ಚುಳಕಿ ಗ್ರಾಮದಲ್ಲಿ ರೈತರ ಜಮೀನು ದಾರಿ ತಡೆ ತಹಶೀಲ್ದಾರ್ಗೆ ದೂರು
Complaint to Tahsildar over farmers' land blocking road in Chulaki village
ಸವದತ್ತಿ 19 : ತಾಲೂಕಿನ ಚುಳಕಿ ಗ್ರಾಮದ ನರಗುಂದ ರಸ್ತೆಯಲ್ಲಿ ದಶಕಗಳಿಂದ ಸಾರ್ವಜನಿಕವಾಗಿ ಬಳಸುತ್ತಿದ್ದ ದಾರಿಯನ್ನು ತಡೆಹಿಡಿದು, ರೈತರಿಗೆ ತಮ್ಮ ಜಮೀನುಗಳಿಗೆ ತೆರಳದಂತೆ ಅಡ್ಡಿಪಡಿಸುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮದ ರೈತರು ಗ್ರೇಡ್-2 ತಹಶೀಲ್ದಾರ್ ಎಂ.ಎನ್. ಮಠದ ಅವರಿಗೆ ಮನವಿ ಸಲ್ಲಿಸಿದ್ದಾರೆ.ಗ್ರಾಮದ ಸರ್ವೇ ನಂ. 66/1ರ ಪಕ್ಕದಲ್ಲಿರುವ ರಸ್ತೆಯನ್ನು ಕಳೆದ ಹಲವು ವರ್ಷಗಳಿಂದ ಸುಮಾರು 80 ಎಕರೆ ಜಮೀನಿನ ರೈತರು ಕೃಷಿ ಚಟುವಟಿಕೆಗಳಿಗಾಗಿ ಬಳಸುತ್ತಿದ್ದಾರೆ. ಆದರೆ, ಇದೀಗ ಅದೇ ಗ್ರಾಮದ ಮಂಜುಳಾ ರಾಮಪ್ಪ ಚುಳಕಿ ಎಂಬುವರು ಈ ರಸ್ತೆಯು ತಮ್ಮ ಜಮೀನಿಗೆ ಸೇರಿದ್ದೆಂದು ವಾದಿಸುತ್ತಿದ್ದಾರೆ.
ರಸ್ತೆಯುದ್ದಕ್ಕೂ ಸುಮಾರು 6 ಅಡಿ ಎತ್ತರದ ತಡೆಗೋಡೆ (ವಡ್ಡು) ನಿರ್ಮಿಸಿ, ರೈತರು ಬಿತ್ತನೆ ಕಾರ್ಯ ಕೈಗೊಳ್ಳದಂತೆ ತಡೆಹಿಡಿದಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.ಗ್ರಾಮದ ಹಿರಿಯ ಮುಖಂಡರು ಹಲವು ಬಾರಿ ಮಂಜುಳಾ ಚುಳಕಿ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರೂ, ಅವರು ತಮ್ಮ ಹಠಮಾರಿ ಧೋರಣೆಯನ್ನು ಮುಂದುವರಿಸಿದ್ದಾರೆ. ಇದರಿಂದ ಬಿತ್ತನೆ ಹಂಗಾಮಿನ ಸಮಯದಲ್ಲಿ ಜಮೀನು ತಲುಪಲು ಸಾಧ್ಯವಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಸಮಸ್ಯೆಯಿಂದ ನೂರಾರು ರೈತರು ಆರ್ಥಿಕ ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿ, ದಶಕಗಳಿಂದ ಬಳಸುತ್ತಿರುವ ಹಾದಿಯನ್ನು ಮುಕ್ತಗೊಳಿಸಬೇಕು. ರೈತರಿಗೆ ತೊಂದರೆ ನೀಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅರುಣ್ ಇಡಗಲ್, ಹುಚ್ಚಪ್ಪ ಮಾದರ, ರಮೇಶ್ ಅಂಕಲಿ, ಬಸನಗೌಡ ಮುನೇನಕೊಪ್ಪ, ಈರಯ್ಯ ಮಠಪತಿ, ಮೈಲಾರಿ ಚಿಕ್ಕನವರ, ಫಕೀರ್ಪ ದೊಡ್ಡಮನಿ, ಬಂಡಿ ವಡ್ಡರ ಸೇರಿದಂತೆ ಗ್ರಾಮದ ಹಲವು ರೈತರು ಉಪಸ್ಥಿತರಿದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 