ದಲಿತರ ಮೇಲಿನ ದೌರ್ಜನ್ಯ ಖಂಡಿಸಿ: ಗೌಡಪ್ಪ ಬಡಿಗೇರ
Condemn atrocities against Dalits: Gowdappa Badigera
ವಿಜಯಪುರ 22: ರಾಜ್ಯಾದ್ಯಂತ ದಲಿತರು, ಹಿಂದುಳಿದವರು ಹಾಗೂ ಶೋಷಿತ ಸಮುದಾಯಗಳ ಮೇಲೆ ನಡೆಯುತ್ತಿರುವ ಅಮಾನವೀಯ ಹಲ್ಲೆ, ಕೊಲೆ ಮತ್ತು ಸಾಮಾಜಿಕ ಬಹಿಷ್ಕಾರದಂತಹ ಘಟನೆಗಳನ್ನು ಸರ್ಕಾರ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಮುಖಂಡ ಗೌಡಪ್ಪ ಬಡಿಗೇರ ಆರೋಪಿಸಿದರು.
ಬಾಗಲಕೋಟೆಯ ಉಗಲವಾಡದಲ್ಲಿ ದೇವಾಲಯ ಪ್ರವೇಶಿಸಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ, ಕೊಪ್ಪಳ ಹಾಗೂ ಚಿಕ್ಕಬಳ್ಳಾಪುರದಲ್ಲಿ ಬಾಲಕನಿಗೆ ಕಂಬಕ್ಕೆ ಕಟ್ಟಿ ಹಿಂಸೆ, ರಾಯಚೂರಿನಲ್ಲಿ ಬಿಎಸ್ಪಿ ಮುಖಂಡ ಭೂಮಾನಂದ ಹಾಗೂ ಅಪ್ರಾಪ್ತ ಅಶ್ವಿನಿ ಹತ್ಯೆ ಸೇರಿದಂತೆ ಹಲವು ಘಟನೆಗಳು ಖಂಡನೀಯವಾಗಿವೆ ಎಂದು ಅವರು ಹೇಳಿದರು.
ವಿಜಯಪುರದ ಚಬನೂರು ಹಾಗೂ ಗುಂಡಕನಾಳದಲ್ಲಿ ಯುವಕರ ಮೇಲೆ ನಡೆದ ದಾಳಿ, ಧಾರವಾಡದ ಕುಂಬಾರಕೊಪ್ಪದಲ್ಲಿ ಏಳು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಗೂ ಯಾದಗಿರಿಯ ಕಿಲ್ಲನಕೇರಾದಲ್ಲಿ ಭಜಂತ್ರಿ ಸಮುದಾಯಕ್ಕೆ ಊರು ಬಿಡುವಂತೆ ಬೆದರಿಕೆ ಹಾಕಿರುವುದನ್ನು ತೀವ್ರವಾಗಿ ಖಂಡಿಸಿದರು.
ಎಲ್ಲ ಆರೋಪಿಗಳನ್ನು ತಕ್ಷಣ ಬಂಧಿಸಿ ಎಸ್ಸಿ/ಎಸ್ಟಿ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ಸೂಕ್ತ ಭದ್ರತೆ, ತಕ್ಷಣದ ಪರಿಹಾರ ಹಾಗೂ ನ್ಯಾಯ ಒದಗಿಸಬೇಕು. ಬೇಡಿಕೆ ಈಡೇರದಿದ್ದರೆ ರಾಜ್ಯಮಟ್ಟದ ಬೃಹತ್ ಹೋರಾಟ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 