ನೆಲದ ಮೇಲೆ ಕೂರಿಸಿ ತರಬೇತಿ ಶಿಬಿರಕ್ಕೆ ಖಂಡನೆ: ಶಿವಾನಂದ ಕಾಮಗೊಂಡ

ನೆಲದ ಮೇಲೆ ಕೂರಿಸಿ ತರಬೇತಿ ಶಿಬಿರಕ್ಕೆ ಖಂಡನೆ: ಶಿವಾನಂದ ಕಾಮಗೊಂಡ Condemnation of training camp with sitting on the floor: Shivananda Kamagonda

ಲೋಕದರ್ಶನ ವರದಿ  

ಇಂಡಿ 17 : ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ  ನೆಲದ ಮೇಲೆ ಕುಡಿಸಿ, ಕತ್ತಲಿಯ ಕೊಣೆಯಲ್ಲಿ ಕೂಡಿಸಿ ತರಬೇತಿ ನೀಡುವುದು. ಇದು ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ ತುಂಬಾ ಅಪರಾಧ ಇದನ್ನು ನಾನು ಖಂಡಿಸುತ್ತೆನೆ ಎಂದು  ಇಂಡಿ ತಾಲೂಕು ಮಾನವ ಹಕ್ಕು ಆಯೋಗ ತಾಲೂಕು ಅಧ್ಯಕ್ಷರಾದ  ಶಿವಾನಂದ ಕಾಮಗೊಂಡ ಅವರು ಹೇಳಿದರು. ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಶಿವಾನಂದ ಕಾಮಗೊಂಡ ಅವರು ಅಂಗನವಾಡಿ ಕಾರ್ಯಕರ್ತೆಯರು ಭಾರತ ಸರ್ಕಾರದ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಪ್ರಮುಖ ಆರೋಗ್ಯ ಮತ್ತು ಶಿಕ್ಷಣ ಕಾರ್ಯಕರ್ತರು ಅವರು ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿಯರು, ಬಾಣಂತಿಯರು ಮತ್ತು 6 ವರ್ಷದೊಳಗಿನ ಮಕ್ಕಳ ಪೋಷಣೆ, ಆರೋಗ್ಯ ತಪಾಸಣೆ ಹಾಗೂ ಪ್ರಾಥಮಿಕ ಶಿಕ್ಷಣದ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ.  

ಆರೋಗ್ಯ ಮತ್ತು ಪೌಷ್ಟಿಕಾಂಶ: ಮಕ್ಕಳಿಗೆ ಲಸಿಕೆ ಹಾಕಿಸುವುದು, ಪೌಷ್ಟಿಕ ಆಹಾರ ವಿತರಣೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸುವುದು? ಗರ್ಭಿಣಿ ಮತ್ತು ಬಾಣಂತಿಯರ ಆರಕ್ಷಣೆ: ಗರ್ಭಿಣಿಯರಿಗೆ ನಿಯಮಿತ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ಮತ್ತು ಸುರಕ್ಷಿತ ಹೆರಿಗೆಯ ಬಗ್ಗೆ ಮಾಹಿತಿ ನೀಡುವುದು ಪೂರ್ವ ಪ್ರಾಥಮಿಕ ಶಿಕ್ಷಣ: 3 ರಿಂದ 6 ವರ್ಷದ ಮಕ್ಕಳಿಗೆ ಆಟದ ಮೂಲಕ ಮೂಲಭೂತ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡುವುದು ಜೊತೆಗೆ ತಮ್ಮದೇ ಆದ ಜವಾಬ್ದಾರಿ ಯಿಂದ ಕೆಸಲ ಮಾಡುತ್ತಾರೆ. ಅವರು ಕೂಡಾ ಮನುಷ್ಯರೇ ಎಂಬುದು ಮೇಲಾಧಿಕಾರಿಗಳು ತಿಳಿದುಕೊಂಡು ಅವರಿಗೆ ಆಸನದ ವ್ಯವಸ್ಥೆ ಮಾಡಿದೆ ಹಾಗೂ ಜಮಕಾಖೆ ಆದರೂ ಹಾಸದೆ ಅಂಗನವಾಡಿ ಕಾರ್ಯಕರ್ತೆಯರಿಗೆ  ಇಷ್ಟೋಂದು ತರಾತುರಿಯಲ್ಲಿ ತರಬೇತಿ ಶಿಬಿರ ಹಮ್ಮಿಕೊಂಡಿರುವುದು ವಿಪರ್ಯಾಸವೇ ಸರಿ.ಹಂತಾ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಹಾಗೂ ಇಂಡಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ನೌಕರರ ಸಂಘದ ಅಧ್ಯಕ್ಷರಾದ  ಭಾರತಿ ವಾಲಿ ಅವರು ಕೂಡಾ ಖಂಡಿಸಿದ್ದಾರೆ.