ಕೈಗಾ ಅಣುಸ್ಥಾವರ 5 ಮತ್ತು 6 ನೇ ಘಟಕಗಳ ಉತ್ಖನನ ನೆಲ ಹಂತದ ಕಾಂಕ್ರೀಟೀಕರಣ ಪೂರ್ಣ: ವಿನೋದ್ ಕುಮಾರ್
Concreting of excavation ground level of Kaiga Nuclear Power Plant Units 5 and 6 complete: Vinod Kum
ಕೈಗಾ ಅಣುಸ್ಥಾವರ 5 ಮತ್ತು 6 ನೇ ಘಟಕಗಳ ಉತ್ಖನನ ನೆಲ ಹಂತದ ಕಾಂಕ್ರೀಟೀಕರಣ ಪೂರ್ಣ: ವಿನೋದ್ ಕುಮಾರ್
(ಕಾರವಾರ): ಕೈಗಾ ಅಣುಸ್ಥಾವರದ 5 ಮತ್ತು 6 ನೇ ಘಟಕಗಳ ಉತ್ಖನನ ,ನೆಲ ಹಂತದ ಕಾಂಕ್ರೀಟೀಕರಣ ಪೂರ್ಣ ವಾಗಿದೆ ಎಂದು ಕೇಂದ್ರ ನಿರ್ದೇಶಕ ಬಿ.ವಿನೋದ್ ಕುಮಾರ್ ಹೇಳಿದರು.ಮಾಧ್ಯಮಗಳ ಜೊತೆ ಕೈಗಾ ಅಣುಸ್ಥಾವರದ ಸಭಾಭವನದಲ್ಲಿ ಮಾತನಾಡಿದ ಅವರು ಕೈಗಾ ಅಣುಸ್ಥಾವರದ ಐದು ಮತ್ತು ಆರನೇ ಘಟಕಗಳ ಗ್ರೌಂಡ್ ಫ್ಲೋರ್ ಕಾಮಗಾರಿ ಇದೇ ವರ್ಷದ ನವ್ಹೆಂಬರ್ ನಲ್ಲಿ ಪ್ರಾರಂಭವಾಗಿದೆ. ಯೋಜನೆ 2030 ಅಕ್ಟೋಬರ್ ವೇಳೆಗೆ ದೇಶಕ್ಕೆ ಸಮರೆ್ಣಯಾಗಕಲಿದೆ ಎಂದರು.
ಈ ಘಟಕಗಳು ತಲಾ 700 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಈ ಘಟಕಗಳಿಂದ ವಿದ್ಯುತ್ ಉತ್ಪಾದನೆ ಮೂಲಕ ಕೈಗಾ ಅಣುಸ್ಥಾವರದಲ್ಲಿ 1400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಾಗಲಿದೆ ಎಂದರು. ಕೈಗಾ ನೂತನ ಘಟಕಗಳ ಟರ್ಬೈನ್ ಪ್ಯಾಕೇಜ್ ಕಾಮಗಾರಿಯನ್ನು ಭಾರತ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ ನಿರ್ವಹಿಸಲಿದೆ. ನ್ಯೂಕ್ಲಿಯರ್ ರಿಯಾಕ್ಟರ್ ಪ್ಯಾಕೇಜ್ ಕಾಮಗಾರಿಯನ್ನು ಮೇಘಾ ಎಂಜಿನಿಯರ್ಸ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ ನಿರ್ಮಿಸಲಿದೆ. ಮಳೆಗಾಲದ ನಂತರ ಕಾಮಗಾರಿ ವೇಗ ಪಡೆಯಲಿದೆ ಎಂದರು. ಕೈಗಾ ಘಟಕ 1 ಮತ್ತು 2ನೇ ಘಟಕಗಳು ಸತತ 25 ವರ್ಷ ವಿದ್ಯುತ್ ಉತ್ಪಾದನೆ ಮಾಡಿವೆ. ಕೈಗಾ ಒಂದನೇ ಘಟಕ 13 ಮೇ 2016 ರಿಂದ 31 ಡಿಸೆಂಬರ್ 2018 ರತನಕ ಸತತ 962 ಅಣು ವಿದ್ಯುತ್ ಉತ್ಪಾದಿಸಿ ವಿಶ್ವ ದಾಖಲೆ ಬರೆದಿದೆ. ಕೈಗಾ ಎರಡನೇ ಘಟಕ ಸತತ 707 ದಿನ ಸತತ ವಿದ್ಯುತ್ ಉತ್ಪಾದಿಸಿದ ದಾಖಲೆ ಇದೆ. ಘಟಕ ಮೂರು ಸಹ ಸತತ 713 ದಿನ, ಘಟಕ ನಾಲ್ಕು ಸತತ 550 ದಿನ ಅಣು ವಿದ್ಯುತ್ ಉತ್ಪಾದಿಸಿ ದಾಖಲೆ ಬರೆದಿವೆ. ಘಟಕ ಮೂರು ನಾಲ್ಕು ಈಗ ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ಒಂದು ಮತ್ತು ಎರಡನೇ ಘಟಕಗಳನ್ನು ನಿರ್ವಹಣೆ ಕಾರ್ಯಕ್ಕೆ ಮುಚ್ಚಲಾಗಿದೆ.ಘಟಕ ಒಂದರಲ್ಲಿ ಕೂಲಂಟ ಚಾನೆಲ್ ಬದಲಾವಣೆ, ಫೀಡರ್ ಬದಲಾವಣೆಗಾಗಿ ಎಪ್ರಿಲ್ 2025 ರಲ್ಲಿ ಮುಚ್ಚಲಾಗಿದೆ. ಇಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಪುನರುಜ್ಜೀವನ ಕಾರ್ಯ ನಡೆದಿದೆ. ಈ ಘಟಕ ಮತ್ತೆ ಅಕ್ಟೋಬರ್ 2026ಕ್ಕೆ ಕಾರ್ಯಾರಂಭ ಮಾಡಲಿದೆ ಎಂದರು.
