ಮಾಡರ್ನ ಕೋಚಿಂಗ್ ಕ್ಲಾಸಸ್ನ, ಬೇಸಿಗೆ ತರಬೇತಿ ಶಿಬಿರದ ಮುಕ್ತಾಯ
Conclusion of the summer training camp of Modern Coaching Classes
ಇಂಡಿ 01 : ತಾಲ್ಲೂಕಿನ ಹೋರ್ತಿಯ ಮಾರ್ಡನ ಕೋಚಿಂಗ್ ಕ್ಲಾಸಿನ್ ಬೇಸಿಗೆ ತರಬೇತಿ ಶಿಬಿರ ಮುಕ್ತಾಯ ಸಮಾರಂಭ ಹಾಗೂ ನೋಟ್ಸ್ ವಿತರಣಾ ಕಾರ್ಯಕ್ರಮವನ್ನು ಈ ಕಾರ್ಯಕ್ರಮವು ಹೋರ್ತಿ ರೇವಣಸಿದ್ದೇಶ್ವರ ಮಂಗಲ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಡರ್ನ ಕೋಚಿಂಗ್ ಕ್ಲಾಸಸ್ ಹಾಗೂ ಸಂಸ್ಥಾಪಕರು ಮತ್ತು ವಿಜ್ಞಾನ ವಿಷಯದ ಬೋಧಕರಾಗಿರುವ ಎಚ್ ಆರ್ ಬೋಸಗಿ ಗುರುಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರ್ವೋದಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ರೇವಣಸಿದ್ದ ಪೂಜಾರಿ ಗುರುಗಳು ವಹಿಸಿದ್ದರು. ಅತಿಥಿಗಳಾಗಿ ಡಾಽಽ ಚಿದಾನಂದ ಮೇತ್ರಿ ಅವರು ಮಾತನಾಡಿ ಮಕ್ಕಳು ತಂದೆ ತಾಯಿಯ ಕಷ್ಟವನ್ನು ತಿಳಿದುಕೊಂಡು ಚೆನ್ನಾಗಿ ಅಭ್ಯಾಸ ಮಾಡಿ ಸರ್ಕಾರಿ ನೌಕರಿಗಿಟ್ಟಿಸಬೇಕೆಂದು ಹೇಳಿದರು.ಮಲಕಣ್ಣ ಗಡ್ಡದ, ಪ್ರಕಾಶ್ ನಂದಿರಗಿ, ಅಶೋಕ್ ಡೊಣಗಿ, ಕೆ, ಬಿ ಶಂಖ ಸೇರಿದಂತೆ ಪಾಲಕರು ಬಂಧುಗಳು, ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿಗಳಾದ ಎಸ್,ಎನ್ ಕೋಳೆಕರ ಪಿ, ವಾಯ್ ಬಿಳೂರ, ಆರ್, ಟಿ ವಸ್ತ್ರದ, ಬಾಳು ಬಾಮನಿ, ಸಂತೋಷ ಜಾಧವ ಹಾಗೂ ಸಹಾಯಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಂದಿನಿ ಹಿರೇಮಠ,ಪ್ರಜ್ಞಾ ಬಿರಾದಾರ,ಪಿ ವಾಯ್ ಬಿಳೂರ , ಎಸ್, ಎನ್ ಕೋಳೆಕಾರ,ಕೋಚಿಂಗ್ ಕ್ಲಾಸಸ್ ವತಿಯಿಂದ ವಿವಿಧ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಹಳೆಯ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ. ರೇವಣಸಿದ್ದೇಶ್ವರ ಭಾವಚಿತ್ರವನ್ನು ಕನಿಷ್ಠ 15 ವಿದ್ಯಾರ್ಥಿಗಳಿಗೆ ನೀಡಿ ಸನ್ಮಾನಿಸಲಾಯಿತು ಕಾರ್ಯಕ್ರಮವನ್ನು ಉದ್ದೇಶಿಸಿ ರೇವಣಸಿದ್ಧ ಪೂಜಾರಿ ಸರ್ ಮಾತನಾಡಿ ಸಮಾಜಕ್ಕೆ ಕೀರ್ತಿ ತರುವ ಮಕ್ಕಳಿಗಾಗಿ, ಈ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ, ಸರ್ವೋದಯ ಮತ್ತು ಮಾಡರ್ನ ಎರಡು ಬೇರೆಯಲ್ಲ, ಒಂದೇ ತಾಯಿಯ ಮಕ್ಕಳಂತೆ ಎಂದು ಹೇಳಿದರು.ಈ ಸಂಸ್ಥೆ ಪ್ರಾರಂಭಗೊಂಡು 20 ವರ್ಷಕ್ಕೆ ಕಾಲಟ್ಟಿದೆ ಈ ಕಾರಣ ಬೋಸಗಿ ಸರ್ ಅವರ ಶ್ರಮ ಶಕ್ತಿ,ಧೈರ್ಯ ಮತ್ತು ಹಳೆಯ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆಯ ಕಾರಣ ಎಂದರು.
ಅಧ್ಯಕ್ಷೀಯ ಭಾಷಣವನ್ನು ಬೋಸಗಿ ಗುರುಗಳು ಮಾತನಾಡಿ ಹಳೆಯ ವಿದ್ಯಾರ್ಥಿಗಳ ಪ್ರಚಾರ ಒಂದಿದ್ದರೆ ಮಾತು ಮುಂದುವರಿಸಿ, ವಿಜ್ಞಾನದಲ್ಲಿ ಬರುವ ಎಲ್ಲಾ ಪ್ರಯೋಗಗಳನ್ನು ಮಾಡಿಸಲಾಗಿದೆ, ಎಲ್ಲಾ ವಿಷಯದ ಪಠ್ಯಕ್ರಮವನ್ನು ಮುಗಿಸಿದೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಎರಡು ದಿನಕ್ಕೆ ಒಮ್ಮೆ ಘಟಕ ಪರೀಕ್ಷೆಯನ್ನು ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆ ಅನುಭವಿಸಿದ್ದೇವೆ ಕೊನೆಯಲ್ಲಿ 80 ಅಂಕದ ಪರೀಕ್ಷೆಯನ್ನು ತೆಗೆದುಕೊಂಡು, ವಿದ್ಯಾರ್ಥಿಗಳಲ್ಲಿ 3 ಜನ ವಿದ್ಯಾರ್ಥಿನಿಯರಲ್ಲಿ 3 ಜನರನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಯಿತು ಎಂದರು. ಈ ಕಾರ್ಯವನ್ನು ಆರ್, ಟಿ ವಸ್ತ್ರದ ನಿರೂಪಿಸಿದರು.ಎಸ್, ಎನ್ ಕೋಳೆಕಾರ ವಂದಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 