ಶಾಲಾ ಶಿಕ್ಷಕರ ಸಂಘದ ಚುನಾವಣೆ ವ್ಯವಸ್ಥೆ ಖಂಡಿಸಿ ದೂರು
Complaint condemning the election system of the school teachers' association
ಲೋಕದರ್ಶನ ವರದಿ
ಸಿಂದಗಿ 13: 2026 ರಿಂದ 31ರ ಅವಧಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸಿ ಸಂಘವು ಈಗ ಪ್ರಕಟಪಡಿಸುತ್ತಿರುವ ಮತದಾರರ ಪಟ್ಟಿಯಲ್ಲಿ ಸೇವೆಗೆ ಸೇರಿದಾಗಿನಿಂದ ಈ ತನಕ ಸದಸ್ಯತ್ವ ಕಟಾವಣೆಯಾಗಿದ್ದ ಸದಸ್ಯರ ಹೆಸರನ್ನು ಮತದಾರ ಪಟ್ಟಿಯಿಂದ ಕೈಬಿಡು ಹುನ್ನಾರ ನಡೆದಿದೆ ಎಂದು ತಿಳಿದು ಬಂದಿದೆ ಎಂದು ಶಿಕ್ಷಕಿ ಜಯಶ್ರೀ ಬೆಣ್ಣಿ ಆಕ್ರೋಶ ವ್ಯಕ್ತಪಡಿಸಿದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಾಥಮಿಕ ಶಿಕ್ಷಕ ಸಂಘ ಸಿಂದಗಿ ಘಟಕದ ನಿರ್ದೇಶಕ ಸ್ಥಾನಗಳ ಚುನಾವಣೆ ಘೋಷಣೆಯಾಗಿದೆ ಎಂದು ರಾಜ್ಯ ಚುಣಾವಣಾಧಿಕಾರಿ ಮೂಲಿಮನಿ ಆದೇಶ ಹೊರಡಿಸಿದ್ದಾರೆ. ಆದರೆ ನಾಮಪತ್ರ ಸಲ್ಲಿಸಲು ಕಛೇರಿಗೆ ತೆರಳಿದರೆ ಕಛೇರಿ ಬೀಗ ಹಾಕಿದ್ದು, ಚುನಾವಣಾಧಿಕಾರಿ ಯಾರೆಂಬು ಮಾಹಿತಿ ಇಲ್ಲ. ಇದರ ಕುರಿತಾಗಿ ಸಂಬಂಧಿಸಿದ ಜಿಲ್ಲಾ ಮತ್ತು ತಾಲೂಕು ಘಟಕಕ್ಕೆ ದೂರವಾಣಿ ಮೂಲಕ ಕರೆ ಮಾಡಿದರೆ ಅವರಿಂದ ಯಾವದೇ ಉತ್ತರ ಮಾತ್ರ ಸಿಕ್ಕಿಲ್ಲ. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೇ ಉದ್ದೇಶಪೂರ್ವಕವಾಗಿ ದುರುದ್ದೇಶದಿಂದ ರಾಜ್ಯ, ಜಿಲ್ಲಾ ಮತ್ತು ತಾಲೂಕು ಘಟಕಗಳು ಶ್ಯಾಮಿಲಾಗಿ ಚುನಾವಣೆಯಲ್ಲಿ ಶಿಕ್ಷಕರು ಭಾಗಿಯಾಗದಂತೆ ನಡೆದುಕೊಳ್ಳುತ್ತಿದ್ದಾರೆ. ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ, ರಾಜ್ಯ ಚುನಾವಣಾಧಿಕಾರಿ, ಜಿಲ್ಲಾಧ್ಯಕ್ಷ, ಜಿಲ್ಲಾ ಮತ್ತು ತಾಲೂಕು ಪ್ರಧಾನ ಕಾರ್ಯದರ್ಶಿಗಳನ್ನು ಠಾಣೆಗೆ ಕರೆಯಿಸಿ ನಮಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶ, ಮತದಾರರ ಪಟ್ಟಿ, ಚುನಾವಣೆ ಕಛೇರಿ, ಚುನಾವಣಾಧಿಕಾರಿ ನೇಮಕದ ವಿವರ ಮತ್ತು ಸಂಬಂಧಿಸಿದ ದಾಖಲೆಯನ್ನು ಕೊಡಿಸಬೇಕು ಎಂದು ಸಿಂದಗಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
ಈ ವೇಳೆ ಶಿಕ್ಷಕ ಸಿ.ಬಿ.ಗಡಗಿ, ಶೋಭಾ ಚಿಗರಿ, ಬಸಯ್ಯ ಹಿರೇಮಠ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ರಾಯಪ್ಪ ಇವಣಿಗಿ, ಆಯ್.ಎಂ.ಎಲಿಗಾರ, ಎಸ್.ಎಮ್.ಕೂಡಗಿ, ಬಿ.ಎಸ್.ಹಿರೇಮಠ, ಎಂ.ಎಸ್.ಕಟಕದೊಂಡ, ಎಸ್.ಎಂ.ಮಸಳಿ, ಸುನಂದಾ ನಾರಾಯಣಕರ, ಶ್ರೀಶೈಲ ರೋಡಗಿ, ಗಂಗಾಧರ ತಾವರಖೇಡ, ಕಾಶೀನಾಥ ಪಾಟೀಲ, ನಾಗೇಶ ನಾಗೂರ, ಜಿ.ಎನ್.ನಡಕೂರ, ರೇವಣಸಿದ್ದ ಹೂಗಾರ ಸೇರಿದಂತೆ ಅನೇಕರು ಇದ್ದರು.
ಮತದಾರ ಪಟ್ಟಿಯನ್ನು ತಾಲೂಕು ಕಾರ್ಯದರ್ಶಿಗಳ ಮೂಲಕ ಈಗಾಗಲೇ ಕಳುಹಿಸಲಾಗಿದೆ. ಅದರ ಮಾಹಿತಿ ಇನ್ನು ರಾಜ್ಯ ಘಟಕದಿಂದ ನಮಗೆ ಬಂದಿಲ್ಲ. ಬಂದರೆ ಅದಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ. ಇದಕ್ಕೆ ಸಂಬಂಧಿತ ವಿಷಯ ರಾಜ್ಯ ಚುನಾವಣಾಧಿಕಾರಿಗಳ ಗಮನಕ್ಕೆ ಪತ್ರ ರವಾನೆ ಮಾಡುತ್ತೇನೆ.
ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ: ಆನಂದ ಭೂಸನೂರ
ಕೋಟ್ಸ್: ಸಿಎಂ ಸಿದ್ದರಾಮಯ್ಯ ಅವರು ನಮ್ಮ ಸಂಬಂಧಿಕರು, ಆಪ್ತರು ಮತ್ತು ನಮ್ಮ ಸಮಾಜದವರು ನಮ್ಮ ಮಾತು ಅವರು ಕೇಳುತ್ತಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ಅವರು ನಮ್ಮನ್ನು ಹೆದರಿಸುವ ಜೊತೆಗೆ ನಿಮ್ಮನ್ನು ಎಲ್ಲಿ ಇಡಬೇಕು ಅಲ್ಲಿ ಇಡಲಾಗುವುದು ಎಂದು ಧಮಕಿ ಹಾಕುತ್ತಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ಇದನ್ನು ಗಮನಿಸಿ ತನಿಖೆ ಮಾಡಬೇಕು ಎಂಬುದು ಆಗ್ರಹ.
ಶಿಕ್ಷಕಿ: ಜಯಶ್ರೀ ಬೆಣ್ಣಿ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 