ಕಂಪ್ಯೂಟರ್ ನಿರ್ವಾಹಕರ ದಿನಾಚರಣೆ
Computer Administrator's Day
ತಾಳಿಕೋಟಿ 27: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಕ್ಲರ್ಕ್ ಡೇಟಾ ಎಂಟ್ರಿ ಆಪರೇಟರ್‌ಗಳ ಕ್ಷೇಮಾಭಿವೃದ್ಧಿ ಸಂಘದಿಂದ ಕಂಪ್ಯೂಟರ್ ಪಿತಾಮಹ ಚಾರ್ಲೆಸ್ ಬ್ಯಾಬೇಜ್ ಸ್ಮರಣಾರ್ಥ ಕಂಪ್ಯೂಟರ್ ಆಪರೇಟರ್‌ಗಳ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅನಸೂಯಾ ಚಲವಾದಿ ಅವರು ಮಾತನಾಡಿ ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಸೇವೆ ಸಲ್ಲಿಸಲು ಕಂಪ್ಯೂಟರ್ ಡೇಟಾ ಎಂಟ್ರಿ ಸಹಾಯಕರ ಸೇವೆ ಅಪಾರವಾಗಿದೆ.
ತಾಲೂಕಿನ ಎಲ್ಲಾ ಗಣಕಯಂತ್ರ ನಿರ್ವಾಹಕರು ಪ್ರಮಾಣಿಕವಾಗಿ ಕೆಲಸ ಮಾಡಿ ಮತ್ತು ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಬೇಕಾದರೆ ಹೆಚ್ಚಿನ ಜ್ಞಾನ ಮತ್ತು ಸಾಮರ್ಥ್ಯ ಹೊಂದಿರಬೇಕು. ಆಗಾಗ ಆಗುವ ಬದಲಾವಣೆಗೆ ತಕ್ಕಂತೆ ಹೆಚ್ಚಿನ ಕೌಶಲ್ಯದ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಪಿಡಿಓ ಪ್ರಕಾಶ ಅಂಜುಟಗಿ, ಆಯ್.ಡಿ.ಬಡಿಗೇರ, ಐಇಸಿ ಸಂಯೋಜಕ ಮಲಕಪ್ಪ, ಮಹಾಂತಗೌಡ ದೊರೆಗೋಳ, ಜಗದೀಶ್ ಲಮಾಣಿ, ಮಡಿವಾಳಪ್ಪ ತಳವಾರ, ಡಾಟಾ ಎಂಟ್ರಿ ಆಪರೇಟರ್ ಗಳಾದ ಗುರುನಾಥ ಬಿರಾದಾರ, ಆನಂದ ಮದರ್ಕಲ್, ಅಶೋಕ ನಾಟಿಕರ, ವೀರೇಶ ಹೊಸಮನಿ, ಡಿ.ಎಸ್.ಹಿರೇಮಠ, ಬಸವರಾಜ ಮಸರಕಲ್, ಮಲ್ಲು ಇಂಗಳೇಶ್ವರ, ಸಂತೋಷ ನಾಯ್ಕೋಡಿ, ಸಿದ್ದರಾಜ ಬಡಿಗೇರ ಮತ್ತಿತರರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 