ಕೈಗಾದಲ್ಲಿ 1730 ಕರ್ನಾಟಕದವರಿಗೆ ಉದ್ಯೋಗ: ಕೈಗಾ ಅಣುಸ್ಥಾವರದ ಎಲ್ಲಾ ಘಟಗಳಲ್ಲಿ 1730 ಕರ್ನಾಟಕದವರಿಗೆ ಉದ್ಯೋಗ ನೀಡಲಾಗಿದೆ. ಆರು ಯುನಿಟ್ ಗಳಲ್ಲಿ ಈಗ ಎ.ಬಿ.ಸಿ. ಗ್ರೇಡ್ ಹುದ್ದೆಗಳಲ್ಲಿ 2057 ಜನ ನೌಕರಿ ಮಾಡುತ್ತಿದ್ದಾರೆ. ಇದರಲ್ಲಿ ಕರ್ನಾಟಕದವರ ಸಂಖ್ಯೆ 1730 ದಷ್ಟಿದೆ. ಶೇ.84.54 ರಷ್ಟು ಕನ್ನಡಿಗರು ಉದ್ಯೋಗಸ್ಥರಾಗಿದ್ದಾರೆ ಎಂಬ ಅಂಕಿ ಸಂಖ್ಯೆ ಮುಂದಿಡುವ ಮೂಲಕ ಕೈಗಾದಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಆರೋಪಕ್ಕೆ ಪ್ರತ್ಯುತ್ತರ ನೀಡಿದರು. ಕೈಗಾ ಅಣುಸ್ಥಾವರ 16 ಕಿಮೀ ಒಳಗಿನ ಝೆನ್ ನಲ್ಲಿನ ನಿವಾಸಿಗಳ ಉದ್ಯೋಸ್ಥರ ಸಂಖ್ಯೆ ( ಇದರಲ್ಲಿ ಕೈಗಾ ಸ್ಥಾವರಕ್ಕೆ ಭೂಮಿ ನೀಡಿದವರು ಸೇರಿ) 1058 ಜನ. ಸ್ಥಾವರದ ಹೊರಗೆ ಅಂದರೆ, 16 ಕಿ.ಮೀ. ಆಚೆಗಿನ ವಾಸಿಗಳಲ್ಲಿ 138 ಜನ ಉದ್ಯೋಗ ಪಡೆದಿದ್ದಾರೆ, ಘಟಕ ಒಂದರಿಂದ ನಾಲ್ಕರಲ್ಲಿ 83 ಜನ, ಘಟಕ ಐದು ಮತ್ತು ಆರಲ್ಲಿ 55 ಜನ ನೌಕರಿ ಪಡೆದಿದ್ದಾರೆ ಎಂದು ಕೈಗಾ ಸ್ಥಾವರದ ಕೇಂದ್ರ ನಿರ್ದೇಶಕ ವಿನೋದ್ ಕುಮಾರ್ ವಿವರಿಸಿದರು.
ಉತ್ತರ ಕನ್ನಡ ಹೊರತು ಪಡಿಸಿ ಕರ್ನಾಟಕದ ಇತರೆ ಜಿಲ್ಲೆಗಳಿಂದ ಬಂದ 138 ಜನ ಉನ್ನತ ನೌಕರಿಯಲ್ಲಿ ಕೆಲಸ ಮಾಡುತ್ತಿದ್ದರೆ, ದೇಶದ ವಿವಿಧ ರಾಜ್ಯಗಳಿಂದ ಬಂದ 318 ಜನ ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ನೌಕರಿ ಹೊಂದಿದ್ದಾರೆ. ಕೈಗಾ ಅಣುವಿದ್ಯುತ್ ಸ್ಥಾವರ 5 ಮತ್ತು 6 ನಿರ್ಮಾಣ ಕಾರ್ಯದಲ್ಲಿ 9 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದರು. ಈ ವೇಳೆ ಕೈಗಾ ಘಟಕಗಳ ಅಧಿಕಾರಿಗಳಾದ ಎಸ್.ಕೆ.ಓಝಾ, ಟಿ.ಎಲ್.ಸಿಂಗ್ ,ಮೋಹನ್ ರಾಂ, ಕೆ.ಚಿತ್ತರಂಜನ್, ಎಂಜಿನಿಯರ್ ಕೆ.ಶ್ರೀರಾಮ್ , ಹೇಮಂತ, ಆಲ್ಡ್ರಿನ್ ಡಿಸೋಜಾ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 