ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಹತ್ಯೆಯನ್ನು ಖಂಡಿಸಿ, ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಲು ಆಗ್ರಹಿಸಿ

ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಹತ್ಯೆಯನ್ನು ಖಂಡಿಸಿ, ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಲು ಆಗ್ರಹಿಸಿ Condemn the murder that took place in Inam Veerapur village of Hubballi and demand appropriate punis


            ಹುಬ್ಬಳ್ಳಿ 23: ಪತ್ರಿಕೆಯಲ್ಲಿ ವರದಿಯಾದಂತೆ, ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಮಾನ್ಯ ಎಂಬ ಯುವತಿ ಅನ್ಯಜಾತಿಯ ಹುಡುಗನಜೊತೆ  ಮದುವೆಯಾಗಿದ್ದಾಳೆ ಎಂದು ಕೋಪಗೊಂಡ ಪಾಲಕರುಗರ್ಭಿಣಿ ಮಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದೂ, ಹುಡುಗನ ಕುಟುಂಬದವರ ಮೇಲೂ ಹಲ್ಲೇ ನಡೆಸಿರುವ  ಪ್ರಕರಣ  ನಡೆದಿದೆ. ಇದೊಂದು ಮರ್ಯಾದೆಗೇಡು  ಹತ್ಯೆ ಪ್ರಕರಣ. ಈ ಘಟನೆಯನ್ನು ಂಋಖಖ ಧಾರವಾಡಜಿಲ್ಲಾ ಸಮಿತೀತೀವ್ರವಾಗಿಖಂಡಿಸುತ್ತದೆ ಹಾಗೂ ತಪ್ಪಿತಸ್ಥರಿಗೆ ನಿದರ್ಶನೀಯ ಶಿಕ್ಷೆ ನೀಡಬೇಕೆಂದುಒತ್ತಾಯಿಸುತ್ತದೆ. 

ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿರುವುದುಇದೇ ಮೊದಲಲ್ಲ. ಕರ್ನಾಟಕದಲ್ಲಿ ಇಂತಹ ನೂರಾರು ಪ್ರಕರಣಗಳು ನಡೆದಿವೆ. ಗದಗದಲ್ಲಿ 2019 ರಲ್ಲಿಗಂಗಮ್ಮ ಮತ್ತುರಮೇಶ್ ಎನ್ನುವವರು ಅಂತರ್ಜಾತಿ ವಿವಾಹವಾದಾಗ ದೀಪಾವಳಿ ಹಬ್ಬದ ನೆಪದಲ್ಲಿ ಕರೆಸಿಕೊಂಡು ಗಂಗಮ್ಮ ಳ ಸಂಭಂದಿಕರು ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಸಾಯಿಸಿದರು. ಮಂಡ್ಯ, ಕೋಲಾರ, ವಿಜಯಪುರ, ಹಾಸನ ದಲ್ಲಿ ಸಾಕಷ್ಟು ಮರ್ಯಾದ ಹತ್ಯೆ ಘಟನೆಗಳು ಜರುಗಿವೆ. ಇವು ಕೇವಲ ವರದಿ ಯಾಗಿರುವ ಪ್ರಕರಣಗಳು, ವರದಿಯಾಗದ ಪ್ರಕರಣಗಳು ಅದೆಷ್ಟೋ!  

          ಸಮಾಜದಲ್ಲಿ ಹಳೆಯ ಊಳಿಗಮಾನ್ಯ ಮೌಲ್ಯಗಳು ಇಂದಿಗೂ ಜೀವಂತವಾಗಿವೆ, ಆದ್ದರಿಂದಇಂತಹ ಘಟನೆಗಳು ನಡೆಯುತ್ತಿವೆ. ಜಾತಿ, ಧರ್ಮ, ಅಂತಸ್ತಿನ ಪ್ರತಿಷ್ಠೆಯ ಮನಸ್ಥಿತಿಯಲ್ಲಿ, ಮರ್ಯಾದೆಯ ಹೆಸರಿನಲ್ಲಿ ಮೆರೆಯುತ್ತಿರುವ ಕ್ರೌರ್ಯದಿಂದಾಗಿ  ಮುಗ್ಧ ಜೀವಗಳು ಬಲಿಯಾಗುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಬೇಕಾದರೆ, ಪ್ರಜಾತಾಂತ್ರಿಕ ಮನೋಧೋರಣೆ, ಪ್ರಜ್ಞಾಮಟ್ಟ ಸಮಾಜದಲ್ಲಿ ಬರಬೇಕು.  

            ಪ್ರಜಾತಾಂತ್ರಿಕ ವ್ಯವಸ್ಥೆಇರುವ ಪ್ರಸಕ್ತ ಸಮಾಜದಲ್ಲಿ ಇಂದಿಗೂ ಪಳೆಯುಳಿಕೆಗಳಾಗಿ ಆಳವಾಗಿ ಬೇರೂರಿರುವ ಊಳಿಗಮಾನ್ಯ ಕಾಲದ  ಹಳೆ ಮೌಲ್ಯಗಳು ಮತ್ತುಗೊಡ್ಡು ಸಂಪ್ರದಾಯಗಳಿಗೆ ಪರ್ಯಾಯವಾಗಿರುವ ಪ್ರಜಾತಾಂತ್ರಿಕ ನೈಜ ಮೌಲ್ಯಗಳನ್ನು ಸ್ಥಾಪಿಸುವ ಅತೀವಅವಶ್ಯಕತೆ ಇದೆ. ಮತ್ತುಜನರ ಮನಸ್ಥಿತಿಂ್ಪುು ಬದಲಾಗಬೇಕಿದೆ. ವಿಪರ್ಯಾಸವೆಂದರೆ ಈ ಅಪರಾಧವನ್ನು ತಡೆಗಟ್ಟಲು ನಮ್ಮ ದೇಶದಲ್ಲಿ ಯಾವುದೇ ಕಾನೂನು ಇಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರಗಳು ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಹಾಗೂ ಈ ಘಟನೆಯಲ್ಲಿ ಅಪರಾಧಎಸಗಿರುವವರಿಗೆ ಕಠಿಣ ಶಿಕ್ಷೆ ಆಗುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಂಋಖಖ ಜಿಲ್ಲಾ ಸಮಿತಿಯಿಂದ ಆಗ್ರಹಿಸಲಾಯಿತು. ಈ ಸಂಧರ್ಭದಲ್ಲಿ ಂಋಖಖ ಜಿಲ್ಲಾಅಧ್ಯಕ್ಷರಾದ ಮಧುಲತಾಗೌಡರ್, ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೊಕರೆ, ಜಿಲ್ಲಾಉಪಾಧ್ಯಕ್ಷರಾದ ದೇವಮ್ಮ ದೇವತ್ಕಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅನುಸೂಯ ಶಾನವಾಡ, ವಿಜಯಲಕ್ಷ್ಮಿ ಹಿರೇಮಠ್ ಉಪಸ್ಥಿತರಿದ್ದರು.