ಸರ್ಕಲ್ ರೋಡ್ ಅಗಲೀಕರಣ ಕಾಮಗಾರಿಯನ್ನು ಸಮಗ್ರ ತನಿಖೆ
Comprehensive investigation into Circle Road widening work
ಹಾವೇರಿ 10 :ರಾಜ್ಯ ಹೆದ್ದಾರಿ 62ರಲ್ಲಿ ನಡೆದಿರುವ ಕಳಪೆ ಡಾಂಬರೀಕರಣ ಹಾಗೂ ಕಾಗಿನಲ್ಲಿ ಚನಕೇಶ್ವರ ದೇವಸ್ಥಾನದಿಂದ ಕನಕದಾಸ ಸರ್ಕಲ್ ರೋಡ್ ಅಗಲೀಕರಣ ಕಾಮಗಾರಿಯನ್ನು ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಾನೂನಿನಡಿ ಶಿಕ್ಷೆಯಾಗಬೇಕೆಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ರಿ) ರಾಜ್ಯ ಪ್ರಧಾನ ಕಾರ್ಯದರ್ಶಿಗಳದ ಎಂ ಎನ್ ನಾಯಕ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಮಹಾಂತೇಶ ದಾನ್ಮಮನವರ ಅವರಿಗೆ ಮನವಿ ಸಲ್ಲಿಸಲಾಯಿತು.
ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಎನ್ ಎನ್ ಪಾಟೀಲ್ ಅವರಿಗೆ ಮಾಹಿತಿಯನ್ನು ಮಾರ್ಚ-02 ರಂದು ಕೇಳಿ ಒಂದು ವರ್ಷವಾದರೂ ಕೂಡ ಇಲ್ಲಿಯವರೆಗೂ ಯಾವುದೇ ರೀತಿ ಮಾಹಿತಿ ನೀಡದೆ ಮತ್ತು ರಾಜ್ಯ ಹೆದ್ದಾರಿ 62 ರಲ್ಲಿ ನಡೆದಿರುವ ಕಳಪೆ ಡಾಂಬರೀಕರಣ ಹಾಗೂ ಕಾಗಿನಲ್ಲಿ ಚನಕೇಶ್ವರ ದೇವಸ್ಥಾನದಿಂದ ಕನಕದಾಸ ಸರ್ಕಲ್ ವರೆಗೂ ರೋಡ್ ಅಗಲೀಕರಣ ನಿರ್ಮಾಣದಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತು ಸತೀಶ ಜಾರಕಿಹೊಳಿ ಹಾಗೂ ಮುಖ್ಯ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಧಾರವಾಡ ಸರ್ಕಲ್ ತನಿಖೆ ನಡೆಸಲು ಆದೇಶ ನೀಡಿದರು.
ಕೂಡ ಇಲ್ಲಿಯವರೆಗೂ ಯಾವುದೇ ತನಿಖೆ ನಡೆಸದೇ ಸತಾಯಿಸುತ್ತಿರುವುದನ್ನು ಖಂಡಿಸಿ ಮಾಹಿತಿಯನ್ನು ಕೇಳಿದಾಗ ನಮ್ಮನ್ನು ಏಕವಚನದಿಂದ ಮಾತನಾಡಿ ಅವಾಚ್ಚ್ಯ ಶಬ್ದದಿಂದ ನಿಂದಿಸಿದ್ದು ಇದರ ವಿರುದ್ಧ ಎಫ್.ಐ.ಆರ್ ಮಾಡಬೇಕೆಂದು ಪೋಲಿಸ್ ಇಲಾಖೆಗೆ ಒತ್ತಾಯಿಸಲಾಗಿದೆ.ಮಾಹಿತಿ ಕೇಳಿದ ನಮ್ಮ ವಿರುದ್ಧವೇ ಸುಳ್ಳು ಕೇಸ್ ದಾಖಲು ಮಾಡಿದ್ದನ್ನು ಖಂಡಿಸಿತ್ತೇವೆ. ಕಳಪೆ ಕಾಮಗಾರಿ ತನಿಖೆ ಮಾಡಿ,ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಹಾವೇರಿ ಇವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಸವಣೂರು ತಾಲೂಕ ಅಧ್ಯಕ್ಷರಾದ ನಾಗರಾಜ ಬಂಕಾಪುರ ಲಕ್ಷ್ಮಣ ದಿಳ್ಳೆಪ್ಪ ಡೊಳ್ಳಿನ ಎನ್ ಕಲ್ಲಾಪುರ, ಅಬ್ದುಲ್ ಸತ್ತಾರ್ ನಾಯಕ್, ಸಾಧಿಕ್ ಕಲ್ಲಾಪುರ್ ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 