ಅಪಘಾತ ವಿಮೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ
Compensation distribution to the family of the deceased under accident insurance
ಲೋಕದರ್ಶನ ವರದಿ
ಮಾಂಜರಿ 23: ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷ ಹಾಗೂ ಪದ್ಮಶ್ರೀ ಡಾ. ಪ್ರಭಾಕರ್ ಕೋರೆಯುವರು ಸಹಕಾರಿ ಸಂಘದಲ್ಲಿ ಸ್ಥಾಪಿಸಿರುವ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಡಾ ಪ್ರಭಾಕರ್ ಕೋರೆ ಕೋ ಆಪ್ ಕ್ರೆಡಿಟ್ ಸೊಸೈಟಿಯ ಮುಖಾಂತರ ಸದಸ್ಯರ ಹಿತಕ್ಕಾಗಿ ಹಲವಾರು ಜನಪರ ಯೋಜನೆಗಳನ್ನು ರೂಪಿಸಲಾಗಿದ್ದು ಈ ಯೋಜನೆಯ ಸುದೂಪಯೋಗ ಪಡೆದುಕೊಂಡು ಸದಸ್ಯರು ಆರ್ಥಿಕವಾಗಿ ಬಲಿಷ್ಠರಾಗಬೇಕೆಂದು ಡಾ ಪ್ರಭಾಕರ್ ಕೋರೆ ಕೋ ಆಫ್ ಕ್ರೆಡಿಟ್ ಸೊಸೈಟಿಯ ಚಿಂಚಲಿ ಶಾಖೆಯ ಅಧ್ಯಕ್ಷರಾದ ಜಗನ್ನಾಥ್ ಪಾಟೀಲ್ ಹೇಳಿದರು.
ಅವರು ಶನಿವಾರದಂದು ಡಾ. ಪ್ರಭಾಕರ ಕೋರೆ ಕೋ ಆಪ್ ಕ್ರೆಡಿಟ್ ಸೊಸಾಯಿಟಿ.,ನಿಯಮಿತ ಅಂಕಲಿ. (ಬಹುರಾಜ್ಯ) ವತಿಯಿಂದ ಮಾಡಿಸಿದ ಸದಸ್ಯರ ಅಪಘಾತ ವಿಮೆಯಲ್ಲಿ ಮೃತರಾದ ಚಿಂಚಲಿ ಶಾಖೆಯ ಸದಸ್ಯರಾದ ದಿ. ಬಸಪ್ಪಾ ಮಾರುತಿ ಖಿಲಾರೆ ಇವರ ಸರಳ ವಾರಸದಾರರಿಗೆ ಸ್ಥಾನಿಕ ಸಲಹಾ ಸಮಿತಿ ಸಮ್ಮುಖದಲ್ಲಿ 100000.00 ರೂಪಾಯಿ ಅಪಘಾತ ವಿಮೆ ಪರಿಹಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಚಿಂಚಲಿ ಶಾಖಾ ಸಲಹಾ ಸಮಿತಿ ಅಧ್ಯಕ್ಷರು ಜಗನ್ನಾಥ ಪಾಟೀಲ, ವಸಂತ ಕರಾಕಾಯಿ, ಬಾಬು ನಿಂಗನೂರೆ, ಅಂಕುಶ ಜಾದವ, ಗುರುಲಿಂಗ ಕುಂಬಾರ, ಭಾಗಪ್ಪ ಚೌಗುಲೆ, ಜಾಕಿರಹುಸೇನ್ ಬಿಚ್ಚು, ವ್ಯವಸ್ಥಾಪಕ ನಿರ್ದೇಶಕರು ದೇವೇಂದ್ರ ಕರೋಶಿ, ವಿಮೆ ಅಧಿಕಾರಿ ರಾವಸಾಹೇಬ ಗುಂಡಕಲ್ಲೆ ಶಾಖಾ ವ್ಯವಸ್ಥಾಪಕ ಪ್ರದೀಪ ಬಿಳ್ಳೂರೆ ಅವರು ಉಪಸ್ಥಿತರಿದ್ದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 