ಸಮುದಾಯ ಭವನಗಳು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ವೇದಿಕೆಗಳಾಗಲಿ: ಶಾಸಕ ಕಾಗೆ

ಸಮುದಾಯ ಭವನಗಳು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ವೇದಿಕೆಗಳಾಗಲಿ: ಶಾಸಕ ಕಾಗೆ  Community halls should become platforms for the all-round development of society: MLA Kage

ಕಾಗವಾಡ 17: ಸಮುದಾಯ ಭವನಗಳು ಕೇವಲ ಜಾತ್ರೆ, ಧಾರ್ಮಿಕ ಕಾರ್ಯಕ್ರಮಕ್ಕೆ ಸಿಮೀತವಾಗದೆ, ಧಾರ್ಮಿಕ ಚಟುವಟಿಕೆಗಳ ಜೊತೆಗೆ ಆಯಾ ಸಮುದಾಯದ ಮಹಿಳೆಯರ ಆರ್ಥಿಕ ಸಾವಲಂಬನೆಗಾಗಿ ಸ್ವಯಂ ಉದ್ಯೋಗ ಶಿಬಿರಗಳನ್ನು ಹಮ್ಮಿಕೊಂಡು, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ವೇದಿಕೆಗಳಾಗಬೇಕೆಂದು ಶಾಸಕ ರಾಜು ಕಾಗೆ ಸಲಹೆ ನೀಡಿದರು.  

ಅವರು ಗುರುವಾರ ದಿ. 17 ರಂದು ತಾಲೂಕಿನ ಐನಾಪೂರ ಪಟ್ಟಣದ ಪದ್ಮಾವತಿ ಸಮುದಾಯ ಭವನ, ವಾಲ್ಮೀಕಿ ಸಮುದಾಯ ಭವನ ಹಾಗೂ ಮೋಳೆ ಗ್ರಾಮದ ಕೋಳೆಕರ ಓಣಿಯ ಸಮುದಾಯ ಭವನ, ಶಿವ ಬಸವ ಭಜನಾ ಮಂಡಳದ ಸಮುದಾಯ ಭವನಗಳಿಗೆ ತಲಾ ಇಪ್ಪತ್ತು ಲಕ್ಷ ರೂಪಾಯಿಗಳಂತೆ ಪಂಚಾಯತ ರಾಜ್ಯ ಇಲಾಖೆ ವತಿಯಿಂದ ಮಂಜೂರಾದ ನಾಲ್ಕು ಸಮುದಾಯ ಭವನಗಳ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ, ಮಾತನಾಡುತ್ತಿದ್ದರು. 

 ಕಳೆದ ಸುಮಾರು ಮೂವತ್ತು ವರ್ಷಗಳಲ್ಲಿ ಶಾಸಕನಾಗಿ ಕ್ಷೇತ್ರದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಮುದಾಯ ಭವನಗಳ ನಿರ್ಮಾಣ ಮಾಡಿದ್ದೇನೆ. ಇನ್ನೂ ಸುಮಾರು ಸಮುದಾಯ ಭವನಗಳ ಬೇಡಿಕೆ ಇದ್ದು, ಹಂತ ಹಂತವಾಗಿ ಅವುಗಳನ್ನು ಪೂರ್ಣಗೊಳಿಸಲಾಗುವುದು, ಇಷರಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕರಿಗೆ 50 ಕೋಟಿ ವಿಶೇಷ ಅನುದಾನ ನೀಡಲಿದ್ದು, ಅದರಲ್ಲಿ ರೈತರು ಬೆಳೆದ ಬೆಳಗಳನ್ನು ಸಾಗಿಸಲು ಅನುಕೂಲವಾಗಲು ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.  

ವಾಲ್ಮೀಕಿ ಸಮುದಾಯ ಭವನಕ್ಕೆ ಭೂ ದಾನ ನೀಡಿದ ಸಿದರಾಮ ಕುಡಚಿ ಅವರಿಗೆ ಶಾಸಕ ರಾಜು ಕಾಗೆ ಸನ್ಮಾನಿಸಿದರು.  

ಇಂಜಿನಿಯರ್ ಮಡಿವಾಳಪ್ಪ ಪಾಟೀಲ, ಮುಖಂಡರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜು ಭಿರಡಿ, ವಿನೋದ ಕೋಳೆಕರ, ಹಣಮಂತ ಬಣಜೋಡ, ಸತೀಶ ಯಂಡೋಲಿ, ರಾಜು ಕನಾಳೆ, ಧರ್ಮಾಜಿ ಕೋಳೆಕರ, ಬಸವರಾಜ ಮುದವಿ, ಶಂಕರ ಮಗದುಮ್ಮ, ಬಾಳು ನರಟ್ಟಿ, ಅಪ್ಪಾಸಾಬ ಪಾಟೀಲ, ಅಶೋಕ ಹುಗ್ಗಿ, ಶಿವಾನಂದ ಮಡಿವಾಳರ, ಸುನೀಲ ಚಮಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.