರೋಳ, ನಿಂಗಪ್ಪ ಕಡೂರ.ಬಸವಣ್ಣ ಮುಗಳಿ. ಸಂಜೀಯಗಾಂಧಿ ಸಂಜೀವಣ್ಣನವರ.ರಂಗಪ್ಪ ಮೈಲಮ್ಮನವರ, ಪ್ರಶಾಂತ ತಿರಕಪ್ಪನವರ.ರಾಜು ಮಾದರ, ಗುಡ್ಡಪ್ಪ ಚಿಕ್ಕಪ್ಪನವರ, ನಿಂಗಪ್ಪ ನಿಂಬಕ್ಕನವರ, ಮಾಲತೇಶ ಕನ್ನಮ್ಮನವನ,ಸುರೇಶ ಹಳ್ಳಳ್ಳಿಕುಮಾರ ಹುಚ್ಚಮ್ಮನವರ.ಕುತ್ಬುದ್ದೀನ ದೇವಿಹೊಸೂರ, ಮಂಜುನಾಥ ಬಿ.ಹನಮಂತ ಹರಿಜನ,ಪರಶುರಾಮ ಹರಿಜನ.ಭೀಮಪ್ಪ ಮುದಕ್ಕಮ್ಮನವರ.ಪ್ರಭುಲಿಂಗ ನಡುವಿನಮನಿ.ಶಿವಾಜಿ ದೊಡ್ಡಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.