ನವದೆಹಲಿ, ಜೂ 14,ಕೋವಿಡ್-೧೯ ಸೋಂಕು ಹಿನ್ನೆಲೆಯಲ್ಲಿ ಕಂಪನಿ ಸೆಕ್ರಟರಿ ಕೋರ್ಸ್‌ಗಳಿಗೆ ಸಂಸ್ಥೆಯು ಜೂನ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಗಸ್ಟ್ ೧೮ರವರೆಗೆ ಮುಂದೂಡಲಾಗಿದೆ. ಜುಲೈ 6 ರಿಂದ 16ರವರೆಗೆ ಪರೀಕ್ಷೆಗೆ ಇನ್ಸಿಟ್ಯೂಟ್ ಆಫ್ ಕಂಪೆನೀಸ್ ಸೆಕ್ರೇಟರಿ ಸಂಸ್ಥೆ ವೇಳಾ ಪಟ್ಟಿ ಪ್ರಕಟಿಸಿತ್ತು. ಈ ಪರೀಕ್ಷೆಗಳನ್ನು ಆಗಸ್ಟ್ ೧೮ರಿಂದ ೨೮ರವರೆಗೆ ನಡೆಸಲಾಗುತ್ತಿದೆ. ಭಾರತೀಯ ಕಂಪನಿ ಸೆಕ್ರಟರೀಸ್ ಸಂಸ್ಥೆಯು ಜೂನ್ ನಲ್ಲಿ ಫೌಂಡೇಶನ್ ಪ್ರೋಗ್ರಾಮ್, ಎಕ್ಸಿಕ್ಯೂಟಿವ್ ಪ್ರೋಗ್ರಾಮ್, ಪ್ರೊಫೇಷನಲ್ ಪ್ರೋಗ್ರಾಮ್ ಹಾಗೂ ಪೋಸ್ಟ್ ಮೆಂಬರ್‌ಶಿಪ್ ಕ್ವಾಲಿಫಿಕೇಶನ್ ಕೋರ್ಸ್ ಗಳಿಗೆ ಪರೀಕ್ಷೆ ನಡೆಯಬೇಕಾಗಿತ್ತು.