ನಿಗದಿತ ಸಮಯದೊಳಗೆ ಕೆಲಸ ಮುಗಿಸಿ ನಿರ್ವಹಿಸಿ : ಕೇಂದ್ರ ಸಚಿವ ಜೋಶಿ

ನಿಗದಿತ ಸಮಯದೊಳಗೆ ಕೆಲಸ ಮುಗಿಸಿ ನಿರ್ವಹಿಸಿ : ಕೇಂದ್ರ ಸಚಿವ ಜೋಶಿ Complete the work within the stipulated time: Union Minister Joshi

ಶಿಗ್ಗಾವಿ 05 : ಜನಸಾಮಾನ್ಯರಿಗೆ ಸದುಪಯೋಗ ಆಗುವಂತೆ ಅಮೃತ್‌ 2 ಕಾಮಗಾರಿ ನಡೆಸುವ ಗುತ್ತಿಗೆದಾರರು ನಿಗದಿತ ಸಮಯದೊಳಗೆ ಕೆಲಸ ಮುಗಿಸಿ ನಿರ್ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ತಾಲೂಕ ಪಂಚಾಯಿತಿ ಸಭಾಭವನದಲ್ಲಿ ನಡೆದ ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಮತ್ತು ಅಮೃತ ಯೋಜನೆ ಕಾಮಗಾರಿಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಯೋಜನೆಯ ಕಾಮಗಾರಿ ನಡೆಸುವಾಗ ಸಾಕಷ್ಟು ಕಡೆ ರಸ್ತೆಗಳು ಹದಗೆಟ್ಟು ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಾಗಿದೆ. ಶೀಘ್ರದಲ್ಲಿ ರಸ್ತೆಗಳನ್ನು ದುರಸ್ತಿಪಡಿಸಿ, ನವೆಂಬರ್ ತಿಂಗಳು ಮುಗಿಯುವುದರ ಒಳಗಾಗಿ ಶಿಗ್ಗಾವಿ ಮತ್ತು ಸವಣೂರ ತಾಲೂಕಿನಲ್ಲಿ ಮನೆ ಮನೆಗೆ ನೀರು ಒದಗಿಸುವ ಅಮೃತ ಯೋಜನೆ ಪೂರ್ಣಗೊಳ್ಳಬೇಕು ಎಂದರು.ಈಗಾಗಲೇ ಶಿಗ್ಗಾವಿ ಮತ್ತು ಬಂಕಾಪುರ ಪಟ್ಟಣಗಳಲ್ಲಿ ಯೋಜನೆಯ ಕಾಮಗಾರಿ ಶೇ 75ರಷ್ಟು ಪೂರ್ಣಗೊಂಡಿದ್ದು, ಆದರೆ ಸವಣೂರಿನಲ್ಲಿ ಮಾತ್ರ ಕೇವಲ ಶೇ25 ರಷ್ಟು ಕಾಮಗಾರಿ ನಡೆದಿದೆ, ಕೂಡಲೇ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಮುಗಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು 

ಭಾಕ್ಸ ಸುದ್ದಿ : ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದರಿಂದ ಕೊಲೆ ಸುಲಿಗೆಗಳಂತಹ ಅಹಿತಕರ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಶಿಗ್ಗಾವಿ ಪಟ್ಟಣದಲ್ಲಿ ಇತ್ತೀಚಿಗೆ ನಡೆದ ಕೊಲೆ ಘಟನೆ ಗಾಂಜಾ ವ್ಯಸನಿಗಳಿಂದ ನಡೆದಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಜಿಲ್ಲಾಧಿಕಾರಿಗಳು ಮತ್ತು ಎಸ್ ಪಿ ಅವರು ಪೋಲಿಸ್ ಅಧಿಕಾರಿಗಳಿಗೆ ಕಠಿಣ ಕಾನೂನು ವ್ಯವಸ್ಥೆ ಜಾರಿಗೆಗೋಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಜೋಶಿ ತಿಳಿಸಿದರು. 

ರೈತನ ಬೆಳೆಗಳಿಗೆ ಈಗ ಯೂರಿಯಾ ಅವಶ್ಯಕತೆ ಹೆಚ್ಚಿರುವುದರಿಂದ ಯೂರಿಯಾ ಗೊಬ್ಬರಕ್ಕಾಗಿ ರೈತರು ಪರಿತಪಿಸುವಂತಾಗಿದೆ ಅಧಿಕಾರಿಗಳು ರೈತರಿಗೆ ಅವಶ್ಯವಿರುವ ಯೂರಿಯಾ ಗೊಬ್ಬರದ ಬೇಡಿಕೆಯನ್ನು ಸಲ್ಲಿಸಬೇಕು. ರೈತನ ಕೃಷಿಗೆ ಸಂಬಂಧಿಸಿದಂತೆ ಗೊಬ್ಬರ ಬೀಜ ಪೂರೈಕೆಯಲ್ಲಿ ರಾಜಕೀಯ ಮಾಡುವುದು ಬೇಡ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನಪ್ರತಿನಿಧಿಗಳು ರೈತನ ಅಗತ್ಯತೆಗೆ ಬೆಂಬಲವಾಗಿ ನಿಲ್ಲಬೇಕಾಗಿದೆ ಎಂದು ಹೇಳಿದರು.ಕೇಂದ್ರ ಸರ್ಕಾರದ ಪುರಸ್ಕೃತ ಹಲವು ಯೋಜನೆಗಳ ಕುರಿತು ಶಿಗ್ಗಾವಿ ಮತ್ತು ಸವಣೂರ ತಾಲೂಕಿನ ಮುಂದಿನ ದಿನಗಳಲ್ಲಿ ದಿನಾಂಕ ನಿಗದಿಪಡಿಸಿ ದಿಶಾ ಸಭೆ ನಡೆಸಲಾಗುವುದು ಅಧಿಕಾರಿಗಳು ಇದುವರೆಗೂ ಕೇಂದ್ರದಿಂದ ನಡೆದ ಕಾಮಗಾರಿಗಳ ಕುರಿತು ಸಮಗ್ರ ವರದಿಯನ್ನು ಮೊದಲೇ ನಮ್ಮ ಕಚೇರಿಗೆ ತಲುಪಿಸಿ, ಇದು ಆಗಿರುವ ಕಾರ್ಯಗಳು ಪರೀಶೀಲಿಸಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ್ ದಾನಮ್ಮನವರ, ಸಿಇಓ ರುಚಿ ಬಿಂದಾಲ್, ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ, ತಾಪಂ ಇಓ ಮಂಜುನಾಥ ಸಾಳೊಂಕಿ ಸೇರಿದಂತೆ ಶಿಗ್ಗಾವಿ ಮತ್ತು ಸವಣೂರ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು